Advertisement

ಇಂಗ್ಲೆಂಡ್‌ಗೆ ಅಫ್ಘಾನ್‌ ಸುಲಭ ತುತ್ತು

12:47 AM May 28, 2019 | Sriram |

ಲಂಡನ್‌: ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 12 ರನ್ನುಗಳಿಂದ ಸೋತಿದ್ದ ಆತಿಥೇಯ ಇಂಗ್ಲೆಂಡ್‌ ಸೋಮವಾರದ 2ನೇ ಮುಖಾಮುಖೀಯಲ್ಲಿ ಅಫ್ಘಾನಿಸ್ಥಾನವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿದೆ.

Advertisement

“ಕೆನ್ನಿಂಗ್ಟನ್‌ ಓವಲ್‌’ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 38.4 ಓವರ್‌ಗಳಲ್ಲಿ 160 ರನ್ನುಗಳಿಗೆ ಕುಸಿಯಿತು. ಜವಾಬಿತ್ತ ಇಂಗ್ಲೆಂಡ್‌ ಟಿ20 ಶೈಲಿಯಲ್ಲಿ ಬ್ಯಾಟ್‌ ಬೀಸುತ್ತ 17.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 161 ರನ್‌ ಬಾರಿಸಿತು. ಮೊದಲ ಅಭ್ಯಾಸ ಪಂದ್ಯದಲ್ಲಿ ಅಫ್ಘಾನಿಸ್ಥಾನ 3 ವಿಕೆಟ್‌ಗಳಿಂದ ಪಾಕಿಸ್ಥಾನವನ್ನು ಮಣಿಸಿತ್ತು.

ಇಂಗ್ಲೆಂಡ್‌ ಚೇಸಿಂಗ್‌ ವೇಳೆ ಆರಂಭಕಾರ ಜಾಸನ್‌ ರಾಯ್‌ ಆಕ್ರಮಣಕಾರಿ ಆಟಕ್ಕಿಳಿದರು. 46 ಎಸೆತಗಳಿಂದ ಅಜೇಯ 89 ರನ್‌ ಬಾರಿಸಿ ಅಫ್ಘಾನ್‌ ಬೌಲರ್‌ಗಳಿಗೆ ಬೆವರಿಳಿಸಿದರು. ಸಿಡಿಸಿದ್ದು 11 ಬೌಂಡರಿ, 4 ಸಿಕ್ಸರ್‌. ಜಾನಿ ಬೇರ್‌ಸ್ಟೊ 39 ರನ್‌ ಹೊಡೆದರು. ಜೋ ರೂಟ್‌ ಗಳಿಕೆ ಅಜೇಯ
29 ರನ್‌.

ಅಫ್ಘಾನಿಸ್ಥಾನಕ್ಕೆ ಬೌಲಿಂಗ್‌ ಬಿಸಿ ಮುಟ್ಟಿಸಿದವರು ಜೋಫ‌Å ಆರ್ಚರ್‌ ಮತ್ತು ಜೋ ರೂಟ್‌. ಇಬ್ಬರೂ 3 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌:
ಅಫ್ಘಾನಿಸ್ಥಾನ-38.4 ಓವರ್‌ಗಳಲ್ಲಿ 160 (ನಬಿ 44, ನೂರ್‌ ಅಲಿ ಜದ್ರಾನ್‌ 30, ಆರ್ಚರ್‌ 32ಕ್ಕೆ 3, ರೂಟ್‌ 22ಕ್ಕೆ 3). ಇಂಗ್ಲೆಂಡ್‌-17.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 161 (ರಾಯ್‌ ಔಟಾಗದೆ 89, ಬೇರ್‌ಸ್ಟೊ 39, ರೂಟ್‌ ಔಟಾಗದೆ 29, ನಬಿ 34ಕ್ಕೆ 1).

Advertisement

ಆಸೀಸ್‌ಗೆ 240 ರನ್‌ ಸವಾಲು
ಸೌತಾಂಪ್ಟನ್‌: ಸೋಮವಾರದ ಇನ್ನೊಂದು ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಶ್ರೀಲಂಕಾ 8 ವಿಕೆಟಿಗೆ 239 ರನ್‌ ಗಳಿಸಿದೆ.

ಲಂಕಾ ಆರಂಭಕಾರ ಲಹಿರು ತಿರಿಮನ್ನೆ ಸರ್ವಾಧಿಕ 56 ರನ್‌ ಮಾಡಿದರು (69 ಎಸೆತ, 7 ಬೌಂಡರಿ). ಕೊನೆಯಲ್ಲಿ ಧನಂಜಯ ಡಿ ಸಿಲ್ವ 43 ರನ್‌, ತಿಸರ ಪೆರೆರ 27 ರನ್‌ ಹೊಡೆದು ತಂಡದ ಮೊತ್ತವನ್ನು ವಿಸ್ತರಿಸಿದರು. ಇವರಿಬ್ಬರ 7ನೇ ವಿಕೆಟ್‌ ಜತೆಯಾಟದಲ್ಲಿ 64 ರನ್‌ ಒಟ್ಟುಗೂಡಿತು. ಮಧ್ಯಮ ಕ್ರಮಾಂಕದ ಕುಸಲ್‌ ಮೆಂಡಿಸ್‌ ಗಳಿಕೆ 24 ರನ್‌.
ಆಸ್ಟ್ರೇಲಿಯ ಪರ ಆ್ಯಡಂ ಝಂಪ 39 ರನ್ನಿತ್ತು 2 ವಿಕೆಟ್‌ ಉರುಳಿಸಿದರು. ಉಳಿದಂತೆ 6 ಮಂದಿ ಬೌಲರ್‌ಗಳು ತಲಾ ಒಂದೊಂದು ವಿಕೆಟ್‌ ಕಿತ್ತರು.

ಶ್ರೀಲಂಕಾ ಮೊದಲ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿ ದಕ್ಷಿಣ ಆಫ್ರಿಕಾಕ್ಕೆ 87 ರನ್ನುಗಳಿಂದ ಸೋತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next