Advertisement

ಗೋಡ್ಸೆ ದೇಶಭಕ್ತ ಎಂದು ಹೇಳಿ, ಅನಂತರ ಕ್ಷಮೆ ಕೇಳಿದ ಪ್ರಜ್ಞಾ

01:21 AM May 17, 2019 | mahesh |

ಮಹಾತ್ಮ ಗಾಂಧಿಯ ಹಂತಕ ನಾಥೂರಾಮ್‌ ಗೋಡ್ಸೆ ದೇಶಭಕ್ತ ಎಂದು ಹೇಳುವ ಮೂಲಕ ಭೋಪಾಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್‌ ಠಾಕೂರ್‌ ವಿವಾದ ಎಬ್ಬಿಸಿದ್ದಾರೆ. ಈ ಹೇಳಿ ಕೆಗೆ ಭಾರೀ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅವರು ಕ್ಷಮೆ ಕೋರಿ, ಹೇಳಿಕೆಯನ್ನು ಹಿಂಪಡೆದಿದ್ದಾರೆ. ಇನ್ನೊಂ ದೆಡೆ ಬಿಜೆಪಿ ಈ ಹೇಳಿಕೆಯಿಂದ ಅಂತರ ಕಾಯ್ದು ಕೊಂಡಿದೆ. ಕಳೆದ ಒಂದು ತಿಂಗಳಲ್ಲಿ 3ನೇ ಬಾರಿಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಜ್ಞಾ ಕ್ಷಮೆ ಕೋರಿದ್ದಾರೆ.

Advertisement

ಮಧ್ಯಪ್ರದೇಶದಲ್ಲಿ ಸುದ್ದಿವಾಹಿನಿಗೆ ಗುರುವಾರ ಸಂದರ್ಶನ ನೀಡಿದ ಪ್ರಜ್ಞಾ, ನಾಥೂರಾಮ್‌ ಗೋಡ್ಸೆ ದೇಶಭಕ್ತನಾಗಿದ್ದ. ಆತ ಎಂದಿಗೂ ದೇಶ ಭಕ್ತನೇ ಆಗಿರುತ್ತಾನೆ. ಆತನನ್ನು ಉಗ್ರ ಎಂದು ಹೇಳು ವವರಿಗೆ ಚುನಾವಣೆಯಲ್ಲಿ ಜನರು ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ ಎಂದಿದ್ದರು. ಸ್ವತಂತ್ರ ಭಾರತದ ಪ್ರಥಮ ಉಗ್ರ ಹಿಂದೂ ಆಗಿದ್ದು, ಆತನೇ ಗೋಡ್ಸೆ ಎಂಬ ನಟ ಕಮಲ್‌ ಹಾಸನ್‌ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಪ್ರಜ್ಞಾ ಈ ಹೇಳಿಕೆ ನೀಡಿದ್ದರು. ಈ ಬಗ್ಗೆ ಅನಂತರ ಪ್ರತಿಕ್ರಿಯೆ ನೀಡಿದ ಪ್ರಜ್ಞಾ ಸಿಂಗ್‌ ವಕ್ತಾರ ಹಿತೇಶ್‌ ಬಾಜ್ಪೆ„, ಪ್ರಜ್ಞಾ ಈ ಬಗ್ಗೆ ಕ್ಷಮೆ ಕೋರಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಪ್ರತಿಕ್ರಿಯಿ ಸಿದ ರಾಜ್ಯ ಬಿಜೆಪಿ ಉಸ್ತುವಾರಿ ಲೋಕೇಂದ್ರ ಪ್ರಸಾದ್‌, ಅವರ ಹೇಳಿಕೆಯನ್ನು ಬಿಜೆಪಿ ಸಮ್ಮತಿ ಸುವುದಿಲ್ಲ. ಯಾವ ಸನ್ನಿವೇಶದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಅವರೊಂದಿಗೆ ಮಾತನಾಡಲಿದ್ದೇವೆ. ಮಹಾತ್ಮ ಗಾಂಧಿ ಹತ್ಯೆಗೈದವನು ದೇಶಭಕ್ತನಾಗಲಾರ. ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದಿದ್ದರು.

ಪ್ರಧಾನಿ ಕ್ಷಮೆ ಕೋರಲಿ: ದಿಗ್ವಿಜಯ್‌ ಸಿಂಗ್‌
ಪ್ರಜ್ಞಾ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕ್ಷಮೆ ಕೇಳ ಬೇಕು ಎಂದು ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಆಗ್ರಹಿಸಿದ್ದಾರೆ. ಗೋಡ್ಸೆಯನ್ನು ಹೊಗಳುವುದು ದೇಶಭಕ್ತಿಯಲ್ಲ. ಅದು ದೇಶದ್ರೋಹ. ಮಹಾತ್ಮ ಗಾಂಧಿ ಬಗ್ಗೆ ಆಡಿದ ಮಾತುಗಳನ್ನು ನಾನು ಖಂಡಿಸುತ್ತೇನೆ ಎಂದು ಸಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next