Advertisement
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದರ ವರ್ತನೆ ನೋಡಿದರೆ ಪ್ರಜಾಪ್ರಭುತ್ವದಲ್ಲಿ ಅವರಿಗೆ ನಂಬಿಕೆ ಇಲ್ಲವಾಗಿದೆ ಎಂದೆನಿಸುತ್ತಿದೆ. ಸಂಸತ್ ಅಧಿವೇಶದಲ್ಲಿ ವಿನಾಕಾರಣ ಗಲಾಟೆ ಮಾಡುವುದು, ಸಚಿವರ ಮೇಲೆ ಹಲ್ಲೆಗೆ ಮುಂದಾಗಿರುವ ಕಾಂಗ್ರೆಸ್‌ನವರ ವರ್ತನೆ ಗಮನಿಸಿದರೆ ಅವರು ನೈತಿಕವಾಗಿ ಅಧಃಪತನಗೊಂಡು, ಹತಾಶೆಗೊಂಡಿದ್ದಾರೆ ಎಂದೆನಿಸುತ್ತಿದೆ. ದೇಶದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ದಯನಿಯ ಸ್ಥಿತಿಯಲ್ಲಿದೆ. ಮಹಾರಾಷ್ಟ್ರ, ಝಾರ್ಖಂಡ್ ಇನ್ನಿತರ ಕಡೆಗಳಲ್ಲಿ ಅತ್ಯಂತ ಸಣ್ಣ ಪಕ್ಷಗಳಿಗೆ ಬೆಂಬಲ ನೀಡಿ ಸರಕಾರದಲ್ಲಿ ಎರಡು-ಮೂರನೇ ಪಾಲುದಾರ ಪಕ್ಷವಾಗುವ ಸ್ಥಿತಿ ಬಂದೊದಗಿದೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ತಮ್ಮ ಸ್ಥಾನಗಳನ್ನೇ ತ್ಯಾಗ ಮಾಡಿ, ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಅವುಗಳನ್ನು ನೀಡಿಯಾಗಿದೆ. ಪಕ್ಷದಲ್ಲಿನ ಅನೇಕ ಹಿರಿಯ ಶಾಸಕರಿಗೂ ಸಚಿವ ಸ್ಥಾನ ಸಿಗಬೇಕಾಗಿದೆ. ಆ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದರು. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಣ್ಣಪುಟ್ಟ ಅಸಮಾಧಾನಗಳಿದ್ದರೆ ರಾಜ್ಯ ಘಟಕ ಮತ್ತು ಮುಖ್ಯಮಂತ್ರಿ ಸರಿಪಡಿಸಲಿದ್ದಾರೆ ಎಂದರು.