Advertisement

ಪಪಂ ಬಜೆಟ್: ಅಭಿವೃದ್ಧಿ-ಪ್ರವಾಸೋದ್ಯಮಕ್ಕೆ ಆದ್ಯತೆ

12:04 PM Feb 07, 2019 | |

ತೀರ್ಥಹಳ್ಳಿ: 2019-20ನೇ ಸಾಲಿನ ಪಟ್ಟಣ ಪಂಚಾಯತ್‌ ಬಜೆಟ್‌ನಲ್ಲಿ ಪಟ್ಟಣದ ಅಭಿವೃದ್ಧಿ, ಮೂಲ ಸೌಕರ್ಯ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ರೂಪಿಸಲಾಗಿದೆ. 23,26,14,996 ರೂ. ಒಟ್ಟು ಬಜೆಟ್‌ನಲ್ಲಿ ಪ್ರಮುಖ ಮೂಲಗಳಿಂದ ಸಂಪನ್ಮೂಲವನ್ನು ನಿರೀಕ್ಷಿಸಿ ಜನಪರ ಬಜೆಟ್ ನೀಡಿದ್ದೇವೆ ಎಂದು ಪಟ್ಟಣ ಪಂಚಾಯತ್‌ ಅಧ್ಯಕ್ಷ ಸಂದೇಶ್‌ ಜವಳಿ ಹೇಳಿದರು.

Advertisement

ಪಟ್ಟಣದ ಪಪಂನ ರವೀಂದ್ರ ಶೆಟ್ಟಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ 2019-20ನೇ ಸಾಲಿನ ಪಟ್ಟಣ ಪಂಚಾಯತ್‌ ಬಜೆಟ್ ಮಂಡಿಸಿ ಅವರು ಮಾತನಾಡಿದರು.

ಈ ಬಾರಿಯ ಬಜೆಟ್‌ನಲ್ಲಿ ಆಧುನಿಕ ಮಾದರಿಯ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಬಾಳೇಬೈಲಿನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನೀರಿನ ಘಟಕ ಸ್ಥಾಪನೆ, ಬಯಲು ಶೌಚಾಲಯ ಮುಕ್ತ ಪಟ್ಟಣ ಘೋಷಣೆ, ಹಾಗೂ ಪಟ್ಟಣದ ಎರಡು ಪ್ರಮುಖ ಸ್ಥಳಗಳಲ್ಲಿ ಸ್ವಾಗತ ಕಮಾನುಗಳ ನಿರ್ಮಾಣಕ್ಕೆ 15ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದರು.

ಪಟ್ಟಣದಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಗಾಗಿ ಹೆಚ್ಚು ನಿಗಾ ವಹಿಸಲಾಗಿದೆ. ಘನತ್ಯಾಜ್ಯ ವಸ್ತುಗಳಿಂದ, ಸಾವಯವ ಗೊಬ್ಬರ ತಯಾರಿಕೆಯಿಂದ ಈ ಬಜೆಟ್‌ನಲ್ಲಿ 3 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಮಾನವ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ 20 ಲಕ್ಷ ಅನುದಾನ ಕಾಯ್ದಿರಿಸಲಾಗಿದ್ದು, ಸೌರ ವಿದ್ಯುತ್‌ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಉದ್ಯಮ ನಿಧಿಯಿಂದ 75ಲಕ್ಷ ಹಣ ಕಾಯ್ದಿರಿಸಲಾಗಿದೆ ಎಂದರು.

ಈ ಬಾರಿ ವಿಶೇಷವಾಗಿ ರಸ್ತೆ ಬದಿ ವ್ಯಾಪಾರಿಗಳಿಗೆ ಪುನರ್‌ವಸತಿ ಉದ್ದೇಶಕ್ಕಾಗಿ ಸೇಫ್‌ ಫುಡ್‌ ಜೋನ್‌ ಸ್ಥಾಪಿಸಿದ್ದು, 25 ಲಕ್ಷ ಹಣವನ್ನು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಿಂದ ವಿಶೇಷ ಯೋಜನೆಯಲ್ಲಿ ತರಲು ನಿರ್ಧರಿಸಲಾಗಿದೆ. ಪಟ್ಟಣದ ಸಿದ್ಧೇಶ್ವರ ಬೆಟ್ಟ ಅಭಿವೃದ್ಧಿ ಹಾಗೂ ತುಂಗಾನದಿ ತೀರದಲ್ಲಿ ಉದ್ಯಾನದ ಅಭಿವೃದ್ಧಿಗೆ 5 ಲಕ್ಷ ಹಣ, ಅಧುನಿಕ ಈಜು ಕೊಳ ನಿರ್ಮಾಣಕ್ಕೆ 25 ಲಕ್ಷ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ 30 ಲಕ್ಷ, ಪಟ್ಟಣದ ಆಗುಂಬೆ ಬಸ್‌ ನಿಲ್ದಾಣದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣಕ್ಕೆ 5 ಲಕ್ಷ, ಪಟ್ಟಣದಲ್ಲಿ ವ್ಯಾಯಾಮ ಶಾಲೆ ನಿರ್ಮಾಣ ಹಾಗೂ ಅಭಿವೃದ್ಧಿಗೆ 5 ಲಕ್ಷ, ಮಳೆನೀರು ಕೊಯ್ಲು ಹಾಗೂ ತ್ಯಾಜ್ಯನೀರು ಸಂಸ್ಕರಣ ಘಟಕಕ್ಕೆ 5ಲಕ್ಷ ಹಣ ಕಾಯ್ದಿರಿಸಲಾಗಿದೆ ಎಂದರು.

Advertisement

ಪಟ್ಟಣದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ತುಂಗಾನದಿ ತೀರವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬೇಕೆಂದು 20 ಲಕ್ಷ ಹಣ ಮೀಸಲಿಟ್ಟಿದ್ದೇವೆ. ಸೀಬಿನಕೆರೆ ಅಭಿವೃದ್ಧಿಗೆ 5 ಲಕ್ಷ, ವಿವಿಧ ವನಮಹೋತ್ಸವ ಕಾರ್ಯಕ್ರಮಗಳಿಗೆ 5ಲಕ್ಷ, ಪಟ್ಟಣ ವ್ಯಾಪ್ತಿಯಲ್ಲಿನ ದಸರಾ ಹಾಗೂ ಎಳ್ಳಮಾವಾಸ್ಯೆ ಜಾತ್ರೆಗೆ 5 ಲಕ್ಷ ಹಣ, ಬಡವರ ಕಲ್ಯಾಣ ಕಾರ್ಯಕ್ರಮದ ಶೇ.7.25 ಯೋಜನೆಗೆ, ವಿಕಲಚೇತನರ ಕಲ್ಯಾಣಕ್ಕೆ ವಸತಿ ಯೋಜನೆಗಳಿಗೆ, ಕೈಗಾರಿಕಾ ಉದ್ಯಮ, ಬಯಲು ರಂಗಮಂದಿರದ ನಿರ್ಮಾಣ ಹಾಗೂ ಆಶ್ರಯ ಯೋಜನೆ ಅಡಿಯಲ್ಲಿ ಬಡಾವಣೆ ನಿರ್ಮಾಣಕ್ಕೆ ಹೆಚ್ಚಿನ ಹಣ ಕಾಯ್ದಿರಿಸಲಾಗಿದೆ ಎಂದರು. ಪಪಂ ಉಪಾಧ್ಯಕ್ಷೆ ಲಕ್ಷ್ಮೀದೇವಮ್ಮ, ನಾಗೇಂದ್ರ ಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next