Advertisement
ಅಂದು ನೊಕಿಯಾ ಯುಗದಲ್ಲಿ ಮೊಟೊರೊಲಾ ಫೋನುಗಳು ವಿಭಿನ್ನ ಕ್ರಶ್ ಹುಟ್ಟಿಸಿದ್ದವು. ತದನಂತರ ಆ ಮೊಬೈಲಿನ ವಿಳಾಸವೇ ಬದಲಾಗುತ್ತಾ ಹೋಯಿತು. ಅಮೆರಿಕಾ ಮೂಲದ ಮೊಟೊರೊಲಾ ಮೊಬಿಲಿಟಿ ಕಂಪನಿಯನ್ನು “ಗೂಗಲ್’ ಖರೀದಿಸಿ, 2013ರಲ್ಲಿ “ಮೋಟೋ ಜಿ’ ಅವತಾರದಲ್ಲಿ ಗ್ರಾಹಕರ ಕೈಸೇರಿತು.
Related Articles
Advertisement
5000 ಸಾವಿರ ಎಂಎಎಚ್ ಬ್ಯಾಟರಿಯೇ ಇದರ ಹೈಲೈಟ್. ಕ್ಯಾಮೆರಾ, ವಿನ್ಯಾಸ ಹೇಗಿದ್ದರೂ ಸೈ, ಮೊಬೈಲ್‌ನಲ್ಲಿ ಚಾರ್ಜ್ ನಿಲ್ಲುವುದು ಮುಖ್ಯ ಎನ್ನುವವರಿಗೆ ಈ ಮೊಬೈಲ್ ಹೇಳಿಮಾಡಿಸಿದ್ದು. “ಕೇವಲ 15 ನಿಮಿಷ ಚಾರ್ಜ್ ಮಾಡಿದರೆ 6 ಗಂಟೆಗಳ ಕಾಲ ಬಳಸಬಹುದು’ ಎನ್ನುತ್ತದೆ ಕಂಪನಿ. ಯುಎಸ್‌ಬಿ ಟೈಪ್ ಸಿ ಪೋರ್ಟ್ ಇದೆ. ಟಬೋì ಚಾರ್ಜ್ (ಅಂದರೆ ಫಾಸ್ಟ್ ಚಾರ್ಜ್) ಇದೆ. ಫೋನ್ ಬೇಗ ಚಾರ್ಜ್ ಆಗಲು ಫಾಸ್ಟ್ ಚಾರ್ಜ್ ಇದ್ದರೆ ಅನುಕೂಲ.
ಈ ಫೋನು ಗೂಗಲ್‌ನ ಅಂಡ್ರಾಯ್ಡ ಒನ್ ಪ್ರೋಗ್ರಾಂಗೆ ಸೇರಿದೆ. ಹೀಗಾಗಿ ಅಂಡ್ರಾಯ್ಡನ ಅಪ್‌ಡೇಟ್‌ಗಳು, ಸೆಕ್ಯೂರಿಟಿ ಪ್ಯಾಚ್‌ಗಳು ಉಳಿದ ಫೋನ್‌ಗಳಿಗಿಂತ ಇದಕ್ಕೆ ಬೇಗನೆ ದೊರಕುತ್ತವೆ. ಈಗ ಇದಕ್ಕೆ ಅಂಡ್ರಾಯ್ಡ 8.1 ಓರಿಯೋವನ್ನೇ ಕೊಡಲಾಗಿದೆ. ಶೀಘ್ರವೇ ಪಿ (ಪೈ) ಅಪ್‌ಡೇಟ್ ಸಿಗಲಿದ್ದು, ಈ ಫೋನ್‌ಗೆ ಖಚಿತವಾಗಿ “ಪಿ’ ಮುಂದಿನ ಅಪ್‌ಡೇಟ್ ಆದ “ಕ್ಯೂ’ ಕೂಡ ನೀಡುವುದಾಗಿ ಮೊಟೋ ತಿಳಿಸಿದೆ.
ಸಾಮಾನ್ಯವಾಗಿ ಮೊಟೊರೊಲಾ ಫೋನ್‌ಗಳು ಅವುಗಳಲ್ಲಿರುವ ಸ್ಪೆಸಿಫಿಕೇಷನ್‌ಗಳಿಗೆ ಹೋಲಿಸಿದರೆ ಸ್ವಲ್ಪ ಜಾಸ್ತಿ ದರ ಹೊಂದಿರುತ್ತಿದ್ದವು. ಆದರೆ, ಈ ಫೋನ್ ದರ ಸ್ಪೆಸಿಫಿಕೇಷನ್‌ಗಳಿಗೆ ಅನುಗುಣವಾಗಿಯೇ ಇದೆ. 6.2 ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇದ್ದು, ಇತ್ತೀಚಿನ ಫ್ಯಾಷನ್ ಆದ ನಾಚ್ ಹೊಂದಿದೆ. (ನಾಚ್ ಅಂದರೆ ಡಿಸ್‌ಪ್ಲೇ ಮೇಲೆ ಸ್ಪೀಕರ್ ಮತ್ತು ಸೆಲ್ಫಿà ಕ್ಯಾಮೆರಾಗೆ ಮಾತ್ರ ಜಾಗ ಬಿಟ್ಟು, ಮೇಲಿನವರೆಗೂ ಡಿಸ್‌ಪ್ಲೇ ಇರುವುದು) 19:9 ರಷ್ಟು ಪರದೆ ಮತ್ತು ಅಂಚಿನ ಅನುಪಾತ ಇದೆ. ಡಾಲ್ಬಿ ಆಡಿಯೋ ನೀಡಲಾಗಿದೆ. ಎಫ್.ಎಂ. ಸೌಲಭ್ಯ ಇದ್ದೇ ಇದೆ.
ಮೆಟಲ್ ಬಾಡಿ ಹೊಂದಿದೆ. ಪರದೆ ಸುಲಭವಾಗಿ ಒಡೆದು ಹೋಗದಂತೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ರಕ್ಷಣೆಯನ್ನೂ ನೀಡಲಾಗಿದೆ. ಫಿಂಗರ್‌ಪ್ರಿಂಟ್ ಸೆನ್ಸಾರ್ ಇದೆ. ಆದರೆ, ಫೇಸ್ ಅನ್‌ಲಾಕ್ ಇಲ್ಲದಿರುವುದು ಅಚ್ಚರಿಯ ವಿಷಯ. ಈಗ 7 ಸಾವಿರ ರೂ.ನ ಫೋನ್‌ಗಳಲ್ಲೂ ಫೇಸ್ ಅನ್‌ಲಾಕ್ ಇರುತ್ತದೆ. ಶಿಯೋಮಿ, ಆನರ್, ಇತ್ತೀಚಿಗೆ ಈ ಲೀಗ್ ಸೇರಿಕೊಂಡ ರಿಯಲ್ ಮಿ ಫೋನ್‌ಗಳ ಸ್ಪರ್ಧೆ ಎದುರಿಸಲು ಲೆನೊವೋ ಸಿದ್ಧತೆ ಮಾಡಿಕೊಂಡು ಈ ಫೋನ್ ಅನ್ನು ಬಿಡುಗಡೆ ಮಾಡಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಇದಕ್ಕೆ ನಿಗದಿ ಪಡಿಸಿರುವ ದರ 16000 ರೂಪಾಯಿ. ದೀಪಾವಳಿಯಲ್ಲಿ ಆನ್‌ಲೈನ್ ಮೂಲಕ ಇದನ್ನು ಖರೀದಿಸಿರುವವರು ಇದುವರೆಗೆ 25,400 ಮಂದಿ ರೇಟಿಂಗ್ ನೀಡಿದ್ದಾರೆ. 5ಕ್ಕೆ 4.4 ರೇಟಿಂಗ್ ಕೊಟ್ಟಿದ್ದಾರೆ. ಅದರಲ್ಲಿ ಕ್ಯಾಮೆರಾಗೆ 3.3, ಬ್ಯಾಟರಿಗೆ 4.6, ಡಿಸ್‌ಪ್ಲೇಗೆ 4.1, ಹಣಕ್ಕೆ ತಕ್ಕ ಮೌಲ್ಯಕ್ಕೆ 4.7, ಕಾರ್ಯಕ್ಷಮತೆಗೆ 4.6 ರೇಟಿಂಗ್ ನೀಡಿದ್ದಾರೆ. “ಕ್ಯಾಮೆರಾ ನಿರೀಕ್ಷಿತ ಮಟ್ಟದಲ್ಲಿಲ್ಲ’ ಎಂದು ಹೇಳಿದ್ದಾರೆ.
* ಕೆ.ಎಸ್. ಬನಶಂಕರ ಆರಾಧ್ಯ