Advertisement

ಡಿಜಿಟಲ್‌ ಪಾವತಿಗೆ ಬರಲಿದೆ ಪಿಪಿಐ ಕಾರ್ಡ್‌

10:08 AM Dec 07, 2019 | sudhir |

ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ. ಈ ವಿಚಾರ ಗಮನದಲ್ಲಿರಿಸಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ವಿನೂತನ ಮುಂಗಡ ಪಾವತಿ ವ್ಯವಸ್ಥೆ (ಪ್ರಿಪೇಯ್ಡ ಪೇಮೆಂಟ್‌ ಇನ್‌ಸ್ಟ್ರೆಮೆಂಟ್‌) ಪರಿಚಯಿ ಸಲಿದ್ದು, ಈ ಕುರಿತು ತನ್ನ ಅಭಿವೃದ್ಧಿ ಮತ್ತು ನಿರ್ವಹಣಾ ನೀತಿಗಳ ವರದಿಯಲ್ಲಿ ಮಾಹಿತಿ ಹಂಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಿಪೇಯ್ಡ ಪೇಮೆಂಟ್‌ ಇನ್‌ಸ್ಟ್ರೆಮೆಂಟ್‌ ಕಾರ್ಡ್‌ ಎಂದ ರೇನು? ವಿಶೇಷತೆ ಗಳೇನು? ವಿವರ ಇಲ್ಲಿದೆ.

Advertisement

ಡಿಜಿಟಲ್‌ ಪಾವತಿಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಆರ್‌ಬಿಐ ಈ ಒಂದು ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. 10 ಸಾವಿರ ಒಳಗಿನ ಖರೀದಿಗಾಗಿ ಪಿಪಿಐ ಕಾರ್ಡ್‌ನ್ನು ಬಳಸಬಹುದು.

ಎಲ್ಲೆಲ್ಲಿ ಬಳಸಬಹುದು?
ಈ ಕಾರ್ಡ್‌ನ್ನು ಬಳಸಿಕೊಂಡು ಸರಕು ಮತ್ತು ಸೇವೆಗಳನ್ನು ಪಡೆಯಬಹುದಾಗಿದ್ದು, ಸ್ನೇಹಿತರು, ಕುಟುಂಬದ ಸದಸ್ಯರಿಗೆ ಹಣವನ್ನು ವರ್ಗಾಯಿಸಲು / ಕಳುಹಿಸಲು ಪಿಪಿಐ ಬಳಸಬಹುದು. ಪಿಪಿಐ ಮಾದರಿ ಪ್ರಮುಖ ಸೇವೆಗಳೆಂದರೆ ಪೇಟಿಎಂ, ಮೊಬಿಕ್ವಿಕ್‌ (ಸೆಮಿ ಕ್ಲೋಸ್ಡ್ ಸಿಸ್ಟಮ್‌ ಪಿಪಿಐಗಳು), ಗಿಫr… ಕಾರ್ಡ್‌ (ಕ್ಲೋಸ್ಡ್ ಸಿಸ್ಟಮ್‌ ಪಿಪಿಐಗಳು), ಪ್ರಯಾಣ / ಡೆಬಿಟ್‌ / ಕ್ರೆಡಿಟ್‌ ಕಾರ್ಡ್‌ಗಳು (ಓಪನ್‌ ಸಿಸ್ಟಮ್‌ ಪಿಪಿಐಗಳು) ಇವೆ.

ಬ್ಯಾಂಕ್‌ ಖಾತೆಯಿಂದ ಹಣ
ಬ್ಯಾಂಕ್‌ ಖಾತೆಯಿಂದ ಈ ಕಾರ್ಡ್‌ಗೆ ಹಣ ತುಂಬಿಸಿ, ಬಳಕೆ ಮಾಡಬಹುದಾಗಿದ್ದು, ಬಿಲ್‌ ಪಾವತಿ, ಖರೀದಿ ವೇಳೆ ಪಾವತಿ ಮಾಡಬಹುದು. ವಿಶೇಷವಾಗಿ ಡಿಜಿಟಲ್‌ ಪಾವತಿಗಳನ್ನು ಮಾತ್ರ ಮಾಡಲು ಅವಕಾಶವಿರುತ್ತದೆ.

ಎಲ್ಲೆಲ್ಲಿ ಲಭ್ಯ ?
ಬ್ಯಾಂಕ್‌ ಮತ್ತು ಬ್ಯಾಂಕೇತರ ಸಂಸ್ಥೆಗಳಿಗೆ 10 ಸಾವಿರ ಮೌಲ್ಯದ ಸೆಮಿ ಕ್ಲೋಸ್ಡ್ ಪಿಪಿಐ ಕಾರ್ಡ್‌ ಗಳನ್ನು ವಿತರಿಸುವ ಅವಕಾಶವಿದ್ದು, ಬಳಕೆದಾರರ ಅಗತ್ಯ ವಿವರಗಳನ್ನು ನೀಡಿದ ಅನಂತರ ಕಾರ್ಡ್‌ ಮಾನ್ಯಗೊಳ್ಳುತ್ತದೆ.

Advertisement

ಮೊಬೈಲ್‌ ಮೂಲಕ ಮಾಹಿತಿ
ಮೊಬೈಲ್‌ ಮೂಲಕ ಕಾರ್ಡ್‌ನ ಮಾಹಿತಿ ಮತ್ತು ಖಾತೆಯ ವಿವರವನ್ನು ಪಡೆಯಬಹುದಾಗಿದ್ದು, ಬಳಕೆದಾರನ ಹೆಸರು ಮತ್ತು ವಿಳಾಸ ಇರುವ ಅಧಿಕೃತ ದಾಖಲೆ ಅಗತ್ಯ.

ಏನೆಲ್ಲ ನಿಯಮ?
-  ಪಿಪಿಐ ಕಾರ್ಡ್‌ ಗಳಿಗೆ 10 ಸಾವಿರ ರೂ.ಗಿಂತ ಹೆಚ್ಚು ಹಣವನ್ನು ಹಾಕುವಂತಿಲ್ಲ ಮತ್ತು ಹಣಕಾಸು ವರ್ಷದಲ್ಲಿ ಬಳಕೆ ಮಾಡಲಾದ ಒಟ್ಟು ಮೊತ್ತವು 1 ಲಕ್ಷ ರೂ.ಗಳನ್ನು ಮೀರುವಂತಿಲ್ಲ.

-  ಪಿಪಿಐಗಳನ್ನು ಸರಕು ಮತ್ತು ಸೇವೆಗಳ ಖರೀದಿಗೆ ಮಾತ್ರ ಬಳಸಲು ಸಾಧ್ಯ. ಜತೆಗೆ ಈ ವ್ಯವಸ್ಥೆಯಿಂದ ಇನ್ನೊಂದು ಪಿಪಿಐ ಕಾರ್ಡ್‌ ಬಳಕೆದಾರರ ಖಾತೆಗೆ ಮಾತ್ರ ಹಣವನ್ನು ವರ್ಗಾಹಿಸಬಹುದು.

-  ಒಮ್ಮೆ ಕಾರ್ಡ್‌ ಪಡೆಯಲು ನೀಡಿದ ಮೊಬೈಲ್‌ ಸಂಖ್ಯೆ ಮತ್ತು ವಿವರಗಳನ್ನು ಬಳಸಿಕೊಂಡು ಪುನಃ ಕಾರ್ಡ್‌ ಪಡೆಯಲು ಸಾಧ್ಯವಿಲ್ಲ.

-  ಯಾವುದೇ ಸಮಯದಲ್ಲಿ ಬೇಕಾ ದರೂ ಪಿಪಿಐ ಕಾರ್ಡ್‌ ಬಳಕೆಯನ್ನು ನಿಲ್ಲಿಸುವ ಅವಕಾಶವಿದ್ದು, ಕಾರ್ಡ್‌ ನಲ್ಲಿ ಹಣವಿದ್ದರೆ ಖಾತೆಯ ಸಂಪೂರ್ಣ ಪರಿಶೀಲನೆಯ ಅನಂತರ ಮೊತ್ತವನ್ನು ಬಳಕೆದಾರನ ಖಾತೆಗೆ ವರ್ಗಾಯಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next