Advertisement
ಸುಮಾರು ಮೂರು ತಿಂಗಳ ಅನಂತರ ಕೋಳಿ ಮಾಂಸದ (ಲೈವ್ ಚಿಕನ್)ಬೆಲೆ ಕೆ.ಜಿ. ಯೊಂದಕ್ಕೆ ಸುಮಾರು 50 ರೂ. ಇಳಿಕೆಯಾಗಿದೆ. ಮೊಟ್ಟೆಯ ದರ ಕೂಡ ಅಪರೂಪವೆಂಬಂತೆ 1 ರೂ. ಕಡಿಮೆಯಾಗಿದೆ.
Related Articles
Advertisement
ಮೀನು ದರ ಏರಿಕೆಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ನಾಡದೋಣಿ ಮೀನುಗಾರಿಕೆ ಮಾತ್ರ ನಡೆಯುತ್ತಿದೆ. ಆದರೆ ಮೀನಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಮೀನಿನ ದರ ಕೂಡ ಏರಿಕೆಯಾಗಿದೆ. ಮಂಗಳೂರಿನಲ್ಲಿ ಬುಧವಾರ ಬಂಗುಡೆ ಕೆ.ಜಿ.ಯೊಂದರ ಬೆಲೆ 350ರಿಂದ 400 ರೂ. ಇತ್ತು. ನಂಗ್ (ಸಣ್ಣದು) ಕೆ.ಜಿ.ಗೆ 350, ಕಾನೆ 800 ರೂ. ಇತ್ತು. ಮೀನು ಲಭ್ಯತೆ ಕಡಿಮೆ ಇರುವಾಗ, ಬೆಲೆ ಹೆಚ್ಚಿರುವಾಗ ಕೋಳಿ ಮಾಂಸ ಹಾಗೂ ಮೊಟ್ಟೆಯ ಬೆಲೆ ಕಡಿಮೆಯಾಗಿರುವುದು ಮಾಂಸಾಹಾರಿಗಳಿಗೆ ಸಮಾಧಾನ ತಂದಿದೆ.