Advertisement

ಶಿಕ್ಷಣದಿಂದ ಬಡತನ ನಿವಾರಣೆ: ಶಾಸಕ ಬಂಗೇರ

10:37 AM Jun 05, 2017 | |

ವೇಣೂರು: ಹೆತ್ತವರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಬುದ್ಧಿವಂತರನ್ನಾಗಿ ಮಾಡಿ. ಮಕ್ಕಳಲ್ಲಿ ಗುರಿ ಬೇಕು. ಅದನ್ನು ತಲುಪಲು ಹಠ ಬೇಕು. ಎಲ್ಲರೂ ವಿದ್ಯಾವಂತರಾದಾಗ ದೇಶದ ಬಡತನ ನಿವಾರಣೆ ಆಗಲು ಸಾಧ್ಯ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

Advertisement

ಅವರು ರವಿವಾರ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ವತಿಯಿಂದ ಜರಗಿದ 13ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಉಚಿತ ಆರೋಗ್ಯ ಶಿಬಿರದ ಉದ್ಘಾಟನೆಯನ್ನು ನೆರ ವೇರಿಸಿ ಮಾತನಾಡಿದರು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಶಿಕ್ಷಣ ಕ್ಷೇತ್ರದ ಹರಿಕಾರ ಪ್ರಕಾಶ್‌ ಅಂಚನ್‌ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸ ಬೇಕಾಗಿದೆ. ವ್ಯವಹಾರಕ್ಕೆ ಇಂಗ್ಲಿಷ್‌ ಭಾಷೆ ಅಗತ್ಯವಾಗಿದ್ದು, ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ ಬೋಧನೆ ಕಡ್ಡಾಯವಾಗ ಬೇಕು ಎಂದರು. ಸುಮಾರು 5,000 ವಿದ್ಯಾರ್ಥಿಗಳು ಪುಸ್ತಕಗಳನ್ನು ಪಡೆದುಕೊಂಡರು.

ಸಮ್ಮಾನ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಧಿಕ ಅಂಕ ಗಳಿಸಿದ ಜೋಯೆಲ್‌ ಆ್ಯಂಟನಿ, ಯುಪಿಎಸ್‌ಸಿಯಲ್ಲಿ 37ನೇ ರ್‍ಯಾಂಕ್‌ ಗಳಿಸಿದ ನವೀನ್‌ ಭಟ್‌, ಕಬಡ್ಡಿ ಆಟಗಾರ ಸುಕೇಶ್‌ ಹೆಗ್ಡೆ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಪ್ರಕಾಶ್‌ ಅಂಚನ್‌, ವರ್ಗಾವಣೆಗೊಂಡಿರುವ ಕ.ವಿ.ಗ್ರಾ. ಬ್ಯಾಂಕ್‌ನ ಮ್ಯಾನೇಜರ್‌ ದಿನೇಶ್‌ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು.  ಅರಮನೆಯ ವತಿಯಿಂದ ಸರಸ್ವತಿ ಅಮ್ಮ ಅವರು 25 ಮಂದಿಗೆ ವಸ್ತ್ರದಾನ ನೆರವೇರಿಸಿದರು.

ಯುವಶಕ್ತಿ ಆಲಡ್ಕ ಹಿಂದೂ ವಾರಿಯರ್ ವಾಟ್ಸ್‌ಆ್ಯಪ್‌ ಗ್ರೂಪ್‌ ಸದಸ್ಯರಿಂದ 50,000 ರೂ. ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು.

Advertisement

ಕೈಪಿಡಿ ಬಿಡುಗಡೆ
ಸಂಪತ್‌ ಜೈನ್‌ ನೂರಳ್‌ಬೆಟ್ಟು ಸಂಪಾದಕತ್ವದಲ್ಲಿ ಮುದ್ರಣ ಗೊಂಡಿರುವ ಅಳದಂಗಡಿ ಮಾಹಿತಿ ಕೈಪಿಡಿಯನ್ನು ಶಾಸಕ ವಸಂತ ಬಂಗೇರ ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಮಂಗ ಳೂರು ಕೆಎಂಸಿ ಸಮೂಹ ಸಂಸ್ಥೆ ಗಳ ಅಧೀಕ್ಷಕ ಡಾ| ಆನಂದ ವೇಣು ಗೋಪಾಲ್‌, ಕಬಡ್ಡಿ ಆಟಗಾರ ಸುಕೇಶ್‌ ಹೆಗ್ಡೆ, ಮಿತ್ತಮಾರು ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕುಮಾರ್‌ ಮಿತ್ತಮಾರು, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಬೆಳ್ತಂಗಡಿ ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್‌ ಆರ್‌. ಸುವರ್ಣ, ತಾ.ಪಂ. ಸದಸ್ಯೆ ವಿನೂಷಾ‌ ಪ್ರಕಾಶ್‌, ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷೆ ಯಶೋದಾ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದ ಸಂಯೋಜಕ ರಾದ ಅಳದಂಗಡಿ ಶ್ರೀ ಸತ್ಯ ದೇವತೆ ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ ಪ್ರಸ್ತಾವನೆ ಗೈದರು. ಶಿಕ್ಷಕ ಅಜಿತ್‌ ಕುಮಾರ್‌ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿ ಮೋಹನದಾಸ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next