Advertisement
ವೋಲ್ಟೆಜ್, ವಿದ್ಯುತ್ ಕಣ್ಣಾ ಮುಚ್ಚಾಲೆ ಕೊಲ್ಲೂರು ಗ್ರಾಮ ವಲ್ಲದೇ ಹಾಲ್ಕಲ್, ಮುದೂರು, ಜಡ್ಕಲ್ ನಲ್ಲಿ ಕಳೆದ ಹಲವು ವರ್ಷ ಗಳಿಂದ ನಿತ್ಯವೂ ಇದೆ. ಈ ಬಗ್ಗೆ ಜನರು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಕೊಲ್ಲೂರಿನಲ್ಲಿ ಸಂಜೆಯಾದಂತೆ ವಿದ್ಯುತ್ ವೋಲ್ಟೆàಜ್ ಕಡಿಮೆಯಾಗುತ್ತದೆ. ಇದರಿಂದ ಅಂಗಡಿ ಮುಂಗಟ್ಟು, ಬ್ಯಾಂಕ್‌ನವರು ಜನರೇಟರ್ ಮೊರೆ ಹೋಗುವುಂತೆ ಮಾಡಿದೆ. ನಿವಾಸಿಗಳು ಪರಿಹಾರ ಕಾಣದೆ ಪರಿತಪಿಸುವಂತಾಗಿದೆ. ಹಾಲ್ಕಲ್ ಸಬ್ ಸ್ಟೇಶನ್‌ಪೂರ್ಣಗೊಳ್ಳುವುದೇ?
ಹಾಲ್ಕಲ್ ಬಳಿ ಸಬ್ ಸ್ಟೇಶನ್ ನಿರ್ಮಿ ಸುವುದರ ಮೂಲಕ ಕೊಲ್ಲೂರು, ಜಡ್ಕಲ್, ಮುದೂರು, ಈ ಭಾಗದ ನಿವಾಸಿಗಳಿಗೆ ಲೊವೋಲ್ಟೆàಜ್ ಸಮಸ್ಯೆ ಪರಿಹಾರ ವಾಗುವುದೆಂಬ ಭರವಸೆ ಇತ್ತು. ಆದರೆ ಈವರೆಗೂ ಬೇಡಿಕೆ ಈಡೇರಿಲ್ಲ.
Related Articles
Advertisement
ಸೂಕ್ತ ಕ್ರಮ ಕೈಗೊಳ್ಳಲಾಗುವುದುಹಾಲ್ಕಲ್ ಸಬ್ ಸ್ಟೇಶನ್ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಇಲಾಖೆಯ ಅ ಧಿಕಾರಿಗಳೊಡನೆ ಮಾತುಕತೆ ನಡೆಸಿದ್ದೇನೆ. ತಾಂತ್ರಿಕ ದೋಷ ನಿಭಾಯಿಸುವಂತೆ ಅರಣ್ಯ ಹಾಗೂ ಮೆಸ್ಕಾಂ ಇಲಾಖೆಯ ಅ ಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನೂ ವಿಳಂಬವಾದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಉನ್ನತ ಅ ಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು
-ಬಿ.ಎಂ.ಸುಕುಮಾರ ಶೆಟ್ಟಿ, ,
ಶಾಸಕರು ಬೈಂದೂರು ಕ್ಷೇತ್ರ.