ಪಾಟ್ನಾ:1995ರ ಅಶೋಕ್ ಸಿಂಗ್ ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ಮಾಜಿ ಸಂಸದ, ಅಪರಾಧಿ ಪ್ರಭುನಾಥ್ ಸಿಂಗ್ ಗೆ ಹಜಾರಿಬಾಗ್ ಕೋರ್ಟ್ ಮಂಗಳವಾರ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.
ಕೊಲೆ ಕೇಸ್ ನಲ್ಲಿ ಸಿಂಗ್ ಅನ್ನು ದೋಷಿ ಎಂದು ಕೋರ್ಟ್ ಕಳೆದ ವಾರ ತೀರ್ಪು ನೀಡಿತ್ತು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುರೇಂದ್ರ ಶರ್ಮಾ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಭುನಾಥ್ ಸಿಂಗ್, ಸಹೋದರ ದೀನಾನಾಥ್ ಸಿಂಗ್ ಹಾಗೂ ರಿತೇಶ್ ಸಿಂಗ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಏತನ್ಮಧ್ಯೆ ಪ್ರಭುನಾಥ್ ಸಹೋದರರು ಕೆಳ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. 1995ರಲ್ಲಿ ಹಾಡಹಗಲೇ ಮಾಸಾರ್ಕ್ ಕ್ಷೇತ್ರದ ಶಾಸಕ ಅಶೋಕ್ ಸಿಂಗ್ ಅವರನ್ನು ಗುಂಡಿಟ್ಟು ಹತ್ಯೆಗೈಯಲಾಗಿತ್ತು.