Advertisement

Bajpe -ಕಟೀಲು ರಾಜ್ಯ ಹೆದ್ದಾರಿಯಲ್ಲಿ ಹೊಂಡ-ಗುಂಡಿ

12:57 PM Sep 30, 2024 | Team Udayavani |

ಬಜಪೆ: ನವರಾತ್ರಿ ಸಂದರ್ಭ ಕಟೀಲು ದೇಗುಲಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ವಾಹನಗಳ ಓಡಾಟವೂ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ರಸ್ತೆಗಳು ಹೊಂಡ-ಗುಂಡಿಯಿಂದ ಮುಕ್ತವಾಗಿದ್ದಾರೆ ಪ್ರಯಾಣವೂ ತ್ರಾಸದಾಯಕವಾಗಿರುವುದಿಲ್ಲ. ಆದರೆ ಕಟೀಲು -ಬಜಪೆ ರಾಜ್ಯ ಹೆದ್ದಾರಿ 67ರಲ್ಲಿ ಹೊಂಡ-ಗುಂಡಿಗಳಿಂದ ಕೂಡಿ ಅಪಾಯಕಾರಿಯಾಗಿದೆ.

Advertisement

ಎಕ್ಕಾರು, ಪೆರ್ಮುದೆಯಲ್ಲಿ ರಸ್ತೆ ಯಲ್ಲಿ ಗುಂಡಿಗಳು ಬೀಳತೊಡಗಿದ್ದು ದ್ವಿಚಕ್ರವಾಹನಗಳಿಗೆ ಹೆಚ್ಚು ಅಪಾಯಕಾರಿಯಾಗುತ್ತಿದೆ.

ಮಳೆ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯ ಪಕ್ಕದಲ್ಲಿ ಮಳೆಯ ನೀರು ಹರಿದು ಮಣ್ಣು ಕೊರೆದು ಹೋಗಿದ್ದು ಅಲ್ಲಿ ಗುಂಡಿಗಳು ಬಿದ್ದಿವೆ. ಎಕ್ಕಾರಿನ ಶಿಬರೂರು ದ್ವಾರದಿಂದ ಎಕ್ಕಾರು ಗ್ರಾಮ ಪಂಚಾಯತ್‌ ಸಮೀಪ ತನಕ ಗುಂಡಿಗಳಿದ್ದು, ವಾಹನಗಳು ಎದುರಿನ ವಾಹನಗಳಿಗೆ ಹಾದಿ ನೀಡಲು ಬದಿಗೆ ಸರಿದರೆ ರಸ್ತೆಯ ಪಕ್ಕದ ಗುಂಡಿಗೆ ಬಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ.

ಮುಚ್ಚದ ಪೈಪ್‌ಲೈನ್‌ ಗುಂಡಿ
ಪೆರ್ಮುದೆ ಪೇಟೆಯಲ್ಲಿ ಮರವೂರು ಡ್ಯಾಂನಿಂದ ಬರುವ ನೀರಿನ ಪೈಪು ಲೈನ್‌ನ ಗುಂಡಿ ಮುಚ್ಚದೆ ವಾಹನ ಸವಾರರಿಗೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಅದರ ಮೇಲೆ ಹುಲ್ಲು ಬೆಳೆದಿದ್ದು, ರಸ್ತೆಯೂ ಕಿರಿದಾಗಿದ್ದು ಪೈಪು ಲೈನ್‌ನ ಗುಂಡಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.

ರಾಜ್ಯ ಹೆದ್ದಾರಿ 67ರಲ್ಲಿ ಈಗಾಗಲೇ ಕೆಲವೆಡೆ ಗಿಡಗಳು ಕಟಾವು ಮಾಡಲಾಗಿದೆ. ಇನ್ನೂ ಹಲವೆಡೆ ಬಾಕಿ ಇದೆ. ಗಿಡಗಂಟಿಗಳಿಂದ ಎದುರಿನ ಬರುವ ವಾಹನಗಳ ಕಾಣಿಸದೇ ಸವಾರರಿಗೆ ತೊಂದರೆಯಾಗುತ್ತಿದೆ. ಅ ಬಗ್ಗೆಯೂ ಲೋಕೋಪಯೋಗಿ ಇಲಾಖೆ ಗಮನ ಹರಿಸಬೇಕು.

Advertisement

ಕಟೀಲು ದೇವಸ್ಥಾನಕ್ಕೆ ನವರಾತ್ರಿ ಸಮಯದಲ್ಲಿ ರಾತ್ರಿ ಸಮಯದಲ್ಲೂ ವಾಹನ ಸಂಚಾರ ಅಧಿಕವಾಗಿರುತ್ತದೆ. ಸುಗಮ ಸಂಚಾರಕ್ಕೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಒಮ್ಮೆ ಮುಚ್ಚಿದರೂ ಮತ್ತೆ ಗುಂಡಿ
ಮಳೆಯ ನೀರು ಒಂದೆ ಕಡೆ ಹರಿಯಲು ಬಿಡದೇ ಅಲ್ಲಲ್ಲಿ ನೀರು ಹರಿಯಲು ತೋಡು ಮಾಡಬೇಕು. ಇಲ್ಲದಿದ್ದಲ್ಲಿ ಮತ್ತೆ ಗುಂಡಿ ನಿರ್ಮಾಣವಾಗುತ್ತದೆ. ಮಳೆ ಬಂದು ಹೋದ ಮೇಲೆ, ಗುಂಡಿ ಬಿದ್ದ ಮೇಲೇ ತೋಡು ನಿರ್ಮಿಸಿದರೆ ಮತ್ತೆ ಮತ್ತೆ ಹೊಂಡವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next