Advertisement

ನ.24ರಂದು ಅಂಜನಿ ಪುತ್ರ ಆಡಿಯೋ ಬಿಡುಗಡೆ

11:03 AM Nov 23, 2017 | Sharanya Alva |

ರಾಜ್‌ಕುಮಾರ ಚಿತ್ರದ ನಂತರ ಪುನೀತ್‌ ರಾಜಕುಮಾರ್‌ ಅವರ ಯಾವುದೇ ಚಿತ್ರ ತೆರೆಕಂಡಿರಲಿಲ್ಲ. ಈಗ ಎಲ್ಲರೂ “ಅಂಜನೀಪುತ್ರ’ ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಇದೇ 24 ರಂದು ಬಿಡುಗಡೆಯಾಗುತ್ತಿದೆ. ಇನ್ನೊಂದು ವಿಶೇಷವೆಂದರೆ,
ಇದೇ ಮೊದಲ ಬಾರಿಗೆ ಪಿಆರ್‌ಕೆ ಆಡಿಯೋ ಸಂಸ್ಥೆ ಮೂಲಕವೇ “ಅಂಜನಿ ಪುತ್ರ’ ಚಿತ್ರದ ಹಾಡುಗಳು ಹೊರಬರುತ್ತಿವೆ. ಈ ಚಿತ್ರವನ್ನು ಹರ್ಷ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಹೊರಬರುತ್ತಿದ್ದಂತೆಯೇ ಚಿತ್ರವೂ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದೆ.

Advertisement

ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ ಎರಡನೇ ಅಥವಾ ಮೂರನೇ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. “ಅಂಜನಿಪುತ್ರ’ ಪಕ್ಕಾ ಫ್ಯಾಮಿಲಿ ಸೆಂಟಿಮೆಂಟ್‌ ಸಿನಿಮಾ. ಇಡೀ ಸಿನಿಮಾ ತಾಯಿ-ಮಗನ ಸೆಂಟಿಮೆಂಟ್‌ ಸುತ್ತ ಸುತ್ತಲಿದೆ.

ಅಂದಹಾಗೆ, ಇದು ತಮಿಳಿನ “ಪೂಜೈ’ ಚಿತ್ರದ ರೀಮೇಕ್‌. ಈಗ ಅದರ ಒನ್‌ಲೈನ್‌ ಇಟ್ಟುಕೊಂಡು ಹರ್ಷ, ಅದನ್ನು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಿಸಿ, “ಅಂಜನಿಪುತ್ರ’ ಮಾಡಿದ್ದಾರೆ. ಈ ಚಿತ್ರವನ್ನು ಎಂ.ಎನ್‌. ಕುಮಾರ್‌ ನಿರ್ಮಿಸಿದ್ದಾರೆ. ಚಿತ್ರದ ಮತ್ತೂಂದು ಹೈಲೈಟ್‌ ಎಂದರೆ ಚಿತ್ರದಲ್ಲಿ ಅನುಭವಿ ನಟರಿರೋದು. ಪುನೀತ್‌ರಾಜಕುಮಾರ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ  ಚಿತ್ರದಲ್ಲಿ ರಮ್ಯಾಕೃಷ್ಣ, ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್‌ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ದೊಡ್ಡ ಗ್ಯಾಪ್‌ನ ನಂತರ ರಮ್ಯಾ ಕೃಷ್ಣ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next