ನವ ದೆಹಲಿ : ಭಾರತೀಯ ಯುವಜನರಿಗೆ ಉದ್ಯಮಾಧಾರಿತ ಕೌಶಲ್ಯ ತರಬೇತಿಯನ್ನುಪಡೆಯಲು ಅನುವು ಮಾಡಿಕೊಡುತ್ತದೆ ಹಾಗೂ ಉತ್ತಮ ಜೀವನೋಪಾಯವನ್ನು ಹೊಂದಲು ಸಹಾಯ ಮಾಡುವ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಧಾನಿ ಮಂತ್ರಿ ಕೌಶಲ ವಿಕಾಸ್ ಯೋಜನೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಗಾಂಧಿ, ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಅಂದರೆ, ಭಾಷಣಗಳಲ್ಲಿ ಪ್ರಧಾನಿಯವರ ಕೌಶಲ್ಯ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಅನಂತ ಬದುಕಿನ ಚಿತ್ರಣ: ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಅನಂತನಾಗ್ ಸಿನಿಜೀವನದ ಸಾಕ್ಷ್ಯಚಿತ್ರ
ದೇಶದ ಯುವಕರಿಗೆ ಉದ್ಯಮಾಧಾರಿತ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶದಿಂದ ಆರಂಭವಾದ ಮೋದಿ ನೇತೃತ್ವದ ಸರ್ಕಾರ ಈ ಯೋಜನೆಗೆ ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಶೇಕಡಾ 50 ರಷ್ಟು ಯುವಕರಿಗೂ ಪ್ರಯೋಜನವಾಗಿಲ್ಲ ಎಂಬ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಮಾಡಿದ ವರದಿಯ ತುಣಕ್ಕೊಂದನ್ನು ಪೋಸ್ಟ್ ಮಾಡುವುದರ ಮೂಲಕ ಅವರು ಟೀಕೆ ಮಾಡಿದ್ದಾರೆ.
ಇದು ಅಭಿವೃದ್ಧಿಯ ಹೆಸರಿನಲ್ಲಿ ನಡೆಸುತ್ತಿರುವ ಮೋಸ. ಸರ್ಕಾರದ ‘ರೋಜ್‌ಗರ್ ಮಿಟಾಓ’ ಯೋಜನೆ ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಕಾಸರಗೋಡಿನಲ್ಲೂ ಕಟ್ಟುನಿಟ್ಟು : ಸೋಂಕಿತರು ಇನ್ನು ಮನೆಯಲ್ಲಿರುವಂತಿಲ್ಲ