Advertisement

Salaar Teaser: ಪ್ಯಾನ್‌ ಇಂಡಿಯಾ ʼಸಲಾರ್‌ʼ ಟೀಸರ್‌ ರಿಲೀಸ್‌ ಡೇಟ್‌ ಅನೌನ್ಸ್

10:29 AM Jul 04, 2023 | Team Udayavani |

ಹೈದರಾಬಾದ್: ವರ್ಷದ ಬಹು ದೊಡ್ಡ ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿರುವ ಹೊಂಬಾಳೆ ಫಿಲ್ಮ್ಸ್‌ ಅವರ ʼಸಲಾರ್‌ʼ ಟೀಸರ್‌ ರಿಲೀಸ್‌ ಡೇಟ್‌ ರಿವೀಲ್‌ ಆಗಿದೆ.

Advertisement

ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ʼಸಲಾರ್‌ʼ ಸಿನಿಮಾ ಪ್ರಭಾಸ್‌ ವೃತ್ತಿ ಬದುಕಿನ ಮತ್ತೊಂದು ಬ್ಲಾಕ್‌ ಬಸ್ಟರ್‌ ಹಿಟ್‌ ಆಗುವ ಸಿನಿಮಾವೆನ್ನುವ ಮಾತುಗಳು ಈಗಾಗಲೇ ಟಾಲಿವುಡ್‌ ರಂಗದಲ್ಲಿ ಕೇಳಿ ಬರುತ್ತಿದೆ.

ಇತ್ತೀಚೆಗೆ ಪ್ರಶಾಂತ್‌ ನೀಲ್‌ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ತಂಡ ಸ್ಪೆಷೆಲ್‌ ಪೋಸ್ಟರ್‌ ನ್ನು ರಿಲೀಸ್‌ ಮಾಡಿತ್ತು. ಒಂದಲ್ಲ ಒಂದು ಪೋಸ್ಟರ್‌ ರಿವೀಲ್‌ ಮಾಡಿ ಸಿನಿಮಾ ಹೈಪ್‌ ಕ್ರಿಯೇಟ್‌ ಮಾಡಿದೆ. ಇದೀಗ ಹೊಂಬಾಳೆ ಫಿಲ್ಮ್ಸ್‌ ಸಿನಿಮಾದ ಟೀಸರ್‌ ರಿಲೀಸ್‌ ಡೇಟನ್ನು ರಿವೀಲ್‌ ಮಾಡಿದೆ.

ಇದನ್ನೂ ಓದಿ: ಹಾಲಿವುಡ್‌ ಸಿನಿಮಾ ಜೊತೆ ʼಜವಾನ್‌ʼ ಟ್ರೇಲರ್‌ ರಿಲೀಸ್:‌ ಥ್ರಿಲ್‌ ಆದ ಶಾರುಖ್ ಪ್ಯಾನ್ಸ್

“ಅತ್ಯಂತ ಹಿಂಸೆಯ ವ್ಯಕ್ತಿಯನ್ನು ನೋಡಲು ತಯಾರಾಗಿ..” ಸಲಾರ್‌ ಟೀಸರ್‌ ಜು.6 ಬೆಳಗ್ಗೆ 5:12 ಕ್ಕೆ ರಿಲೀಸ್‌ ಆಗಲಿದೆ ಎಂದು ಸಿನಿಮಾ ತಂಡ ಫೈಟಿಂಗ್‌ ಅಖಾಡದ ಫೋಟೋವೊಂದನ್ನು ರಿಲೀಸ್‌ ಮಾಡಿ ತಿಳಿಸಿದೆ.

Advertisement

ʼಸಲಾರ್‌ʼ ಸಿನಿಮಾದಲ್ಲಿ ಬಹು ತಾರಾಗಣವುಳ್ಳ ಸಿನಿಮಾವಾಗಿದೆ ಪ್ರಭಾಸ್‌ , ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಶ್ರೀಯಾ ರೆಡ್ಡಿ, ಈಶ್ವರಿ ರಾವ್, ಮಧು ಗುರುಸ್ವಾಮಿ ಮತ್ತು ಜಗಪತಿ ಬಾಬು ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಸೆ.28 ರಂದು ವಿಶ್ವದೆಲ್ಲೆಡೆ ʼಸಲಾರ್‌ʼ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next