ಮೇಘರಾಜ್ ಮೂವೀಸ್ ಬ್ಯಾನರ್‌ನಲ್ಲಿ ರವಿರಾಜ್.ಎಸ್.ಕುಮಾರ್ ಅವರು ನಿರ್ಮಿಸುತ್ತಿರುವ “ಪ್ರಭುತ್ವ” ಚಿತ್ರದ ಚಿತ್ರೀಕರಣ ಇತ್ತೀಚೆಗೆ ಆರ್.ಎಸ್.ಗೌಡ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಕೋರ್ಟ್ ಸೆಟ್‌ನಲ್ಲಿ ನಡೆದಿದೆ. ಶಶಿಕುಮಾರ್, ಪಾವನಾ, ಅಂಬಿಕಾ, ಅವಿನಾಶ್, ಆದಿಲೋಕೇಶ್, ಪೂಜಾ ಲೋಕೇಶ್, ಶ್ರೀಧರ್, ಚೇತನ್, ಅರವಿಂದ್, ನಂದೀಶ್ ಮುಂತಾದವರು ಈ ಭಾಗವಹಿಸಿದ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಮೇಘನಹಳ್ಳಿ ಶಿವಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಆರ್.ರಂಗಾನಾಥ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ವಿನೋದ್, ಮಾಸ್‌ಮಾದ, ವಿಕ್ರಂ ಸಾಹಸ ನಿರ್ದೇಶನ ಮಾಡಿದ್ದಾರೆ. ಮೋಹನ್, ಕಲೈ, ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೋಹನ್ ಬಿ ಕೆರೆ ಕಲಾ ನಿರ್ದೇಶನವಿದೆ. ಕವಿರಾಜ್, ನಾಗೇಂದ್ರಪ್ರಸಾದ್, ಚೇತನ್‌ಕುಮಾರ್(ಭರ್ಜರಿ), ಅಲೆಮಾರಿ ಸಂತು ಗೀತೆಗಳನ್ನು ರಚಿಸಿದ್ದಾರೆ.
ವಿನಯ್ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದ ಒಂದು ವಿಶೇಷವೆಂದರೆ, ಇಡೀ ಚಿತ್ರದಲ್ಲಿ ಒಂದೇ ಒಂದು ಕಡೆಯೂ ಕ್ಯಾಮೆರಾ ಇಟ್ಟು ಸ್ಟಡಿ ಶಾಟ್ ತೆಗೆಯದಿರುವುದು. ಇಡೀ ಚಿತ್ರವು ಓಡುತ್ತಲೇ ಇರುತ್ತದಂತೆ.ಈ ಕುರಿತು ಮಾತನಾಡುವ ನಿರ್ದೇಶಕ ರಂಗನಾಥ್, “ಈ ತರಹದ ಪ್ರಯತ್ನ ಕನ್ನಡದಲ್ಲಿ ಆಗಿಲ್ಲ. ಬೇರೆ ಭಾಷೆಯಲ್ಲೆಲ್ಲೋ ಆಗಿದೆ ಅಂತ ಕೇಳಿದ್ದೀನಿ. ನಮ್ಮಲ್ಲಿ ಯಾಕೆ ಮಾಡಬಾರದು ಅಂತ ಈ ಪ್ರಯತ್ನ. ಇಡೀ ಚಿತ್ರದಲ್ಲಿ ಎಲ್ಲೂ ಕ್ಯಾಮೆರಾಗೆ ಟ್ರೈಪಾಡ್ ಹಾಕಿ ನಿಲ್ಲಿಸಿ, ಚಿತ್ರೀಕರಣ ಮಾಡಿಲ್ಲ. ಇಡೀ ಚಿತ್ರದಲ್ಲಿ ಕ್ಯಾಮೆರಾ ಮೂವ್ ಆಗುತ್ತಲೇ ಇರುತ್ತದೆ.
ಅದೇ ಕಾರಣಕ್ಕೆ ಜಿಮ್ಮಿ, ಸ್ಟಡಿಕ್ಯಾಮ್, ಹೆಲಿಕ್ಯಾಮ್ ಮುಂತಾದ ಕ್ಯಾಮೆರಾಗಳನ್ನು ತೆಗೆದುಕೊಂಡು ಶೂಟ್ ಮಾಡಿದ್ದಾಗಿ ಹೇಳುತ್ತಾರೆ. ಚೇತನ್ ಚಂದ್ರ ನಾಯಕರಾಗಿ ನಟಿಸುರುವ ಈ ಚಿತ್ರದ ನಾಯಕಿ ಪಾವನಾ. ಚಿತ್ರದಲ್ಲಿ ನಾಜರ್, ಶಶಿಕುಮಾರ್, ಅಂಬಿಕ, ಸಾಧುಕೋಕಿಲ, ಮುನಿ, ಪೆಟ್ರೋಲ್ ಪ್ರಸನ್ನ, ಶರತ್ ಲೋಹಿತಾಶ್ವ, ಆದಿಲೋಕೇಶ್, ಗಿರಿ, ಹರೀಶ್ ರೈ, ಪೂಜಾಲೋಕೇಶ್, ಅವಿನಾಶ್, ವೀಣಾಸುಂದರ್, ವಿಜಯ್ ಚೆಂಡೂರ್, ಅಮಿತಾ ಕುಲಾಳ್, ಅನಿತಾ ಭಟ್ ಮುಂತಾದವರು ನಟಿಸಿದ್ದಾರೆ.