Advertisement

ಮಹಾರಾಷ್ಟ್ರಾದ ಥಾಣೆಯ ಸ್ಟಾರ್ ಗೋಟ್ ಫಾರ್ಮ್ ಗೆ ಸಚಿವ ಪ್ರಭು ಚವ್ಹಾಣ್ ಭೇಟಿ

10:25 AM Jan 22, 2020 | sudhir |

ಮಹಾರಾಷ್ಟ್ರ: ಮಹಾರಾಷ್ಟ್ರಾದ ಥಾಣೆಯಲ್ಲಿನ ಸ್ಟಾರ್ ಗೋಟ್ ಫಾರ್ಮ್ ಗೆ ಪಶುಸಂಗೋಪನೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರಾದ ಪ್ರಭು ಚವ್ಹಾಣ್ ಭೇಟಿ ನೀಡಿ ಮಾಹಿತಿ ಪಡೆದರು. ಸ್ಟಾರ್ ಗೋಟ್ ಫಾರ್ಮ್ ನಲ್ಲಿ ವಿವಿಧ ತಳಿಯ ಆಡು, ಮೇಕೆ, ಕುರಿ, ಕೋಳಿ ತಳಿಗಳ ಬಗ್ಗೆ ಮಾಹಿತಿ ಪಡೆದರು.

Advertisement

ರಾಜಸ್ಥಾನ ಜಿಲ್ಲೆಯ ಶಿರೋಹಿ ತಳಿ, ಪಂಜಾಬದ ಬೀರಲ್ ತಳಿ, ಉತ್ತರಪ್ರದೇಶದ ಜಮನಪೂರಿ ತಳಿ, ಅಸ್ಸಾಂನ ಬಂಟಮ ತಳಿ ಹೀಗೆ ಹಲವು ತಳಿಗಳ ಬಗ್ಗೆ ಸಮಗ್ರಮಾದ ಮಾಹಿತಿಯನ್ನು ಗೋಟ್ ಫಾರ್ಮ್ ನ ಮಾಲೀಕ ಆಸಿಫ್ ಅವರ ಹತ್ತಿರ ಮಾಹಿತಿ ಪಡೆದರು.

ಈ ತಳಿಗಳ ಆರೈಕೆಯ ಮಾಡುವ ವಿಧಾನ, ಆಹಾರ ಪದ್ದತಿ ಮತ್ತು ಬ್ರೀಡಿಂಗ್ ಬಗ್ಗೆ ಅಲ್ಲಿನ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿದರು. ಖಾಸಗಿ ಒಡೆತನದಲ್ಲಿನ ಸ್ಟಾರ್ ಗೋಟ್ ಫಾರ್ಮ್ ನಲ್ಲಿ ತಳಿಗಳನ್ನು ಅತ್ಯಂತ ವೃತ್ತಿಪರತೆಯಿಂದ ನೋಡಿಕೊಳ್ಳುತ್ತಿದ್ದು ಎಲ್ಲ ತಳಿಗಳು ಅತ್ಯಂತ ಸದೃಢವಾಗಿವೆ. ಇಲ್ಲಿನ ಆರೈಕೆಯ ಕೆಲವು ವಿಶಿಷ್ಟವಿಧಾನಗಳನ್ನು ನಮ್ಮ ಇಲಾಖೆಯಲ್ಲಿ ಅನುಸರಿಸಿದರೆ ತಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next