ಬೀದರ: ಕೋವಿಡ್-19 ಎರಡನೇ ಅಲೆ ಆರಂಭವಾದ ಬಳಿಕವೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಕೇಂದ್ರ ಸ್ಥಾನ ಬೀದರ ಜಿಲ್ಲೆಯಲ್ಲಿಯೇ ವಾಸ್ತವ್ಯ ಇದ್ದು, ಹೆಚ್ಚಿನ ಸಮಯ ಕೋವಿಡ್ ತಡೆ ಕ್ರಮಗಳ ನಿರ್ವಹಣೆಯ ಸಮನ್ವಯಕ್ಕಾಗಿಯೇ ಮೀಸಲಿಡುತ್ತಿದ್ದಾರೆ.
ಕೋವಿಡ್ ನಿಗದಿತ ಬ್ರಿàಮ್ಸ್ ಆಸ್ಪತ್ರೆಗೆ ಈಗಾಗಲೇ ಹಲವಾರಿ ಭಾರಿ ಭೇಟಿ ನೀಡಿ, ಅಲ್ಲಿನ ಬೇಕು ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದಿರುವ ಸಚಿವರು, ಜಿಲ್ಲೆಯ ವಿವಿಧ ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಿಗೆ ತಮ್ಮ ಎರಡನೇ ಭೇಟಿಯಲ್ಲೂ ಕೂಡ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಂಬಂ ಧಿಸಿದಂತೆ ಆಯಾ ತಾಲೂಕು ಆಸ್ಪತ್ರೆಗಳ ಬೇಕು-ಬೇಡಿಕೆಗಳ ಮಾಹಿತಿ ಪಡೆದುಕೊಳ್ಳಲು ವಿಶೇಷ ಗಮನ ನೀಡಿದರು.
ಔರಾದ ಮತ್ತು ಕಮಲನಗರ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್, ಒಬ್ಬರು ವಿಶೇಷ ತಜ್ಞ ವೈದ್ಯರು, ಕಮಲನಗರಕ್ಕೆ ಜಂಬೋ ಸಿಲಿಂಡರ್ ಬೇಕು ಎಂದು ಔರಾದ ತಾಲೂಕು ಆರೋಗ್ಯಾಧಿ ಕಾರಿ ಡಾ| ಶರಣಯ್ಯ ಅವರು ಸಚಿವರಿಗೆ ಮಾಹಿತಿ ನೀಡಿದರು. ಈ ವೇಳೆ ಸಚಿವರು, ಔರಾದನಿಂದ ತಕ್ಷಣ 5 ಜಂಬೋ ಸಿಲಿಂಡರ್‌ಗಳನ್ನು ಕಮಲನಗರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು. ಬಸವಲ್ಯಾಣ ತಾಲೂಕು ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದಲ್ಲಿ ವೈದ್ಯರು ಸೇರಿದಂತೆ ಆಕ್ಸಿಜನ್, ಬೆಡ್ ಹಾಗೂ ಎಲ್ಲ ರೀತಿಯ ವ್ಯವಸ್ಥೆ ಇದೆ.
ಹುಲಸೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಜಂಬೋ ಸಿಲಿಂಡರ್ ಬೇಕು. ಕೊರೊನಾ ಚಿಕಿತ್ಸೆಗೆ ಸಂಬಂಧಿ ಸಿದ ಆ್ಯಂಟಿ ವೈರಲ್ ಡ್ರಗ್ಸ್ ಕೂಡ ತುಸು ಪ್ರಮಾಣದಲ್ಲಿ ಬೇಕು ಎಂದು ಬಸವಕಲ್ಯಾಣ ತಾಲೂಕಾರೋಗ್ಯಾ ಧಿಕಾರಿ ಡಾ| ವಿಷ್ಣುಕಾಂತ ಅವರು ಸಚಿವರಿಗೆ ಮಾಹಿತಿ ನೀಡಿದರು. ಹುಮನಾಬಾದ ತಾಲೂಕಾಸ್ಪತ್ರೆಯಲ್ಲಿ ಎಲ್ಲ ಅವಶ್ಯಕ ಸೌಲಭ್ಯಗಳಿವೆ. ಕೋವಿಡ್ ವಾರ್ಡ್‌ಗಳಿಗೆ ಹೆಚ್ಚುವರಿಯಾಗಿ 4 ಸ್ಟಾಪ್ ನರ್ಸ್ ಮತ್ತು 9 ಗ್ರೂಪ್ ಡಿ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ ಎಂದು ಹುಮಾನಾಬಾದ ತಾಲೂಕು ಆರೋಗ್ಯಾಧಿ ಕಾರಿ ಡಾ| ನಾಗನಾಥ ಹುಲಸೂರೆ ಅವರು ಸಚಿವರಿಗೆ ಮಾಹಿತಿ ನೀಡಿದರು.
ಭಾಲ್ಕಿ ಆಸ್ಪತ್ರೆಯಲ್ಲಿ ಎರಡು ಆಂಬ್ಯುಲೆನ್ಸ್ ಇದೆ. ಆಕ್ಸಿಜನ್ ಕೊರತೆ ಇಲ್ಲ. ವೈದ್ಯರ ಕೊರತೆ ಇಲ್ಲ. ಆಸ್ಪತ್ರೆಗೆ ಸ್ಯಾನಿಟೈಸರ್ ಮತ್ತು ಎನ್-95 ಮಾಸ್ಕ್ಗಳ ಅವಶ್ಯಕತೆ ಇದೆ ಎಂದು ಭಾಲ್ಕಿ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿ ಕಾರಿ ಡಾ| ಅಬ್ದುಲ್ ಖಾದರ್ ಅವರು ಸಚಿವರಿಗೆ ಮಾಹಿತಿ ನೀಡಿದರು.