ಮುಂಬಯಿ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧದ ಹಡಗಿನಲ್ಲಿನ ಡ್ರಗ್ಸ್ ಪಾರ್ಟಿ ಪ್ರಕರಣದ ಪ್ರಮುಖ ಸ್ವತಂತ್ರ ಸಾಕ್ಷಿ ಪ್ರಭಾಕರ್ ಸೈಲ್ ಶುಕ್ರವಾರ (ಏಪ್ರಿಲ್ 01) ಮಧ್ಯಾಹ್ನ ಮಹೌಲ್ ಪ್ರದೇಶದಲ್ಲಿನ ತಮ್ಮ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗುಜರಾತ್: ಒಂದೆಡೆ ತರಕಾರಿ ಬೆಲೆ ಹೆಚ್ಚಳ, ಮತ್ತೊಂದೆಡೆ ಲಿಂಬೆ ಹಣ್ಣು ಬೆಲೆ ಕೆಜಿಗೆ 200 ರೂ.!
ಸೈನ್ ನಿಧನ ಸುದ್ದಿಯನ್ನು ಅವರ ವಕೀಲರಾದ ತುಷಾರ್ ಖಂಡಾರೆ ಖಚಿತಪಡಿಸಿದ್ದಾರೆ. ಆದರೆ ಪ್ರಭಾಕರ್ ಸೈಲ್ ನಿಧನ ಹಿಂದೆ ಯಾವುದೇ ಸಂಶಯಕ್ಕೆ ಎಡೆ ಮಾಡಿಕೊಡುವ ಶಂಕೆ ಇಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿರುವುದಾಗಿ ವರದಿ ಹೇಳಿದೆ.
ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಸೈಲ್ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಹೋದರರು ಆಗಮಿಸಿದ ನಂತರ ಸೈಲ್ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪ್ರಭಾಕರ್ ಸೈಲ್ ಅವರು ಡ್ರಗ್ಸ್ ಪ್ರಕರಣದ ಮತ್ತೊಬ್ಬ ಸಾಕ್ಷಿ ಕೆಪಿ ಗೋಸಾವಿ ಅವರ ಅಂಗರಕ್ಷಕರಾಗಿದ್ದರು. ಎನ್ ಸಿಬಿ ಅಧಿಕಾರಿಗಳು ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ಶಾರುಖ್ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಿದ್ದರು. ಏತನ್ಮಧ್ಯೆ ಎನ್ ಸಿಬಿ ಕಚೇರಿಯಲ್ಲಿ ಆರ್ಯನ್ ಖಾನ್ ಜತೆ ಗೋಸಾವಿ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನಂತರ ವಿವಾದಕ್ಕೆ ಕಾರಣವಾಗಿತ್ತು.