Advertisement

ಕೋಳಿ ಸಾರು ನೆಪ: ಮುಖ್ಯ ಪೇದೆ ಲೈಂಗಿಕ ದೌರ್ಜನ್ಯ

06:05 AM Jul 30, 2017 | Team Udayavani |

ತುಮಕೂರು: ನಗರದಲ್ಲಿ ಪೊಲೀಸರಿಂದಲೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ರಕ್ಷಣೆ ನೀಡಬೇಕಾಗಿರುವ ಪೊಲೀಸರೇ ಭಕ್ಷಕರಾಗುತ್ತಿದ್ದಾರೆ.

Advertisement

ಇತ್ತೀಚೆಗಷ್ಟೇ ಎಎಸ್ಸೆ„ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣ ಮಾಸುವ ಮುನ್ನವೇ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಮುಖ್ಯಪೇದೆಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಇಲ್ಲಿಯ ಜಯನಗರ ಠಾಣೆ ಮುಖ್ಯಪೇದೆ ಮೋಹನ್‌ ಕುಮಾರ್‌ ನೀಚ ಕೃತ್ಯ ಎಸಗಿ ಈಗ ಸಹೋದ್ಯೋಗಿ ಪೊಲೀಸರ ಅತಿಥಿಯಾಗಿದ್ದಾರೆ. ಈ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋಹನ್‌ ಕುಮಾರ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ  ಬೇರೊಬ್ಬ ಮಹಿಳೆ ಮತ್ತು ಆಕೆಯ ಮಗಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದರು ಎನ್ನಲಾಗಿದೆ. ಮೊದಲಿಗೆ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ನಂತರ ಆಕೆಯ ಮಗಳ ಸೌಂದರ್ಯಕ್ಕೆ ಮಾರು ಹೋಗಿ ಆಕೆ ಮೇಲೂ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಅಧಿಕಾರಿಯೊಬ್ಬರು ನಾಟಿ ಕೋಳಿ ಸಾರು ತೆಗೆದುಕೊಂಡು ಬಾ ಎಂದು ಮುಖ್ಯಪೇದೆ ಮೋಹನ್‌ಗೆ ಹೇಳಿದ್ದಾರೆ. ಮೋಹನ್‌ ಹೋಂಗಾರ್ಡ್‌ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರ ಬಳಿ “ನಾಟಿ ಕೋಳಿಸಾರು
ಎಲ್ಲಿ ಮಾಡಿಕೊಡುತ್ತಾರೆ’ ಎಂದು ಕೇಳಿದ್ದಾರೆ. ಅದಕ್ಕೆ ಹೋಂಗಾರ್ಡ್‌ ನಮ್ಮ ಮನೆಯಲ್ಲೇ ಮಾಡಿಸಿಕೊಂಡು ಬರೋಣ ಎಂದಿದ್ದಾರೆ. ಇಬ್ಬರೂ ಜೊತೆಯಲ್ಲಿ ಮನೆಗೆ ಹೋಗಿದ್ದಾರೆ. ಆಗ ಹೋಂಗಾರ್ಡ್‌ ಪತ್ನಿಯ ಸೌಂದರ್ಯಕ್ಕೆ ಮಾರುಹೋದ ಮೋಹನ್‌ಕುಮಾರ್‌, ಅಕ್ರಮ ಸಂಬಂಧ ಬೆಳೆಸಿದ್ದಾರೆ. ಬಳಿಕ ಆಕೆಯ ಮಗಳ ಮೇಲೂ ಕಾಮದೃಷ್ಟಿ ಬೀರಿದ್ದಾರೆ. “ಮಗಳಿಗೆ ಮದುವೆ ಮಾಡುತ್ತೇನೆ, ಅವಳ ಸಹವಾಸ ಬೇಡ’ ಎಂದು ಮಹಿಳೆ ಹೇಳಿದರೂ, ಮೋಹನ್‌ “ನೀನು ಬೇಡ ನಿನ್ನ ಮಗಳು ಬೇಕು’ ಎಂದಿದ್ದಾನೆ. ರೋಸಿದ ತಾಯಿ, ಮಗಳು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಕುರಿತು ಎಸ್‌ಪಿ ಡಾ.ದಿವ್ಯಾಗೋಪಿನಾಥ್‌ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಪೇದೆಯಿಂದ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ನಿಜ ಎಂದು ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next