Advertisement

ಪವರ್‌ಲಿಫ್ಟಿಂಗ್ ಚಾಂಪಿಯನ್‌ ವೆನಿಝಿಯಾ ಕಾರ್ಲೊ ಅವರಿಗೆ ಸಮ್ಮಾನ 

12:08 PM Dec 15, 2017 | Team Udayavani |

ಬೆಂದೂರ್‌ : ಕೇರಳದ ಆಲಪ್ಪುಳದಲ್ಲಿ ಜರಗಿದ ಏಷ್ಯನ್‌ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ 57 ಕೆ.ಜಿ. ವಿಭಾಗದಲ್ಲಿ 2 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಸಮಗ್ರ ಪ್ರಶಸ್ತಿ ಪಡೆದು, 2017-18ರ ಸಾಲಿನ ‘ಬಲಿಷ್ಠ ಮಹಿಳೆ’ ಬಿರುದು ಪಡೆದಿರುವ ನಗರದ ಬೆಂದೂರ್‌ನ ಸೈಂಟ್‌ ಆಗ್ನೆಸ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೆನಿಝಿಯಾ ಕಾರ್ಲೊ ಅವರ ವಿಜಯೋತ್ಸವ ಹಾಗೂ ಸಮ್ಮಾನ ಸಮಾರಂಭ ಡಿ. 12ರಂದು ಸೈಂಟ್‌ ಆ್ಯಗ್ನೆಸ್‌ ಪ.ಪೂ. ಕಾಲೇಜಿನಲ್ಲಿ ಜರಗಿತು. ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ಕಾಲೇಜಿನ ಆಡಳಿತ ಮಂಡಳಿ ಈ ಸಮಾರಂಭವನ್ನು ಏರ್ಪಡಿಸಿತ್ತು.

Advertisement

ಶಾಸಕ ಜೆ. ಆರ್‌. ಲೋಬೋ ಅವರು ಸಮ್ಮಾನಿಸಿ, ಶುಭ ಹಾರೈಸಿದರು. ಮನಪಾ ಕಮಿಷನರ್‌ ಮಹಮದ್‌ ನಜೀರ್‌, ಜಿಲ್ಲಾ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್‌ ಡಿ’ಸೋಜಾ, ಡೆನಿಸ್‌ ಡಿ’ಸಿಲ್ವ, ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷೆ ಅನಿತಾ ದೆನುಗರ್‌, ಅಪೋಸ್ತಲಿಕ್‌ ಕಾರ್ಮೆಲ್‌ ಶಿಕ್ಷಣ ಸಂಸ್ಥೆಯ ಪ್ರಾಂತೀಯ ಅಧಿಕಾರಿ ಸಿ| ಕಾರ್ಮೆಲ್‌ ರೀಟಾ, ಸೈಂಟ್‌ ಆಗ್ನೆಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪ್ರಾಂಶುಪಾಲೆ ಸಿ| ಶಮಿತಾ, ಶಿಕ್ಷಕ – ಶಿಕ್ಷಕೇತರ ವೃಂದ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸಂಯೋಜಕರಾದ ಲವೀನಾ ಅರಾನ್ಹಾ ಮತ್ತು ಟ್ರೆಸ್ಸಿ ಮಿನೇಜಸ್‌ ನೇತೃತ್ವದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next