Advertisement

ಸಾಧನೆಗೆ ಬಡತನ ಅಡ್ಡಿಯಾಗದು: ರಾಮಚಂದ್ರ

10:32 AM May 17, 2018 | Team Udayavani |

ಆನೇಕಲ್‌: ಸಾಧನೆಗೆ ಬಡತನ ಅಡ್ಡಿಯಾಗದು ಎಂದು ಹೆಬ್ಬಗೋಡಿ ಸರ್ಕಾರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ತಿಳಿಸಿದರು.

Advertisement

ಹೆಬ್ಬಗೋಡಿಯ ಓಣಮ್ಮ ದೇವಾಲಯದ ಆವರಣದಲ್ಲಿ ಮಲೇಶಿಯಾದಲ್ಲಿ ನಡೆದ ಇಂಟರ್‌ ನ್ಯಾಷನಲ್‌ ಕರಾಟೆ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಹೆಬ್ಬಗೋಡಿಯ ಪವಿತ್ರ ಪಬ್ಲಿಕ್‌ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳು ಬಡತನದಲ್ಲಿದ್ದರೂ ಮಲೇಶಿಯಾದಲ್ಲಿ ನಡೆದ ಕರಾಟೆ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ತಾಲೂಕಿಗೆ ಕೀರ್ತಿ ತಂದು ಕೊಟ್ಟಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಾಧನೆಗೆ ಬೇಕಾದದ್ದು ಸತತ ಪರಿಶ್ರಮ ಮತ್ತು ಏಕಾಗ್ರತೆ ಬಹಳ ಮುಖ್ಯವಾಗಿದ್ದು ವಿದ್ಯಾರ್ಥಿಗಳು ಕಲಿಕೆ ಸಮಯದಲ್ಲಿ ಬೇರೆ ಕಡೆ ಆಕರ್ಷಣೆಗೆ ಒಳಗಾಗದೆ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ಹೆಬ್ಬಗೋಡಿಯ ಪವಿತ್ರ ಪಬ್ಲಿಕ್‌ ಶಾಲೆ ವಿದ್ಯಾರ್ಥಿಗಳಾದ ಸಂತೋಷ್‌, ಪ್ರೇಮ್‌, ಸಚಿತ್‌, ಅಶೋಕ್‌ ಕರಾಟೆಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು.

ಹೆಬ್ಬಗೋಡಿ ನಗರಸಭೆ ಅಧ್ಯಕ್ಷೆ ಗಿರಿಜಾ ಮಂಜುನಾಥ್‌, ಮಾಜಿ ಉಪಾಧ್ಯಕ್ಷ ಶ್ರೀನಿವಾಸ್‌ರೆಡ್ಡಿ, ನಗರಸಭೆ ಸದಸ್ಯರಾದ ಪುಷ್ಪಾ ರಾಮಚಂದ್ರ, ಮುನಿಯಲ್ಲಪ್ಪ, ಎಂ.ಜಯರಾಂ, ಮುಖಂಡರಾದ ಮುರುಗೇಶ್‌, ಮಂಜುನಾಥ್‌, ಹರೀಶ್‌, ಶಾಂತಮಣಿ ಮತ್ತಿತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next