Advertisement

ಸೋಂಕಿನ ವಿರುದ್ಧ ಹೋರಾಟ : ವೈದ್ಯರಿಗೆ ಪ್ರಧಾನಿ ಮೆಚ್ಚುಗೆ

10:37 PM May 17, 2021 | Team Udayavani |

ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿರುವ ವೈದ್ಯರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ದೇಶವಾಸಿಗಳ ಹಾರೈಕೆಯ ಬೆಂಬಲ ಅವರ ಮೇಲೆ ಇರಲಿದೆ ಎಂದು ಹೇಳಿದ್ದಾರೆ.

Advertisement

ಈಶಾನ್ಯ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳ ವೈದ್ಯರ ಜತೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಸಂದರ್ಭದಲ್ಲಿ ಪ್ರಧಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆಯಲ್ಲಿ ಕೊರೊನಾ ಲಸಿಕೆ ನೀಡಿದ್ದು 2ನೇ ಅಲೆಯ ಸಂದರ್ಭದಲ್ಲಿ ಪ್ರಯೋಜನಕ್ಕೆ ಬಂದಿದೆ ಎಂದರು. ಮನೆಯಲ್ಲಿಯೇ ಚೇತರಿಕೆ ಕಾಣುತ್ತಿರುವ ಸೋಂಕಿತರಿಗೆ ಟೆಲೆ ಮೆಡಿಸಿನ್‌ ಬಹಳಷ್ಟು ಸಹಾಯಕಾರಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ತೌಕ್ತೇ ರೌದ್ರಾವತಾರಕ್ಕೆ ನಡುಗಿದ ಮುಂಬೈ : 6 ಮಂದಿ ಸಾವು, ಮೂವರು ನಾಪತ್ತೆ

ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ಇಂಟರ್ನಿಗಳಿಗೆ ರಾಜ್ಯಗಳ ಮಟ್ಟದಲ್ಲಿಯೂ ತರಬೇತಿ ನೀಡುವ ಬಗ್ಗೆ ವೈದ್ಯರು ಮುತುವರ್ಜಿ ವಹಿಸಬೇಕು. ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿಯೂ ಟೆಲೆಮೆಡಿಸಿನ್‌ ವ್ಯವಸ್ಥೆ ಲಭ್ಯವಾಗುವಂತೆ ಮಾಡಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next