Advertisement
ಕೊರಟಗೆರೆ: ನಾಮಫಲಕವೇ ಇಲ್ಲದ ಖಾಸಗಿ ಕೋಳಿಫಾರಂ.. ಭದ್ರತೆಯೇ ಇಲ್ಲದ ಕೋಳಿಫಾರಂನಲ್ಲಿ ಬಾಲಕಾರ್ಮಿಕರ ಕೆಲಸ.. ಸ್ವಚ್ಚತೆಯೇ ಇಲ್ಲದ ಕೋಳಿಫಾರಂನಲ್ಲಿ ದುರ್ವಾಸನೆ ಹೆಚ್ಚಾಗಿ ನೋಣಗಳ ಸಾಮ್ರಾಜ್ಯವೇ ಸ್ಥಾಪನೆ.. ಸಾಂಕ್ರಾಮಿಕ ರೋಗದ ಬೀತಿಯಿಂದ ಗುಳೆ ಹೊರಡಲು ಮುಂದಾದ ರೈತಾಪಿವರ್ಗ.. ಎರಡು ವರ್ಷದ ಸಮಸ್ಯೆಯ ವಿರುದ್ದ ಕ್ರಮಕೈಗೊಳ್ಳದೇ ಮೌನಕ್ಕೆ ಶರಣಾದ ಗ್ರಾಪಂ ಮತ್ತು ಆರೋಗ್ಯ ಇಲಾಖೆಯ ಒಳಮರ್ಮವೇನು ಎಂಬುದೇ ಯಕ್ಷಪ್ರಶ್ನೆ.
Related Articles
Advertisement
ಗುಳೆ ಹೊರಡಲು ಸಿದ್ದರಾದಗ್ರಾಮಸ್ಥರು..ನೋಣಗಳ ಹಾವಳಿ ಹೆಚ್ಚಾಗಿ ಬೊಮ್ಮಲದೇವಿಪುರ, ಶಿರಿಗೋನಹಳ್ಳಿ, ತೊಗರಿಘಟ್ಟ, ಶಕುನಿತಿಮ್ಮನಹಳ್ಳಿ, ಕಳ್ಳಿಪಾಳ್ಯ, ಮುದ್ದನಹಳ್ಳಿ, ದುಗ್ಗೇನಹಳ್ಳಿಯ ಗ್ರಾಮಸ್ಥರಿಗೆ ಸೇರಿ 20 ಗ್ರಾಮಗಳಿಗೆ ಸಮಸ್ಯೆ ಎದುರಾಗಿದೆ. ಕೋಳಿಫಾರಂ ಮುಚ್ಚಿಸಿ ಅಥವಾ ನಾವೇ ಗ್ರಾಮ ಬಿಟ್ಟು ಹೋಗುತ್ತೇವೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದಿತಿಮ್ಮಪ್ಪ ಸನ್ನಿಧಿಯಲ್ಲಿ ಮದುವೆ, ನಾಮಕರಣ ಸೇರಿದಂತೆ ತಿಂಗಳಿಗೆ 10ಕ್ಕೂ ಅಧಿಕ ಶುಭ ಸಮಾರಂಭ ನಡೆಯುತ್ತವೆ. ಭಕ್ತರು ತಿನ್ನುವ ಊಟ ಮತ್ತು ತಿಂಡಿಯಲ್ಲಿ ನೋಣವೇ ಸೀಗುತ್ತೀವೆ. ತರಕಾರಿಯ ಮೇಲೆ ನೋಣಗಳ ರಾಶಿಯೇ ಬಂದು ನಿಲ್ಲುತ್ತೀರುವ ಪರಿಣಾಮ ಶುಭ ಸಮಾರಂಭವೇ ಸ್ಥಗೀತವಾಗಿವೆ. ಬಾಲ ಕಾರ್ಮಿಕರಿಂದ ಕೂಲಿ ಕೆಲಸ.. ಹೊರರಾಜ್ಯದ 40 ಕ್ಕೂ ಅಧಿಕ ಕಾರ್ಮಿಕರ ಜೊತೆ 20 ಕ್ಕೂ ಅಧಿಕ ಪುಟಾಣಿ ಮಕ್ಕಳು ಮತ್ತು ಬಾಲಕಾರ್ಮಿಕರು ಇದ್ದಾರೆ. ಬಾಲಕಾರ್ಮಿಕರಿಗೆ ಸಮರ್ಪಕ ಭದ್ರತೆ ಮತ್ತು ಸೌಲಭ್ಯವೇ ಮರೀಚಿಕೆ ಆಗಿದೆ. ಅಕ್ಷರದ ಜ್ಞಾನ ಮತ್ತು ಭಾಷೆಯ ಪರಿಚಯವೇ ಇಲ್ಲದ ಇವರ ನೋವಿನ ಕತೆ ಕಾರ್ಮಿಕ ಇಲಾಖೆ ಕೇಳಬೇಕಿದೆ. ಕೋಳಿ ಸಾಕಾಣಿಕೆಗೆ ಮಾಲೀಕ ಗ್ರಾಪಂಯ ಅನುಮತಿ ಪಡೆದಿರೋದು ಕೇವಲ ೧ಶೇಡ್‌ಗೆ ಮಾತ್ರ. ಆದರೇ ನಿರ್ಮಾಣ ಮಾಡಿರೋದು 10 ಶೆಡ್. ವ್ಯವಸ್ಥಾಪಕ ಹೇಳ್ತಿರೋದು 80 ಸಾವಿರ ಕೋಳಿ ಆದರೇ ಕೋಳಿ ಸಾಕಾಣಿಕೆಯ ನಿಜವಾದ ಅಂಕಿಅಂಶ ಇರೋದು 3ಲಕ್ಷಕ್ಕೂ ಅಧಿಕ. ಪ್ರತಿನಿತ್ಯ 1 ಲಕ್ಷಕ್ಕೂ ಅಧಿಕ ಮೊಟ್ಟೆಗಳ ವಹಿವಾಟು ನಡೆಯುತ್ತದೆ. ಆದಾಯ ಇಲಾಖೆಗೆ ವಂಚಿಸುವ ಕೆಲಸವು ನಡೆಯುತ್ತೀದೆ. ಅನೈರ್ಮಲ್ಯ ಹೆಚ್ಚಾಗಿ ನೋಣಗಳ ಸಾಮ್ರಾಜ್ಯವೇ ಸೃಷ್ಟಿಯಾಗಿದೆ. ನೋಣಗಳ ಹಾವಳಿಗೆ ರೈತರ ಕೃಷಿಬೆಳೆ ನಾಶವಾಗಿವೆ. ಕೆಮ್ಮು-ಜ್ವರದಿಂದ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುತ್ತೀದೆ. ಆದಿತಿಮ್ಮಪ್ಪ ದೇವಾಲಯದಲ್ಲಿ ಶುಭ ಸಮಾರಂಭ ಸ್ಥಗೀತವಾಗಿವೆ. ತಹಶೀಲ್ದಾರ್ ಮತ್ತು ಗ್ರಾಪಂಗೆ ದೂರು ನೀಡಿದ್ದೇವೆ. ಕೋಳಿಫಾರಂ ಮುಚ್ಚಿಸದಿದ್ದರೇ ನಾವೇಲ್ಲರೂ ಊರು ಬೀಡುತ್ತೇವೆ. – ಜನಾರ್ಧನ. ಸ್ಥಳೀಯ ರೈತ. ತೊಗರಿಘಟ್ಟ ಗೀತಾ ಕೋಳಿಫಾರಂನಲ್ಲಿ 36 ಕಾರ್ಮಿಕ ಕುಟುಂಬಗಳಿವೆ. 3 ತಿಂಗಳಿಗೆ ಒಮ್ಮೆ ಗೊಬ್ಬರ ವಿಲೇವಾರಿ ಮಾಡುತ್ತೇವೆ. ಮಳೆ ಹೆಚ್ಚಾದ ಪರಿಣಾಮ ಸಮಸ್ಯೆ ಸೃಷ್ಟಿಯಾಗಿದೆ. ಕೋಳಿ ಸಾಕಾಣಿಕೆಯ ಪರವಾನಗಿಯ ದಾಖಲೆಗಳು ನಮ್ಮ ಮಾಲೀಕರ ಬಳಿ ಇವೆ. ಅನೈರ್ಮಲ್ಯ ಮತ್ತು ನೋಣಗಳ ಸಮಸ್ಯೆಯ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಂಡು ತಕ್ಷಣ ನಾಮಫಲಕ ಹಾಕುತ್ತೇವೆ. – ಅಮರ್‌ನಾಥ್. ವ್ಯವಸ್ಥಾಪಕ. ಗೀತಾ ಕೋಳಿಫಾರಂ. ತೊಗರಿಘಟ್ಟ. ಕೋಳಿಫಾರಂನಿಂದ ಜನರಿಗೆ ಸಮಸ್ಯೆಯಾಗಿ ಸ್ಥಳೀಯರು ದೂರು ನೀಡಿದ್ದಾರೆ. ನಾನೇ ಖುದ್ದಾಗಿ ಬೇಟಿ ನೀಡಿ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ನೋಣಗಳ ಸಮಸ್ಯೆಯ ಗ್ರಾಪಂ ಯಿಂದ ಗೀತಾ ಕೋಳಿಫಾರಂಗೆ ನೊಟೀಸ್ ಜಾರಿ ಮಾಡಲಾಗಿದೆ. ನೋಣಗಳ ಸಮಸ್ಯೆ ಮತ್ತು ಅನೈರ್ಮಲ್ಯ ಸರಿಪಡಿಸದಿದ್ದರೇ ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತೇನೆ. – ನಾಹಿದಾ ಜಮ್ ಜಮ್ ತಹಶೀಲ್ದಾರ್. ಕೊರಟಗೆರೆ – ಸಿದ್ದರಾಜು. ಕೆ.ಕೊರಟಗೆರೆ