Advertisement
ಕೊಪ್ಪಳ ತಾಲೂಕಿನ ಬಹದ್ದೂಬಂಡಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರ ಜೊತೆ ಮಾತನಾಡಿ, ಗಣೇಶ ಮೂರ್ತಿ ಬಹಿರಂಗ ಸ್ಥಾಪನೆಯ ವಿಚಾರ ಮೇಲ್ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸಿಎಂ ಅವರೇ ಈ ಕುರಿತಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂದರಲ್ಲದೇ, ನಾನು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯ ಕುರಿತಂತೆ, ಗೋಶಾಲೆಗಳ ಅಭಿವೃದ್ಧಿ ಕುರಿತಂತೆ ಗೋವುಗಳ ರಕ್ಷಣೆಯ ಕುರಿತಂತೆ ಎಲ್ಲಡೆಯೂ ಕಾಳಜಿ ವಹಿಸಿದ್ದೇನೆ ಎಂದರು.
Related Articles
Advertisement
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದೇವೆ. ಕೆಲವು ಮುಸ್ಲಿಂ ಮುಖಂಡರು ಕೋರ್ಟ್ಗೆ ಪಿಐಎಲ್ ಹೋಗಿದ್ದಾರೆ. ಕೋರ್ಟ್‌ನಲ್ಲಿ ಇಯರಿಂಗ್ ಇತ್ತು. ನಾವು ಈ ಕೇಸ್‌ನಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ಮುಂದಿನ ದಿನದಲ್ಲಿ ಯಾವುದೇ ಗೋವು ಕಸಾಯಿಖಾನೆಗೆ ಹೋಗದಂತೆ ಕ್ರಮ ಕೈಗೊಳ್ಳಿದ್ದೇವೆ ಎಂದರು.
ಸಚಿವರ ಶೂ ಆಪ್ತನು ಕೈಯಲ್ಲಿ ಹಿಡಿದು ತಂದ !
ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ಬಳಿ ಹಾತಿರಾಮ್ ಸ್ವಾಮೀಜಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ಬಳಿಕ ಶೂ ಧರಿಸಲು ಅವರ ಆಪ್ತ ನೋರ್ವನಿಂದ ಶೂ ಧರಿಸಿದ್ದು ಹಲವು ಚರ್ಚೆಗೆ ಎಡೆಮಾಡಿ ಕೊಟ್ಟಿತು. ಓರ್ವ ಸಚಿವರಾಗಿ ಆಪ್ತನ ಕೈಯಲ್ಲಿ ಶೂ ತರಿಸಿದ್ದು ನಿಜಕ್ಕೂ ಟೀಕೆಗೆ ಎಡೆಮಾಡಿ ಕೊಟ್ಟಿತು.
ಮಂತ್ರಿ ಉಳಿಯೋದೇ ಕಷ್ಟವೆಂದ ಸಚಿವ !
ಕೊಪ್ಪಳ ತಾಲೂಕಿನ ಬಹದ್ದೂಬರಂಡಿ ಬಳಿ ಹಾತಿರಾಮ್ ಸ್ವಾಮೀಜಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಭೇಟಿ ನೀಡಿ ಸಮಾಧಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವ ವೇಳೆ ಸ್ಥಳೀಯ ಸ್ವಾಮೀಜಿಗಳು ಸಚಿವರ ಹೆಸರಲ್ಲಿ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ ಬಳಿಕ ಸಚಿವ ಪ್ರಭು ಚವ್ಹಾಣ್ ಅವರು ಮುಂದೆ ಉನ್ನತ ಸ್ಥಾನಕ್ಕೇರಲಿ, ಉಪ ಮುಖ್ಯಮಂತ್ರಿಯಾಗಲಿ, ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದರು. ಈ ವೇಳೆ ಸಚಿವ ಚವ್ಹಾಣ್ ಅವರು ಈಗ ಮಂತ್ರಿ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟವಿದೆ. ಇನ್ನೆಲ್ಲಿ ಡಿಸಿಎಂ, ಸಿಎಂ ಆಗೋದು ಎಂದು ಹಾಸ್ಯ ಚಟಾಕಿ ಒಡೆದಿದ್ದು ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.