ಸಾಗರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏ. 14ರಂದು ಉದ್ಘಾಟಿಸಿದ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ ತಾಲೂಕಿನ ತುಮರಿಯ ಹಿರಿಯ ಛಾಯಾಗ್ರಾಹಕ ಟಿ.ಎಂ.ಶ್ರೀಧರ ಅವರ ಛಾಯಾಚಿತ್ರಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿದೆ.
ಹಿಂದಿನ ಪ್ರಧಾನಮಂತ್ರಿಗಳ ಸಂಪೂರ್ಣ ವಿವರ, ಅವರೆಲ್ಲ ಸಾಗಿ ಬಂದ ಹಾದಿ, ಬಳಸಿದ ವಸ್ತುಗಳ ಸಂಗ್ರಹಾಲಯ ಇದಾಗಿದ್ದು, ನವದೆಹಲಿಯ ತೀನ್‌ಮೂರ್ತಿ ಮಾರ್ಗ್‌ನಲ್ಲಿ ಸಜ್ಜುಗೊಳಿಸಲಾಗಿದೆ. ಇಂತಹ ಸಂಗ್ರಹಾಲಯದಲ್ಲಿ ಟಿಎಂ.ಶ್ರೀಧರ ಕ್ಲಿಕ್ಕಿಸಿರುವ ಮಾಜಿ ಪ್ರಧಾನಿ ಚಂದ್ರಶೇಖರ ಅವರ ಭಾರತ ಯಾತ್ರೆಯ ದೃಶ್ಯಾವಳಿಗಳ 15 ಛಾಯಾಚಿತ್ರಗಳನ್ನು ಜೋಡಿಸಲಾಗಿದೆ.
ಈ ಕುರಿತು ಟಿ.ಎಂ.ಶ್ರೀಧರ ಮಾತನಾಡಿ, 40 ವರ್ಷಗಳ ಐತಿಹಾಸಿಕ ಘಟನೆಯನ್ನು ದಾಖಲಿಸಿದ ಛಾಯಾಚಿತ್ರಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಪ್ರದರ್ಶನ ವ್ಯವಸ್ಥೆ ನನಗೆ ಸಂತೋಷ ತಂದಿದೆ. ಉದ್ಘಾಟನೆಯ ಸಂದರ್ಭ ಕಾರ‍್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರಕಿದೆ. ಸಂಗ್ರಹಾಲಯದ ಪರಿಕಲ್ಪನೆ ಅರ್ಥಪೂರ್ಣವಾಗಿದ್ದು, ನನ್ನ ಯತ್ನಕ್ಕೆ ಸಹ ಅವಕಾಶ ಸಿಕ್ಕಿದೆ ಎಂದರು.
ಇದನ್ನೂ ಓದಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದ ತಾಲೂಕು ಹೋರಾಟಗಾರರು