Advertisement

ಕೋವಿಡ್ ತಡೆಗೆ ರಾಜ್ಯಕ್ಕೆ 800 ಮೆಟ್ರಿಕ್‌ ಟನ್‌ ಆಕ್ಸಿಜನ್‌: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

09:26 PM Apr 25, 2021 | Team Udayavani |

ಧಾರವಾಡ: ಕೇಂದ್ರ ಸರ್ಕಾರ ಶನಿವಾರವಷ್ಟೇ ರಾಜ್ಯಕ್ಕೆ ಅಂದಾಜು 800 ಮೆಟ್ರಿಕ್‌ ಟನ್‌ ವೈದ್ಯಕೀಯ ಆಕ್ಸಿಜನ್‌ ಹಾಗೂ 1.22 ಲಕ್ಷ ವಯಲ್ಸ್‌ ರೆಮ್‌ಡೆಸಿವಿಯರ್‌ ಚುಚ್ಚುಮದ್ದು ಕಳುಹಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ತಡೆಗೆ ಕೇಂದ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಆಕ್ಸಿಜನ್‌ ಕೊರತೆ ನೀಗಿಸಲು ಏರ್‌ಲಿಫ್ಟ್‌ ಮೂಲಕ ಆಕ್ಸಿಜನ್‌ ತರಲಾಗುತ್ತಿದೆ. ಏರ್‌ಲಿಫ್ಟ್‌, ವಿಶೇಷ ರೈಲಿನ ಮೂಲಕವೂ ಆಕ್ಸಿಜನ್‌ ಸರಬರಾಜು ಕಾರ್ಯ ನಡೆಯುತ್ತಿದೆ.

ಮೊಬೈಲ್‌ ಆಕ್ಸಿಜನ್‌ ಘಟಕಗಳನ್ನು ಜರ್ಮನಿಯಿಂದ ತರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕೋವಿಡ್‌ ಸುರಕ್ಷಾ ಸಾಮಗ್ರಿ-ಔಷಧಗಳ ಮೇಲೆ ಕಸ್ಟಮ್‌ ತೆರಿಗೆಯನ್ನು ಮುಂದಿನ ಆರು ತಿಂಗಳ ಅವಧಿಗೆ ಈಗಾಗಲೇ ಸಂಪೂರ್ಣ ವಿನಾಯಿತಿ ನೀಡಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಎಂದರು.

ಇದನ್ನೂ ಓದಿ :ಕೋವಿಡ್ ನಿರ್ವಹಣೆಗೆ ಸಂಪೂರ್ಣ ಸಹಕಾರ : ರಾಜ್ಯ ಸರಕಾರಕ್ಕೆ ಕೇಂದ್ರದ ಭರವಸೆ

ರಾಜ್ಯ ಸೇರಿ ಇಡೀ ದೇಶದಲ್ಲಿ ಕೊರೊನಾದ 2ನೇ ಅಲೆ ಜೋರಾಗಿ ಹರಡುತ್ತಿದೆ. ಇದರ ತಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಜತೆಗೆ ಸಾರ್ವಜನಿಕರು ಕೂಡ ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಬಳ್ಳಾರಿಯಿಂದ ಆಕ್ಸಿಜನ್‌ ರಾಜ್ಯ ಸೇರಿ ಧಾರವಾಡ ಜಿಲ್ಲೆಗೆ ದೊರೆಯುತ್ತಿದೆ. ಅದರಲ್ಲಿ ಯಾವುದೇ ಕೊರತೆ ಇಲ್ಲ. ಜನರು ಭಯ ಪಡುವ ಅವಶ್ಯಕತೆ ಇಲ್ಲ. ಧಾರವಾಡ ಜಿಲ್ಲೆಯಲ್ಲಿ 150 ವೆಂಟಿಲೇಟರ್‌ ಸಂಗ್ರಹವಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next