Advertisement

ಅಭ್ಯಾಸ ಪಂದ್ಯ; ಪೂಜಾರ ಶತಕ

12:31 AM Aug 19, 2019 | Sriram |

ಕೂಲಿಜ್‌ (ಆ್ಯಂಟಿಗುವಾ): ವೆಸ್ಟ್‌ ಇಂಡೀಸ್‌ ಮಂಡಳಿ ಇಲೆವೆನ್‌ ಎದುರಿನ ತ್ರಿದಿನ ಅಭ್ಯಾಸ ಪಂದ್ಯದ ಮೊದಲ ದಿನ ಚೇತೇಶ್ವರ್‌ ಪೂಜಾರ ಶತಕ ಬಾರಿಸಿ ಭಾರತಕ್ಕೆ ರಕ್ಷಣೆ ಒದಗಿಸಿದ್ದಾರೆ. ಇವರೊಂದಿಗೆ ರೋಹಿತ್‌ ಶರ್ಮ ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು.

Advertisement

ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟಿಗೆ 297 ರನ್‌ ಗಳಿಸಿತ್ತು. ಪೂಜಾರ 187 ಎಸೆತಗಳಿಂದ 100 ರನ್‌ ಬಾರಿಸಿ ನಿವೃತ್ತರಾದರು. ಇದರಲ್ಲಿ 8 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ರೋಹಿತ್‌ ಶರ್ಮ 68 ರನ್ನುಗಳ ಕೊಡುಗೆ ಸಲ್ಲಿಸಿದರು (115 ಎಸೆತ, 8 ಬೌಂಡರಿ, 1 ಸಿಕ್ಸರ್‌). ಇವರಿಂದ 4ನೇ ವಿಕೆಟಿಗೆ 132 ರನ್‌ ಒಟ್ಟುಗೂಡಿತು.

ರಿಷಭ್‌ ಪಂತ್‌ 33 ರನ್‌ ಮಾಡಿದರು (53 ಎಸೆತ, 4 ಬೌಂಡರಿ, 1 ಸಿಕ್ಸರ್‌). ಹನುಮ ವಿಹಾರಿ 37, ರವೀಂದ್ರ ಜಡೇಜ ಒಂದು ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ದ್ವಿತೀಯ ದಿನದಾಟದ ಆರಂಭಕ್ಕೆ ಮಳೆಯಿಂದ ಅಡಚಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next