Advertisement

ಬಡತನವನ್ನು ಪುಸ್ತಕದಿಂದ ಕಲಿತಿಲ್ಲ: ಪ್ರಧಾನಿ ಮೋದಿ

10:14 AM Nov 01, 2019 | sudhir |

ರಿಯಾದ್‌: “ನಾನು ಬಡತನ ವನ್ನು ಪುಸ್ತಕ ಓದಿ ತಿಳಿದುಕೊಂಡಿದ್ದಲ್ಲ. ಬಡತನದಿಂದಲೇ ಬೆಳೆದುಬಂದವನು. ರೈಲು ನಿಲ್ದಾಣದಲ್ಲಿ ಟೀ ಮಾರಿ ಬದುಕಿ ದವನು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

ಸೌದಿ ಅರೇಬಿಯಾದಲ್ಲಿ ನಡೆದ ಫ್ಯೂಚರ್‌ ಇನ್‌ವೆಸ್ಟ್‌ ಮೆಂಟ್‌ ಇನೀಷಿಯೇಟಿವ್‌ (ಎಫ್ಐಐ) ಕಾರ್ಯಕ್ರಮದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ದೊಡ್ಡ ರಾಜಕೀಯ ಕುಟುಂಬದ ಹಿನ್ನೆಲೆ ಯವನಲ್ಲ. ಬಡತನದ ಬಗ್ಗೆ ಪುಸ್ತಕ ಗಳಿಂದ ತಿಳಿದುಕೊಂಡವನಲ್ಲ. ಬಡತನ ದಲ್ಲೇ ಬದುಕಿದವನು. ಚಹಾ ಮಾರಿ ಈಗ ಇಲ್ಲಿಯವರೆಗೆ ತಲುಪಿದ್ದೇನೆ ಎಂದಿದ್ದಾರೆ.

ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಬಡತನ ನಿರ್ಮೂಲನೆಯಲ್ಲಿ ಯಶಸ್ವಿಯಾಗುತ್ತದೆ. ನಾವು ಬಡವರ ಸಬಲೀಕರಣ ಮಾಡುವ ಮೂಲಕ ಬಡತನದ ವಿರುದ್ಧ ಹೋರಾಡುತ್ತಿದ್ದೇವೆ. ಬಡವರಿಗೂ ಘನತೆ ಎಂಬುದಿರುತ್ತದೆ. ನಾನೇ ಸ್ವತಃ ಬಡತನವನ್ನು ಕೊನೆಗಾಣಿ ಸುತ್ತೇನೆ ಎಂದು ಬಡವನೊಬ್ಬ ಹೇಳಿಕೊಂಡರೆ ಅದಕ್ಕಿಂತ ತೃಪ್ತಿಯ ವಿಚಾರ ಬೇರೊಂದಿಲ್ಲ. ನಾವೆಲ್ಲರೂ ಆತನಿಗೆ ಘನತೆಯನ್ನು ಒದಗಿಸಿ, ಸಬಲೀಕರಣಕ್ಕೆ ಸಹಾಯ ಮಾಡಬೇಕು ಎಂದು ಮೋದಿ ಹೇಳಿದ್ದಾರೆ.

ಸ್ವದೇಶಕ್ಕೆ ವಾಪಸ್‌: ತಮ್ಮ ಒಂದು ದಿನದ ಸೌದಿ ಅರೇಬಿಯಾ ಭೇಟಿ ಮುಗಿಸಿ ಪ್ರಧಾನಿ ಮೋದಿ ಬುಧವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ. ಸೌದಿ ದೊರೆ ಸೇರಿದಂತೆ ಅಲ್ಲಿನ ಪ್ರಮುಖ ನಾಯಕತ್ವದೊಂದಿಗೆ ಮಾತುಕತೆ ನಡೆಸಿರುವ ಮೋದಿ ಪ್ರಮುಖ ಆರ್ಥಿಕ ವೇದಿಕೆಯಲ್ಲೂ ಮಾತನಾಡುವ ಮೂಲಕ ರಿಯಾದ್‌ ಭೇಟಿಯನ್ನು ಯಶಸ್ವಿಯಾಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next