Advertisement

ಅಜಗುಂಡಿ ರಸ್ತೆಯಲ್ಲಿ ನಿತ್ಯ ಪರದಾಟ

11:41 AM Sep 14, 2019 | Team Udayavani |

ನರಗುಂದ: ಪೂರಕವಾಗಿ ನರಗುಂದ ಮತ್ತು ರಾಮದುರ್ಗ ತಾಲೂಕುಗಳ ಗಡಿಭಾಗದ ಅಜಗುಂಡಿ ರಸ್ತೆಯ ಅವ್ಯವಸ್ಥೆಯಿಂದ ಈ ಭಾಗದ ಅನ್ನದಾತರು ನಿತ್ಯ ಪರದಾಡುವಂತಾಗಿದೆ.

Advertisement

ನರಗುಂದ ತಾಲೂಕು ಬೆಳ್ಳೇರಿ ಗ್ರಾಮದಿಂದ 1 ಕಿಮೀ ದೂರಕ್ಕೆ ತಾಲೂಕು ಹದ್ದು ಮುಗಿದು ರಾಮದುರ್ಗ ತಾಲೂಕು ಹದ್ದು ಪ್ರಾರಂಭವಾಗುತ್ತದೆ. ಈ ಗಡಿಭಾಗದಲ್ಲಿ ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದ ಅಂಚಿಗಿದೆ ಅಜಗುಂಡಿ ರಸ್ತೆ. ಅಜಗುಂಡಿ ರಸ್ತೆಯ ಎರಡೂ ಕಡೆಗೆ ನರಗುಂದ ಮತ್ತು ರಾಮದುರ್ಗ ಹದ್ದು ಬರುತ್ತದೆ. ಈ ರಸ್ತೆ ನರಗುಂದ ವ್ಯಾಪ್ತಿಗೆ ಬರುತ್ತದೆ. ಎರಡು ತಿಂಗಳ ಹಿಂದೆ ರಸ್ತೆಯ ಪಕ್ಕದ ಸರುವಿನಲ್ಲಿ ನೀರು ಹರಿದು ರಸ್ತೆ ಎಲ್ಲೆಂದರಲ್ಲಿ ಕೊರೆದಿದೆ. ಇದರಿಂದ ರೈತರ ಸಂಚಾರಕ್ಕೆ ತೊಂದರೆಯಾಗಿದೆ.

ಅಜಗುಂಡಿ ರಸ್ತೆಗೆ ಹೊಂದಿಕೊಂಡು ನರಗುಂದ ತಾಲೂಕಿನ ವಾಸನ, ಬೆಳ್ಳೇರಿ, ಕೊಣ್ಣೂರ ಮತ್ತು ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮಗಳ 600ಕ್ಕೂ ಹೆಚ್ಚು ಎಕರೆ ಕೃಷಿ ಪ್ರದೇಶವಿದೆ. ಈ ಭಾಗದ ರೈತರಿಗೆ ಇದೇ ಪ್ರಮುಖ ರಸ್ತೆಯಾಗಿದ್ದರಿಂದ ರಸ್ತೆ ಅವ್ಯವಸ್ಥೆ ತೊಂದರೆಗೀಡು ಮಾಡಿದೆ.

ರೈತರ ಕೋರಿಕೆ ಮೇರೆಗೆ ವಾಸನ ಗ್ರಾಮ ಪಂಚಾಯತ್‌ ವತಿಯಿಂದ 4-5 ವರ್ಷಗಳ ಹಿಂದೆ ರಸ್ತೆ ಸುಧಾರಣೆ ಮಾಡಲಾಗಿತ್ತು ಎನ್ನುತ್ತಾರೆ ರೈತರು. ಈಗ ಮತ್ತೆ ರಸ್ತೆ ಹದಗೆಟ್ಟು ಕೃಷಿ ಚಟುವಟಿಕೆಗಳಿಗೆ ಸಾಗಲು ಸಾಕಷ್ಟು ಕಷ್ಟಪಡುವಂತಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ರೈತರಾದ ಹನಮಂತ ಮಡಿವಾಳರ, ಸಿದ್ದಲಿಂಗಪ್ಪ ಜಗ್ಗಲ, ಭರಮಪ್ಪ ಜಗ್ಗಲ, ಎಚ್.ವಿ. ಪಾಟೀಲ, ಗುರನಗೌಡ ಪಾಟೀಲ, ಎಸ್‌.ವಿ. ಪಾಟೀಲ, ಸಿದ್ದಲಿಂಗಪ್ಪ ಅರಳಿಸೀಮಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next