Advertisement

ಜನಧನ ಯೋಜನೆಗೆ 3 ವರ್ಷ: ಪ್ರಧಾನಿ ಅಭಿನಂದನೆ

07:25 AM Aug 29, 2017 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ತರ ಯೋಜನೆಗಳಲ್ಲೊಂದಾದ ಜನ ಧನ ಯೋಜನೆ ಜಾರಿಯಾಗಿ ಸೋಮ ವಾರಕ್ಕೆ ಮೂರು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ ಮೂಲಕ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

Advertisement

“ಇಂದು ಜನ ಧನ ಯೋಜನೆ 3 ವರ್ಷ ಮುಗಿಸಿದೆ. ನಾನು ಬಡವರನ್ನು ಅದರಲ್ಲೂ ಈ ಯೋಜನೆ ಲಾಭ ಪಡೆದವರನ್ನು ಅಭಿನಂದಿಸುತ್ತೇನೆ’ ಎಂದು ಅವರು ಟ್ವೀಟಿಸಿದ್ದಾರೆ. ದೇಶದ ಬಡವರ ಜೀವನದಲ್ಲಿ ಗುಣಾತ್ಮಕ ಮತ್ತು ಪರಿವರ್ತನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಇನ್ನಷ್ಟು ಹುರುಪಿನಿಂದ ನಡೆಯಲಿದೆ. ಜನಧನ, ಮುದ್ರಾ ಯೋಜನೆ, ಸ್ಟಾಂಡ್‌ ಅಪ್‌ ಇಂಡಿಯಾ ಯೋಜನೆಗಳ ಮೂಲಕ ದೇಶದ ಸಹಸ್ರಾರು ಮಂದಿಯ ಕನಸುಗಳಿಗೆ ರೆಕ್ಕೆ ಮೂಡಿದೆ ಎಂದಿದ್ದಾರೆ. ಕಡು ಬಡವರು ಮತ್ತು ತುಳಿತಕ್ಕೊಳಗಾದ ಜನರು ಆರ್ಥಿಕ ಮುಖ್ಯವಾಹಿನಿಗೆ ಬರುವಂತೆ ಜನಧನ ಯೋಜನೆ ಮಾಡಿದ್ದು ಐತಿಹಾಸಿಕ ಬೆಳವಣಿಗೆ. ಇದರಿಂದಾಗಿ ಅವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next