Advertisement

30 ಗ್ರಾಪಂನಲ್ಲಿ ಜೆಡಿಎಸ್‌ ಬೆಂಬಲಿಗರಿಗೆ ಅಧಿಕಾರ

06:14 PM Jan 01, 2021 | Team Udayavani |

ಅರಸೀಕೆರೆ: ವಿಧಾನಸಭಾ ಕ್ಷೇತ್ರದ 35 ಗ್ರಾಪಂ ಪೈಕಿ 30ರಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳುಅಧಿಕಾರಕ್ಕೆ ಬರಲಿದ್ದು, ನಾಲ್ಕರಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿಗರು ಸಮಬಲ ಸಾಧಿಸಿದ್ದಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.

Advertisement

ಮಾರುತಿ ನಗರದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಾಲೂಕಿನ 43 ಗ್ರಾಪಂನಲ್ಲಿ 35 ಕ್ಷೇತ್ರಕ್ಕೆ ಸೇರಿದ್ದು, 527 ಸ್ಥಾನಗಳಲ್ಲಿ ಜೆಡಿಎಸ್‌ 389,ಕಾಂಗ್ರೆಸ್‌ 53, ಬಿಜೆಪಿ ಬೆಂಬಲಿತರು 41 ಮಂದಿಹಾಗೂ 34 ಇತರೆ ಅಭ್ಯರ್ಥಿಗಳು ಆಯ್ಕೆಯಾಗಿದ್ದು,30 ಗ್ರಾಪಂನಲ್ಲಿ ಜೆಡಿಎಸ್‌ ಬೆಂಬಲಿತರು ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.

ಕ್ಷೇತ್ರದ ಮತದಾರರು ವಿರೋಧಿಗಳ ಸುಳ್ಳು ಆರೋಪಗಳಿಗೆ ಮನ್ನಣೆ ನೀಡದೆ, ಕಳೆದ ಬಾರಿ 25 ಗ್ರಾಪಂಗಳಲ್ಲಿ ಪಕ್ಷ ಬೆಂಬಲಿಗರಿಗೆ ಅಧಿಕಾರ ನೀಡಿದ್ದರು. ಈ ಬಾರಿ ಕ್ಷೇತ್ರದ ಅಭಿವೃದ್ಧಿ ಪರವಾಗಿ ಮತದಾನ ಮಾಡುವ ಮೂಲಕ 30 ಗ್ರಾಪಂಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಆಶೀರ್ವಾದಮಾಡಿರುವುದು ಸಂತಸದ ಸಂಗತಿ ಎಂದರು.

ಕಸಬಾ ಹೋಬಳಿ: ಅಗ್ಗುಂದ ಮುರುಂಡಿ, ಹಾರನಹಳ್ಳಿ, ತಳಲೂರು, ಬೆಳಗುಂಬ, ದುಮ್ಮೇನಹಳ್ಳಿ, ಗೀಜೀಹಳ್ಳಿ, ಜಾಜೂರು, ಹಬ್ಬನಘಟ್ಟ 9 ಗ್ರಾಪಂಗಳು, ಬಾಣಾವರ ಹೋಬಳಿ ಹಿರಿ ಯೂರು, ಪುರಲೇಹಳ್ಳಿ, ಬೆಂಡೆಕೆರೆ, ಕುರುವಂಕ, ಕಾಚೀಘಟ್ಟ, ಶ್ಯಾನೆಗೆರೆ, 6 ಗ್ರಾಪಂಗಳಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಸ್ಪಷ್ಟ ಬಹುಮತ ಪಡೆದಿದ್ದಾರೆ.

ಕಣಕಟ್ಟೆ ಹೋಬಳಿ: ವ್ಯಾಪ್ತಿಯ 9 ಗ್ರಾಪಂಗಳ ಪೈಕಿ ಕಣಕಟ್ಟೆ, ಡಿ.ಎಂ.ಕುರ್ಕೆ, ನರಸೀಪುರ 3 ಗ್ರಾಪಂ ಗಳಲ್ಲಿಜೆಡಿಎಸ್‌ ಬೆಂಬಲಿಗರು ಸಮಬಲ ಸಾಧಿಸಿದ್ದಾರೆ. ಕಾಮಸಮುದ್ರ, ಶಂಕರನಹಳ್ಳಿ, ಮಾಡಾಳು,ಜೆ.ಸಿ.ಪುರ, ಕಲ್ಗುಂಡಿ, ರಾಂಪುರ ಗ್ರಾಪಂನಲ್ಲಿಜೆಡಿಎಸ್‌ ಬೆಂಬಲಿಗರು ಅಧಿಕಾರ ನಡೆಸಲಿದ್ದಾರೆ.

Advertisement

ಗಂಡಸಿ ಹೋಬಳಿ: ಗಂಡಸಿ ಗ್ರಾಪಂನ 12 ಸ್ಥಾನಗಳಲ್ಲಿ ಕಾಂಗ್ರೆಸ್‌ 8, ಜೆಡಿಎಸ್‌ ಬೆಂಬಲಿತರು 4 ಸ್ಥಾನ ಪಡೆದಿದ್ದಾರೆ. ಉಳಿದಂತೆ ಕೆಂಕೆರೆ ಗ್ರಾಪಂನಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಬೆಂಬಲಿಗರು ಸಮಬಲ ಸಾಧಿಸಿದ್ದು, ಕೊಂಡೇನಾಳು, ಲಾಳನಚಗಚಗೆರೆ, ಮುದುಡಿ, ಬಾಗೇಶಪುರ, ರಂಗಾಪುರ, ಯಡುವನಹಳ್ಳಿ, ಹೆಗ್ಗಟ್ಟ, ಬಾಗೀವಾಳು ಗ್ರಾಪಂಗಳಲ್ಲಿ ಜೆಡಿಎಸ್‌ ಬೆಂಬಲಿಗರು ಬಹುಮತ ಸಾಧಿಸಿದ್ದಾರೆ.

ಒಟ್ಟಾರೆ 30 ಗ್ರಾಪಂನಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಜೆಡಿಎಸ್‌ ಬೆಂಬಲಿಗರು ಅಧಿಕಾರದಚುಕ್ಕಾಣಿ ಹಿಡಿಯಲಿದ್ದಾರೆ. ನಾಲ್ಕು ಸಮಬಲವುಳ್ಳ ಗ್ರಾಪಂನಲ್ಲೂ ಜೆಡಿಎಸ್‌ ಬೆಂಬಲಿಗರೇ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಇದೆ.

ಜಿಪಂ ಸದಸ್ಯ ಬಿಳಿಚೌಡಯ್ಯ, ಮಾಜಿ ಅಧ್ಯಕ್ಷ ಹುಚ್ಚೇಗೌಡ, ಮಾಜಿ ಉಪಾಧ್ಯಕ್ಷ ಬಂಡಿಗೌಡ್ರುರಾಜಣ್ಣ, ಜೆಡಿಎಸ್‌ ಮುಖಂಡರಾದ ಧರ್ಮಶೇಖರ್‌, ಗಿರಿಯಪ್ಪ, ಧರ್ಮೆಶ್‌, ಗಂಗಾಧರ್‌,ಗಿರೀಶ್‌, ವೈ.ಕೆ.ದೇವರಾಜು, ನಾಗರಾಜು, ಇನ್ನಿತರರು ಉಪಸ್ಥಿತರಿದ್ದರು.

ನಾನು ನೀಡಿರುವ ಮಾಹಿತಿಯ ಅಂಕಿ ಅಂಶಗಳಲ್ಲಿ ಏನಾದರೂ ವ್ಯತ್ಯಾಸವಿದೆ ಎಂದು ಪ್ರತಿಪಕ್ಷದನಾಯಕರು ಆರೋಪಿಸಿದರೇ ಅದನ್ನು ಸಾಬೀತು ಮಾಡಲು ಸಿದ್ಧ. ಶಿವಲಿಂಗೇಗೌಡ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next