Advertisement

ಕೋವಿಡ್ 19 ವೈರಸ್ ಗೆ ಸಂಭಾವ್ಯ ಲಸಿಕೆ ಸಿದ್ಧ ; ಇಲಿಗಳ ಮೇಲೆ ಆರಂಭಿಕ ಪ್ರಯೋಗ

02:28 AM Apr 04, 2020 | Hari Prasad |

ವಾಷಿಂಗ್ಟನ್‌: ಜಗತ್ತೇ ಕೋವಿಡ್ 19 ವೈರಸ್ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವಾಗ ಅಮೆರಿಕದ ಸಂಶೋಧಕರು ಕೋವಿಡ್ 19 ವೈರಸ್ ಗೆ ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಈ ವೈರಸ್‌ ವಿರುದ್ಧ ರೋಗ ನಿರೋಧಕ ಶಕ್ತಿಯೊಂದಿಗೆ ಹೋರಾಡಬಲ್ಲಂಥ ಈ ಲಸಿಕೆಯನ್ನು ಸದ್ಯಕ್ಕೆ ಇಲಿಗಳ ಮೇಲೆ ಪ್ರಯೋಗಿಸಲಾಗಿದೆ ಎಂದು ಹೇಳಲಾಗಿದ್ದು, ಈ ಕುರಿತ ವರದಿಯನ್ನು ಇಬಯೋಮೆಡಿಸಿನ್‌ ಎಂಬ ಜರ್ನಲ್‌ ಪ್ರಕಟಿಸಿದೆ.

Advertisement

ಈ ಲಸಿಕೆಗೆ ಪೀಟ್ಸ್‌ಬರ್ಗ್‌ ಕೋವಿಡ್ ವೈರಸ್‌ ವ್ಯಾಕ್ಸೀನ್‌ (ಪಿಟ್‌ ಕೋ ವ್ಯಾಕ್‌) ಎಂದು ಹೆಸರಿಡಲಾಗಿದೆ. ಇದನ್ನು ಇಲಿಯ ಮೇಲೆ ಪ್ರಯೋಗಿಸಿದಾಗ, 2 ವಾರಗಳೊಳಗಾಗಿ ವೈರಸ್‌ ವಿರುದ್ಧ ಹೋರಾಡಬಲ್ಲಂಥ ಸಾಕಷ್ಟು ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿರುವುದು ತಿಳಿದುಬಂದಿದೆ.

ಈ ಕುರಿತು ಮಾತನಾಡಿರುವ ಪೀಟ್ಸ್‌ ಬರ್ಗ್‌ ವಿವಿಯ ಆಂಡ್ರಿಯಾ ಗ್ಯಾಂಬೊಟ್ಟೋ, ನಮಗೆ 2003ರ ಸಾರ್ಸ್‌ -ಕೋವ್‌ ಮತ್ತು 2014ರ ಮರ್ಸ್‌- ಕೋವ್‌ ಅನೇಕ ಅನುಭವಗಳನ್ನು ನೀಡಿದೆ. ಈ ಎರಡೂ ವೈರಸ್‌ ಗಳು ಈಗಿನ ಕೋವಿಡ್ ಜತೆಗೂ ಸಂಬಂಧ ಹೊಂದಿವೆ.

ಸ್ಟ್ರೈಕ್‌ ಪ್ರೊಟೀನ್‌ ಎಂಬ ನಿರ್ದಿಷ್ಟ ಪ್ರೊಟೀನ್‌ನ ಉತ್ಪತ್ತಿಯನ್ನು ಹೆಚ್ಚಳ ಮಾಡುವುದೇ ಈ ವೈರಸ್‌ ವಿರುದ್ಧದ ಹೋರಾಟಕ್ಕಿರುವ ಪ್ರಮುಖ ಅಸ್ತ್ರ ಎಂಬ ಪಾಠವನ್ನು ನಾವು ಕಲಿತಿದ್ದೇವೆ. ಆ ನಿಟ್ಟಿನಲ್ಲಿ ಹೊಸ ಲಸಿಕೆಯು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.

ಇನ್ನು ಬೆರಳ ತುತ್ತತುದಿಯ ಗಾತ್ರದ 400 ಸೂಕ್ಷ್ಮ ಸೂಜಿಗಳನ್ನು ಬಳಸಿ ಈ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದೆ. ಈ ಸೂಜಿಗಳ ಮೂಲಕ ಲಸಿಕೆ ಪ್ರಯೋಗಿಸಿದಾಗ, ಸ್ಟ್ರೈಕ್‌ ಪ್ರೊಟೀನ್‌ ನೇರವಾಗಿ ಚರ್ಮದೊಳಕ್ಕೆ ಪ್ರವೇಶ ಪಡೆಯುತ್ತದೆ. ಇಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಯು ಬಲಿಷ್ಠವಾಗಿರುವ ಕಾರಣ, ಈ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದೂ ಸಂಶೋಧಕರು ಹೇಳಿದ್ದಾರೆ.

Advertisement

ಮಲೇರಿಯಾ ಔಷಧ ಅಪಾಯ
ಹೊಸದಿಲ್ಲಿ: ಕೋವಿಡ್ 19 ವೈರಸ್ ಚಿಕಿತ್ಸೆಗೆ ಕೆಲವರು ಪರಿಗಣಿಸುತ್ತಿರುವ ಮಲೇರಿಯಾ ವಿರೋಧಿ ಔಷಧ ಹೃದಯಗಳಿಗೆ ಅಪಾಯ ಹೆಚ್ಚಿಸುತ್ತದೆ ಎಂದು ಹೃದ್ರೋಗ ತಜ್ಞರು ಎಚ್ಚರಿಸಿದ್ದಾರೆ.

ಕೋವಿಡ್ 19 ವೈರಸ್ ಗೆ ಪರಿಗಣಿಸಲಾದ ಹೈಡ್ರಾಕ್ಸಿಕ್ಲೋರೋಕ್ವಿನ್‌ ಮತ್ತು ಪ್ರತಿ ಜೀವಕ ಅಜಿಥ್ರೋ ಮೈಸಿನ್‌ ಅಸಹಜ ಹೃದಯಗಳಿಗೆ ಅದು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿರುವ ಹೃದ್ರೋಗ ತಜ್ಞರು, ಮಲೇರಿಯಾ ಪ್ರತಿ ಜೀವಕ ಔಷಧ ಸಂಯೋಜನೆಯೊಂದಿಗೆ ಕೋವಿಡ್ 19 ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಆರೋಗಿಗಳ ಮೇಲ್ವಿಚಾರಣೆ ಮಾಡುವುದನ್ನು ಪರಿಗಣಿಸಬೇಕು ಎಂದು ಒರೆಗಾನ್‌ ಹೆಲ್ತ್‌ ಅಂಡ್‌ ಸೈನ್ಸ್‌ ಯುನಿರ್ವಸಿಟಿ (ಒಎಚ್‌ಎಸ್‌ಯು) ಮತ್ತು ಭಾರತೀಯ ವಿಶ್ವವಿದ್ಯಾಲಯದ ಸಂಶೋಧಕರು ಶಿಫಾರಸು ಮಾಡಿದ್ದಾರೆ. ಈ ಸ್ಥಿತಿಯು ಕೆಳ ಹೃದಯ ಕೋಣೆಗಳು ತ್ವರಿತವಾಗಿ ಮತ್ತು ಅನಿಯಮಿತವಾಗಿ ಹೊಡೆಯಲು ಕಾರಣವಾಗುತ್ತದೆ. ಹೃದಯ ಸ್ತಂಬನಕ್ಕೂ ಕಾರಣವಾಗಬಹುದು ಎಂದು ಹೇಳಿದ್ದಾರೆ.

ವೈದ್ಯರು ತಮ್ಮ ಅತ್ಯುತ್ತಮ ವೈದ್ಯಕೀಯ ತೀರ್ಪನ್ನು ಬಳಸಿದರೆ ಮತ್ತು ಕೋವಿಡ್ 19 ವೈರಸ್ ರೋಗಿಗಳಿಗೆ ಈ ಔಷಧಿ ಸಂಯೋಜನೆಯನ್ನು ಆದೇಶಿಸಿದರೆ, ಅವರು ಸಂಭವನೀಯ ದುಷ್ಪರಿಣಾಮಗಳ ಬಗ್ಗೆ ತಿಳಿದಿರಬೇಕು ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next