Advertisement
ಕೆರೆ ಹಾಗೂ ಕಾಲುವೆಗಳಿಗೆ ತ್ಯಾಜ್ಯ ನೀರು ಹರಿಸುತ್ತಿರುವ 40 ಕೈಗಾರಿಕೆಗಳನ್ನು ಕೂಡಲೇ ಮುಚ್ಚುವಂತೆ ಮಂಡಳಿಯ ಅಧಿಕಾರಿಗಳು ಬುಧವಾರ ಆದೇಶ ಹೊರಿಡಿದ್ದರು. ಆದರೆ, ಈವರೆಗೆ ಕೈಗಾರಿಕೆಗಳು ಆದೇಶ ಪಾಲನೆಗೆ ಮುಂದಾಗದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಕೋರಿರುವ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಕೆರೆ ತ್ಯಾಜ್ಯ ಹರಿಸುವ ಕೈಗಾರಿಕೆಗಳನ್ನು ಯಾವುದೇ ಮುಲಾಜಿಲ್ಲದೆ ಮುಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು, ಬೆಳ್ಳಂದೂರು ಕೆರೆಯಲ್ಲಿ ಗುರುವಾರವೂ ಬಿಡಿಎ ಅಧಿಕಾರಿಗಳು ಹಲ್ಲು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದರು. ಪ್ರಮುಖವಾಗಿ ನಗರಕ್ಕೆ ಚೆನ್ನೈನಿಂದ ಆಗಮಿಸುತ್ತಿರುವ ಜೊಂಡು ತೆರವುಗೊಳಿಸುವ ಬೃಹತ್ ಯಂತ್ರಗಳು ಕೆರೆಯನ್ನು ಪ್ರವೇಶಿಸಲು ಅಗತ್ಯವಾದ ವ್ಯವಸ್ಥೆ ಕೆಲಸ ಮುಂದುವರಿಯಿತು. ಬಿಡಿಎ ಅಧಿಕಾರಿಗಳು ಸದ್ಯ ಎರಡು ಹಿಟಾಚಿಗಳು ಮತ್ತು ಒಂದು ಜೆಸಿಬಿ ತೆರವುಗೊಳಿಸುವ ಹುಲ್ಲನ್ನು ಸಾಗಿಸಲು ದಾರಿ ಮಾಡುತ್ತಿದ್ದಾರೆ.
Related Articles
Advertisement