Advertisement

ಎಲ್ಲೆಂದರಲ್ಲಿ ಬಿಸಾಡುತ್ತಿರುವ ಕೋಳಿ ತ್ಯಾಜ್ಯ: ರೋಗ ಭೀತಿ

09:36 AM Jan 08, 2019 | |

ಗುಡಿಬಂಡೆ: ಪಟ್ಟಣ ಪಂಚಾಯಿತಿಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಪಟ್ಟಣ ಸೇರಿದಂತೆ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಕೋಳಿ ಅಂಗಡಿಗಳ ಮಾಲೀಕರು ಕೋಳಿ ತಾಜ್ಯವನ್ನು ಸುರಿಯುತ್ತಿರುವುದರಿಂದ ಮಾರಕ ರೋಗಗಳು ಹರಡುವ ಭೀತಿ ಜನತೆಯಲ್ಲಿ ಉಂಟಾಗಿದೆ.

Advertisement

ಮಾರಕ ರೋಗ ಹರಡುವ ಭೀತಿ: ಜನಸಂದಣೆಯಿಂದ ಕೂಡಿರುವ ಪಟ್ಟಣದಲ್ಲಿ ಸುಮಾರು 10 ಕ್ಕೂ ಅಧಿಕ ಕೋಳಿ ಅಂಗಡಿಗಳಿದ್ದು, ಸಾವಿರಾರು ಕೆಜಿ ಚಿಕನ್‌ ವಹಿವಾಟು ಪಟ್ಟಣದಲ್ಲಿ ನಡೆಯುತ್ತದೆ. ಕೋಳಿ ಕಟಾವು ನಂತರ ಸಿಗುವ ತಾಜ್ಯವನ್ನು ಪಟ್ಟಣ ಸೇರಿದಂತೆ ಪಟ್ಟಣ ಸಮೀಪದ ಪ್ರಸಿದ್ಧ ಜನರ ಜೀವನಾಡಿ ಅಮಾನಿ ಭೈರಸಾಗರ ಕೆರೆಯ ಸಮೀಪ ಹಾಗೂ ವಾಪಸಂದ್ರ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗುವ ಸ್ಥಳ ಸೇರಿದಂತೆ ಅಧಿಕ ಸಾರ್ವಜನಿಕರು ಓಡಾಡುವ ಪ್ರದೇಶ ಗಳಲ್ಲಿ ಪ್ರತಿನಿತ್ಯ ತ್ಯಾಜ್ಯ ಸುರಿಯಲಾಗುತ್ತಿದ್ದು, ಜನತೆಯಲ್ಲಿ ಮಾರಕ ರೋಗಗಳು ಹರಡುವ ಭೀತಿ ಶುರುವಾಗಿದೆ.

ಮನಬಂದಂತೆ ತಾಜ್ಯ ವೀಲೆವಾರಿ: ಪಟ್ಟಣದ ಹತ್ತಾರು ಕೋಳಿ ಅಂಗಡಿ ಮಾಲೀಕರು ತ್ಯಾಜ್ಯ ವಿಲೇವಾರಿಯನ್ನು ನಿರ್ದಿಷ್ಟ ಸ್ಥಳದಲ್ಲಿ ಮಾಡುತ್ತಿಲ್ಲ. ವ್ಯಾಪಾರ ವಹಿವಾಟು ಮುಗಿದ ನಂತರ ರಾತ್ರಿ ತ್ಯಾಜ್ಯವನ್ನು ಮನಬಂದಂತೆ ಎಲ್ಲೆಂದರಲ್ಲಿ ತಂದು ಸುರಿಯುತ್ತಿದ್ದಾರೆ. ತಾಜ್ಯದ ದುರ್ವಾಸನೆ ಬೀದಿ ಬೀದಿಗಳಿಗೆ ಆವರಿಸುತ್ತಿದ್ದು, ಸೊಳ್ಳೆ, ನೊಣಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದು, ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ.

ಪಟ್ಟಣ ಸೇರಿದಂತೆ ಹೊರವಲಯದಲ್ಲಿ ಸುರಿಯುತ್ತಿರುವ ಕೋಳಿ ತ್ಯಾಜ್ಯ ಮತ್ತು ಇತರೆ ಕೊಳೆತ ಕಸವನ್ನು ಸಂಬಂಧ ಪಟ್ಟ ಇಲಾಖೆಯವರು ಅನೇಕ ದಿನ ಗಳಾದರೂ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಕಸದ ರಾಶಿ ರಾಶಿ ಅಲ್ಲೇ ಕೊಳೆತು ದುರ್ವಾಸನೆ ಬೀರುತ್ತಿದೆ. 

ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯು ವುದನ್ನು ನಿಯಂತ್ರಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಎಚ್ಚೆತ್ತುಕೊಳ್ಳಬೇಕು. ಇಲ್ಲದ್ದಿದಲ್ಲಿ ಡೆಂ, ಚಿಕನ್‌ಗುನ್ಯಾ ಸೇರಿದಂತೆ ಇನ್ನಿತರ ರೋಗಗಳು ಉಲ್ಬಣಗೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ವತ್ಛತೆ ಕಾಪಾಡಲು, ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಿದೆ. 

Advertisement

ಕೋಳಿ ಅಂಗಡಿಗಳ ಮಾಲೀಕರು ಕೋಳಿ ತಾಜ್ಯವನ್ನು ಮನಬಂದತೆ ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಬಾಗೇಪಲ್ಲಿ ರಸ್ತೆಯ ಗುಂಡಾಲಚ್ಚಮ್ಮ ದೇವಸ್ಥಾನ, ವಾಪಸಂದ್ರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ತಾಜ್ಯ ಬಿಸಾಡಿದ್ದು, ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗು ವವರಿಗೆ ತೊಂದರೆಯಾಗಿದೆ.
 ಲಕ್ಷ್ಮೀನಾರಾಯಣ ವಿ, ಮಾಜಿ ಸೆ„ನಿಕ ಗುಡಿಬಂಡೆ

ಗುಡಿಬಂಡೆ ಪಟ್ಟಣದ ಕೋಳಿ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳಲ್ಲಿ ಸಂಗ್ರಹಿಸಿದ ಕೋಳಿ ತಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುತ್ತಿರುವುದರ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಈ ಸಂಬಂಧ ಕೋಳಿ ಅಂಗಡಿಗಳ ಮಾಲೀಕರಿಗೆ ನೋಟಿಸ್‌ ಜಾರಿ
ಮಾಡಲಾಗುವುದು.
 ನಾಗಾರಾಜ್‌, ಮುಖ್ಯಾಧಿಕಾರಿ ಪಂ.ಪಂ, ಗುಡಿಬಂಡೆ

Advertisement

Udayavani is now on Telegram. Click here to join our channel and stay updated with the latest news.

Next