Advertisement

Power subsidy: ಹಿಮಾಚಲ ಪ್ರದೇಶ ಸರ್ಕಾರಕ್ಕೆ ಆರ್ಥಿಕ ಬಿಕ್ಕಟ್ಟು

09:33 PM Jan 02, 2025 | Team Udayavani |

ಶಿಮ್ಲಾ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಹಿಮಾಚಲ ಪ್ರದೇಶದಲ್ಲಿ ಉದ್ಯೋಗಿಗಳಿಗೆ ವೇತನ ನೀಡಲೂ ಸರ್ಕಾರ ಪರದಾಡುವ ಪರಿಸ್ಥಿತಿ ಎದುರಾಗಿದೆ. ಏತನ್ಮಧ್ಯೆ, ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯ ವಿದ್ಯುತ್‌ ಮಂಡಳಿಯನ್ನು ಉಳಿಸಲು ರಾಜ್ಯದ ಜನತೆಗೆ ವಿದ್ಯುತ್‌ ಸಬ್ಸಿಡಿ ಬಿಟ್ಟುಕೊಡಿ ಎಂದು ಸಿಎಂ ಸುಖ್ವಿಂದರ್ ಸಿಂಗ್‌ ಸುಖು ಮನವಿ ಮಾಡಿದ್ದಾರೆ.

Advertisement

ಇದರ ಮೊದಲ ಹೆಜ್ಜೆಯಾಗಿ ತಾವೂ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಜನತೆಗೆ 150 ಯೂನಿಟ್‌ ವಿದ್ಯುತ್‌ ಸಬ್ಸಿಡಿ ನೀಡುತ್ತಿತ್ತು. ಇದನ್ನು 300 ಯೂನಿಟ್‌ಗೆ ಹೆಚ್ಚಿಸುವುದಾಗಿ ಚುನಾವಣೆ ವೇಳೆ ಕಾಂಗ್ರೆಸ್‌ ಭರವಸೆ ನೀಡಿತ್ತು. ಆದರೀಗ ಆ ಭರವಸೆ ಈಡೇರಿಸುವುದಕ್ಕೂ ಸಾಧ್ಯವಾಗದೇ ಪ್ರಸಕ್ತ ಇರುವ 150 ಯೂನಿಟ್‌ ಸಬ್ಸಿಡಿ ಬಿಟ್ಟುಕೊಡಲು ಕೇಳಿಕೊಂಡಿದೆ.

ಸಬ್ಸಿಡಿಗಾಗಿ ವಾರ್ಷಿಕ 22,000 ಕೋಟಿ ರೂ. ವ್ಯಯಿಸಲಾ ಗುತ್ತಿದೆ. ಸಬ್ಸಿಡಿ ಕಡಿತಗೊಂಡರೆ ಇಲಾಖೆಗೆ ಮಾಸಿಕ 200 ಕೋಟಿ ರೂ. ಉಳಿತಾಯವಾಗುತ್ತದೆ ಎಂಬುದು ಸರ್ಕಾರದ ಉದ್ದೇಶ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next