Advertisement
ಕಡಿಮೆ ಕೊಬ್ಬಿನಾಂಶಸಾಮಾನ್ಯ ಪಾತ್ರೆಗಳಿಗೆ ಹೋಲಿಸಿದರೆ ಮಣ್ಣಿನ ಪಾತ್ರೆಯಲ್ಲಿ ಸಾಂಬಾರು, ಸಾರು ಇನ್ನಿತರ ಅಡುಗೆ ಮಾಡುವಾಗ ಎಣ್ಣೆ ಅಧಿಕ ಉಪಯೋಗಿಸುವ ಅಗತ್ಯವಿರಲಾರದು. ಇದರಿಂದಾಗಿ ಕಡಿಮೆ ಎಣ್ಣೆಯನ್ನು ಬಳಸಿ ಉಚಿಯಾದ ಅಡುಗೆ ಸಿದ್ಧವಾಗುತ್ತದೆ. ಈ ಕಾರಣದಿಂದ ಅನಗತ್ಯ ಕೊಬ್ಬು$ದೇಹಕ್ಕೆ ಹೋಗುವುದನ್ನು ತಡೆಯಲು ಸಾಧ್ಯವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸದಾ ಕಾಲ ಆಹಾರವನ್ನು ಬಿಸಿಯಾಗಿರಿಸಲು ಹಾಟ್ ಬಾಕ್ಸ್ ಮೊರೆ ಹೋಗುತ್ತೇವೆ. ಕೆಲವೊಮ್ಮೆ ಆಹಾರ ಬಿಸಿಯಾಗಿದ್ದರೂ ರುಚಿಯಲ್ಲಿ ಏನೋ ವ್ಯತ್ಯಾಸ ಕಂಡುಬಂದಂತೆ ಭಾಸವಾಗುತ್ತದೆ. ಆದರೆ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಆಹಾರ ಧೀರ್ಘಕಾಲ ಬಿಸಿಯಾಗಿಯೂ ರುಚಿಕರವಾಗಿಯೂ ಇರುತ್ತದೆ. ಅಧಿಕ ಪೋಷಕಾಂಶ
“ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತು ನಿಮಗೆ ನೆನಪಿರಬಹುದು ನೈಸರ್ಗಿಕ ಅಂಶಗಳನ್ನು ಹೊಂದಿರುವ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆಹಾರದ ಪೋಷಕಾಂಶಗಳನ್ನು ನೈಸರ್ಗಿಕವಾಗಿ ಪಡೆಯಲು ಸಾಧ್ಯವಾಗುತ್ತದೆ. ಇಂದು ಬಹುತೇಕ ರೆಸ್ಟೋರೆಂಟ್‌ಗಳು ಆಹಾರವನ್ನು ನೀಡುವಾಗ ಮಣ್ಣಿನ ಮಡಕೆಯನ್ನು ಉಪಯೋಗಿಸುತ್ತವೆ. ಯಾಕೆಂದರೆ ತಿನ್ನಲೂ ಖುಷಿ ನೀಡುವುದರೊಂದಿಗೆ ಆಹಾರದ ಸ್ವಾದ ಕೆಡದಂತೆ ಇದು ಕಾಪಾಡುತ್ತದೆ.
Related Articles
ಇಂದಿನ ಹೆಚ್ಚಿನ ಮನೆಗಳಲ್ಲಿ ಮಡಕೆಯಲ್ಲಿ ನೀರು ಶೇಖರಿಸಿ ಕುಡಿಯುವುದನ್ನು ಕಂಡಿರಬಹುದು. ಸುಡು ಬಿಸಿಲಿದ್ದರೂ ಮಡಕೆಯಲ್ಲಿಟ್ಟ ನೀರು ಸದಾ ತಣ್ಣಗೆ ಇರುತ್ತದೆ. ಈ ನೀರನ್ನು ಸೇವಿಸುವುದರಿಂದ ಶೀತ, ಅಸ್ತಮಾ ಮುಂತಾದ ಸೂಕ್ಷ್ಮ ರೋಗಗಳಿಂದ ಪಾರಾಗಬಹುದು. ಮಣ್ಣಿನ ಪ್ರಾಕೃತಿಕ ಗುಣಗಳನ್ನಾಧರಿಸಿ ನೀರು ತಣ್ಣಗಾಗುವುದರಿಂದ ಅಧಿಕ ನೀರು ಕುಡಿಯುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಹಾಗಾಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವ ಸಮಸ್ಯೆಯಿಂದ ಪಾರಾಗಬಹುದು.
Advertisement
ಜೀರ್ಣಕ್ರಿಯೆದೇಹದ ಜೀರ್ಣ ಕ್ರಿಯೆಯನ್ನು ಸಮರ್ಪಕವಾಗಿಸಲು ಮಣ್ಣಿನ ಪಾತ್ರೆಯ ಆಹಾರ ಸಹಕಾರಿ. ಇದು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸಲು ಪ್ರಮುಖ ಪಾತ್ರವಹಿಸುತ್ತವೆ. ಇದರಿಂದ ಆಹಾರ ಬೇಗ ಜೀರ್ಣವಾಗುತ್ತದೆ. - ರಾಧಿಕಾ ಕುಂದಾಪುರ