Advertisement

ಶಕ್ತಿ ಕೇಂದ್ರವಾದ ಬಿಎಸ್‌ವೈ ಕಾವೇರಿ ನಿವಾಸ; ಶಿಫಾರಸು ಮಾಡುವಂತೆ ಒತ್ತಡ

04:22 PM Aug 03, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಸಂಪುಟ ರಚನೆಯ ಕಸರತ್ತು ನಡೆಸುತ್ತಿದ್ದರೆ, ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಚಿವಾಕಾಂಕ್ಷಿಗಳು ಭೇಟಿ ಮಾಡಿ, ಸಂಪುಟದಲ್ಲಿ ತಮಗೂ ಅವಕಾಶಕಲ್ಪಿಸಲು ಶಿಫಾರಸು ಮಾಡುವಂತೆ ಒತ್ತಡ ಹೇರುವ ಪ್ರಯತ್ನ ನಡೆಸಿದರು.

Advertisement

ಇದನ್ನೂ ಓದಿ:ಸ್ವಾತಂತ್ರ್ಯ ದಿನಾಚರಣೆಗೆ ಒಲಿಂಪಿಕ್ಸ್ ಅಥ್ಲೀಟ್ ಗಳು ವಿಶೇಷ ಅತಿಥಿಗಳು: ಪ್ರಧಾನಿ ಆಹ್ವಾನ

ಯಡಿಯೂರಪ್ಪ ಅವರ ಕಾವೇರಿ ನಿವಾಸ ಸಚಿವಾಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರಿಂದ ತುಂಬಿದ್ದು, ಬಿಜೆಪಿಯ ಪರ್ಯಾಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿತ್ತು. ಗಂಗಾ ಮತಸ್ಥ ಸಮುದಾಯಕ್ಕೆ ಸೇರಿರುವ ಮೂವರು ಶಾಸಕರಾದ ಎನ್‌.ರವಿಕುಮಾರ್‌, ಸಾಬಣ್ಣ ತಳವಾರ ಹಾಗೂ ಲಾಲ್‌ಜಿ ಮೆಂಡನ್‌ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ
ಮಾಡಿದರು. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್‌, ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ, ರಾಮದುರ್ಗ ಶಾಸಕ ಮಹದೇವಪ್ಪಯಾದವಾಡಅವರು ತಮ್ಮಬೆಂಬಲಿಗರೊಂದಿಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ಬಾರಿ ತಮಗೂ ಸಚಿವ ಸಂಪುಟದಲ್ಲಿ ಸ್ಥಾನ ಕೊಡಿಸುವಂತೆ ಮನವಿ ಮಾಡಿದರು.

ಮಂಗಳವಾರವೂ ಕೂಡಾ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಸಚಿವಾಕಾಂಕ್ಷಿಗಳ ದಂಡೇ ನೆರೆದಿತ್ತು. ಯಾದಗಿರಿ ಶಾಸಕ ರಾಜುಗೌಡ, ರೇಣುಕಾಚಾರ್ಯ ಸೇರಿದಂತೆ ಹಲವರು ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದಾಗಿ ವರದಿ ತಿಳಿಸಿದೆ.

ಸಚಿವ ಸಂಪುಟದ ವಿಚಾರವಾಗಿ ಇನ್ನೂ ಯಾವುದೇ ಕರೆ ಬಂದಿಲ್ಲ. ಬುಧವಾರ ತಪ್ಪಿದರೆ ಗುರುವಾರದೊಳಗೆ ತೀರ್ಮಾನವಾಗಬಹುದು.ಮುಖ್ಯಮಂತ್ರಿಗಳು ದೆಹಲಿಯಲ್ಲಿ ಇರುವುದರಿಂದ ಇನ್ನೂ ಯಾವುದೇ ಸೂಚನೆ ಬಂದಿಲ್ಲ. ಎರಡನೇ ಬಾರಿ ಸಚಿವರಾಗುವ ವಿಚಾರಕ್ಕೆಕಾದು ನೋಡೋಣ.
●ಬಿ.ಸಿ. ಪಾಟೀಲ, ಮಾಜಿ ಸಚಿವ

Advertisement

ಸಂಪುಟಕ್ಕೆ ನನ್ನನ್ನು ಸೇರಿಸದಿರಲು ಯಾವುದೇ ಕಾರಣ ಇಲ್ಲ. ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಅನುಕಂಪ ಇದೆ. ನಾನು ಅವರ ಜತೆ ಜತೆಯಲ್ಲಿ ಬೆಳೆದವನು. ನನ್ನನ್ನು ಯಡಿಯೂರಪ್ಪ ಗುರುತಿಸುತ್ತಾರೆ. ಸಂಘಸಹ ಗುರುತಿಸುತ್ತದೆ. ಈ ಬಾರಿ ಸಚಿವನಾಗುತ್ತೇನೆ.
●ಅರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ

ಗಂಗಾ ಮತಸ್ಥ ಸಮುದಾಯಕ್ಕೆ ಸೇರಿರುವ ಲಾಲಾಜಿ ಮೆಂಡನ್‌, ಎಂಎಲ್‌ಸಿಗಳಾದ ಎನ್‌. ರವಿಕುಮಾರ್‌, ಸಾಬಣ್ಣ ತಳವಾರ ಮೂವರಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಯಡಿಯೂರಪ್ಪ ಅವರಿಗೆ ಒತ್ತಾಯ ಮಾಡಿದ್ದೇವೆ. ಅವರು ಸಚಿವ ಸ್ಥಾನಕೊಡಿಸಲಿದ್ದಾರೆಂಬ ಭರವಸೆ ಇದೆ.
●ಭೀಷ್ಮ ಚೌಡಯ್ಯ ಸ್ವಾಮೀಜಿ,
ಅಂಬಿಗರ ಚೌಡಯ್ಯ ಗುರು ಪೀಠ

Advertisement

Udayavani is now on Telegram. Click here to join our channel and stay updated with the latest news.

Next