ಕೋಲಾರ: ಕೋಲಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಫಲಿತಾಂಶ ಘೋಷಣೆಗೆ ಮಂಗಳವಾರ ನ್ಯಾಯಾಲಯವು ಸಮ್ಮತಿ ನೀಡಿದ್ದರಿಂದಾಗಿ ಬುಧವಾರ ಶ್ವೇತಾ ಶಬರೀಶ್ ಅಧ್ಯಕ್ಷರಾಗಿ, ಎನ್.ಎಸ್.ಪ್ರವೀಣ್‌ಗೌಡ ಉಪಾಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್, ಶಾಸಕ ಕೆ.ಶ್ರೀನಿವಾಸಗೌಡ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ರಾಜ್ಯದ 6 ನಗರಸಭೆಗಳದ್ದು ಇದೇರೀತಿಯ ಸಮಸ್ಯೆಯಿದ್ದು, ಮಂಗಳವಾರ ರಾತ್ರಿನ್ಯಾಯಾಲಯವು ತೀಪುì ನೀಡಿದ ಹಿನ್ನೆಲೆಯಲ್ಲಿಅಧ್ಯಕ್ಷ, ಉಪಾಧ್ಯಕ್ಷ ಅಧಿಕಾರ ಸ್ವೀಕಾರ ನೆರವೇರಿರುವುದಾಗಿ ತಿಳಿಸಿದರು.
ಜಿಲ್ಲೆಯ 3 ತಾಲೂಕುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಿರುವ ಯರಗೋಳ್ ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ಜನವರಿಯಲ್ಲಿ ಸಿಎಂ ಉದ್ಘಾಟಿಸಲಿದ್ದಾರೆ. ಕೋಲಾರ ನಗರದಲ್ಲಿ ಯೋಜನೆಗೆ ಸಂಬಂಧಿಸಿದಂತೆ ಇನ್ನೂ 3 ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣವಾಗಬೇಕಾಗಿದೆ. ರಸ್ತೆಗಳ ಅಗಲೀಕರಣ, ಎಪಿಎಂಸಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಆಡಳಿತ ಮಂಡಳಿಯು ಅಗತ್ಯವಿದ್ದು, ತಾವೆಲ್ಲರೂ ಜತೆಗಿದ್ದು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಸಿಎಂ ಬಳಿಗೆ ನಿಯೋಗ: ಕೋಲಾರವು ರಾಜಧಾನಿಗೆ 60 ಕಿಮೀ ದೂರದಲ್ಲಿದ್ದು, ಕೈಗಾರಿಕೆಗಳು ಹೆಚ್ಚಾಗಿವೆ. ಎಲ್ಲದಕ್ಕೂ ಮುಖ್ಯವಾಗಿ ರಿಂಗ್ ರಸ್ತೆ ಅವಶ್ಯವಾಗಿ ಬೇಕಾಗಿದೆ. ಶಾಸಕರು, ಎಂಎಲ್ ಸಿಗಳು, ನಗರಸಭೆ ಆಡಳಿತ ಮಂಡಳಿಯು ಸಿಎಂ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲು ಶೀಘ್ರಕ್ರಮ ಕೈಗೊಳ್ಳುವುದಾಗಿ ಹೇಳಿದರು. ಜಿಲ್ಲೆಯಕೆರೆಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣಗಳ ನ್ನಾಗಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು.
ದೂಳು ಮುಕ್ತ ನಗರ: ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ನೂತನ ಆಡಳಿತ ಮಂಡಳಿಯಿಂದಾಗಿ ಕೋಲಾರ ನಗರಕ್ಕೆ ಕಳೆ ಬಂದಿದೆ. ನಗರದಲ್ಲಿ ನಡೆಯುತ್ತಿರುವ ರಸ್ತೆಗಳ ಅಗಲೀಕರಣ, ಮತ್ತಿತರರ ಕಾಮಗಾರಿಗಳಿಗೆ ಎಲ್ಲರೂಸಹಕಾರ ನೀಡುವ ಮೂಲಕ ಸುಂದರ ಮತ್ತುದೂಳು ಮುಕ್ತ ನಗರವನ್ನಾಗಿಸಬೇಕು ಎಂದು ತಿಳಿಸಿದರು. ಕೆ.ಸಿ.ವ್ಯಾಲಿ ಯೋಜನೆಯಿಂದಾಗಿ ಈಗಾಗಲೇ ಬೋರ್‌ವೆಲ್‌ಗಳು ರೀಚಾರ್ಜ್ ಆಗುತ್ತಿವೆ. ರಾಜಕಾರಣ ಚುನಾವಣೆಗಳಿಗೆ ಮಾತ್ರಸೀಮಿತವಾಗಬೇಕು ಎಂದು ಹೇಳಿದರು.ನಗರಸಭೆ ಪೌರಾಯುಕ್ತ ಶ್ರೀಕಾಂತ್, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಜನತೆಗೆ ನೀರು, ರಸ್ತೆ ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸಿ ಕೋಲಾರ ನಗರ ಅಭಿವೃದ್ಧಿಗೆ ಶ್ರಮಿಸುವೆ.
–ಆರ್.ಶ್ವೇತಾ ಶಬರೀಶ್, ನಗರಸಭೆ ನೂತನ ಅಧ್ಯಕ್ಷ
ಚುನಾಯಿತರಾದ ವರ್ಷದಬಳಿಕ ಆಡಳಿತ ಮಂಡಳಿ ರಚನೆಯಾಗಿದೆ. ಎಲ್ಲರ ಸಹಕಾರ ಪಡೆದು ಪಕ್ಷಾತೀತವಾಗಿ ಕೋಲಾರ ನಗರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ.
– ಎನ್.ಎಸ್.ಪ್ರವೀಣ್‌ಗೌಡ, ನಗರಸಭೆ ನೂತನ ಉಪಾಧ್ಯಕ್ಷ