Advertisement
ದಕ್ಷಿಣ ಭಾರತೀಯ ಆಟಗಾರರಿಗೆ ಹಾಕಿಯಲ್ಲಿ ನಾಯಕತ್ವದ ಜವಾಬ್ದಾರಿ ಸಿಕ್ಕಿರುವುದು ತುಂಬಾ ಅಪರೂಪ. ಕೇರಳದ ಶ್ರೀಜೇಶ್ ನಾಯಕತ್ವವನ್ನು ಪಡೆಯಲು ಯಶಸ್ವಿಯಾದರು. ಆದರೆ, ನಾಯಕನಾಗಿ ಯಶಸ್ವಿಯಾದರೂ, ಗಾಯ, ಅಶಿಸ್ತಿನಿಂದ ಆ ಸ್ಥಾನ ಬಹುಸಮಯ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಮನ್‌ಪ್ರೀತ್ ಸಿಂಗ್ ನೇತೃತ್ವದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೀಡಿರುವ ಕಳಪೆ ಪ್ರದರ್ಶನ ಮತ್ತೆ ಶ್ರೀಜೇಶ್‌ಗೆ ನಾಯಕತ್ವದ ಸ್ಥಾನ ಸಿಗುವಂತೆ ಮಾಡಿದೆ.
Related Articles
Advertisement
ಶ್ರೀಜೇಶ್ ಸಾಧನೆ2004ರಲ್ಲಿ ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಆಯ್ಕೆ. ಇಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದಿಂದಾಗಿ 2006ರಲ್ಲಿಯೇ ಹಿರಿಯರ ರಾಷ್ಟ್ರೀಯ ತಂಡಕ್ಕೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. 2008ರಲ್ಲಿ ಜೂನಿಯರ್ ಏಷ್ಯಾಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರಹಿಸಿದರು. ಈ ಕೂಟದಲ್ಲಿ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿ ಪಡೆದರು. 2011ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಕ್ ವಿರುದ್ಧ ಅದ್ಭುತ ಗೋಲ್‌ಕೀಪಿಂಗ್ ಪ್ರದರ್ಶಿಸುವ ಮೂಲಕ ಭಾರತಕ್ಕೆ ಗೆಲುವು ತಂದರು. 2013ರಲ್ಲಿ ನಡೆದ ಏಷ್ಯಾಕಪ್‌ನಲ್ಲಿಯೂ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇಷ್ಟೇ ಅಲ್ಲ, ಶ್ರೇಷ್ಠ ಗೋಲ್‌ಕೀಪರ್ ಸಮಸ್ಯೆ ಎದುರಿಸುತ್ತಿದ್ದ ಭಾರತಕ್ಕೆ ಶ್ರೀಜೇಶ್ ಆಪತಾºಂಧವರಾದರು. 2014ರಲ್ಲಿ ನಡೆದ ಕಾಮನ್‌ವೆಲ್ತ್‌ನಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವಲ್ಲಿಯೂ ಮಹತ್ವದ ಕೊಡುಗೆ ನೀಡಿದ್ದಾರೆ.