Advertisement

ದಕ್ಷಿಣ ಕನ್ನಡದಲ್ಲಿ ಸಂಭಾವ್ಯ ನೆರೆ-ಭೂ ಕುಸಿತ; ಅಪಾಯದಲ್ಲಿ 102 ಅತೀ ಸೂಕ್ಷ್ಮ ಗ್ರಾಮಗಳು

11:52 AM Aug 08, 2020 | mahesh |

ಮಂಗಳೂರು: ಭಾರೀ ಮಳೆಯಿಂದಾಗಿ ಕೊಡಗು ಸಹಿತ ವಿವಿಧೆಡೆ ಭೂಕುಸಿತದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನೆರೆ ಅಥವಾ ಭೂ ಕುಸಿತ ಸಾಧ್ಯತೆಯಿರುವ ಒಟ್ಟು 102 ಅತೀ ಸೂಕ್ಷ್ಮ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ.

Advertisement

ನೆರೆ, ಭೂಕುಸಿತದ ಅಪಾಯ ಎದುರಿಸ ಬಹುದಾದ ಗ್ರಾಮಗಳನ್ನು ಗುರುತಿಸಿ ಅಗತ್ಯ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯಾ ಗ್ರಾ. ಪಂ.ಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಈ ಗ್ರಾಮ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲೆಯ ಒಟ್ಟು 70 ಗ್ರಾ. ಪಂ.ಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆ ಅನುಷ್ಠಾನಕ್ಕಾಗಿ ಗ್ರಾ.ಪಂ. ವಿಪತ್ತು ನಿರ್ವಹಣ ಸಮಿತಿಯನ್ನು ರಚಿಸಲಾಗಿದೆ.

ಸಂಭಾವ್ಯ ಗ್ರಾ.ಪಂ. ಪಟ್ಟಿ
ಮಂಗಳೂರು ತಾಲೂಕಿನ ಹರೇಕಳ, ಗುರುಪುರ, ಮಲ್ಲೂರು, ಅಡ್ಯಾರ್‌, ಉಳಾಯಿಬೆಟ್ಟು, ಮಳವೂರು, ಚೇಳ್ಯಾರು, ಸೂರಿಂಜೆ, ಬಂಟ್ವಾಳ ತಾಲೂಕಿನ ಬಿ ಕಸº, ನಾವೂರು, ಅಮಾrಡಿ, ಮಣಿನಾಲ್ಕೂರು, ಸರಪಾಡಿ, ಪೆರ್ನೆ, ಬಿ.ಮೂಡ, ಪಾಣೆಮಂಗಳೂರು, ಕಡೇಶಿವಾಲಯ, ಬರಿಮಾರು, ಸಜಿಪ ಮುನ್ನೂರು, ಪುದು, ಸಜಿಪ ಮೂಡ, ಸಜಿಪ ನಡು, ಕರಿಯಂಗಳ, ಮೂಲ್ಕಿ ತಾಲೂಕಿನ ಬಳುಜೆ, ಅತಿಕಾರಿಬೆಟ್ಟು, ಐಕಳ, ಕಟೀಲು, ಕಿಲ್ಪಾಡಿ, ಹಳೆಯಂಗಡಿ, ಕೆಮ್ರಾಲ್‌, ಮೂಲ್ಕಿ, ಐಕಳ, ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಅಲೆಟ್ಟಿ, ಮರ್ಕಂಜ, ಹರಿಹರ ಪಳ್ಳತ್ತಡ್ಕ, ಕಡಬ ತಾಲೂಕಿನ ಕೊಲ್ಲಮೊಗ್ರು, ಸುಬ್ರಹ್ಮಣ್ಯ, ಕುಟ್ರಾಪ್ಪಾಡಿ, ಶಿರಾಡಿ, ಕೌಕ್ರಾಡಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಹಿರೇಬಂಡಾಡಿ, 34ನೇ ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಬಜತ್ತೂರು, ಪುತ್ತೂರು ಕಸ್ಟ.

ಬೆಳ್ತಂಗಡಿಯಲ್ಲಿ ಅಧಿಕ
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ, ಮುಂಡಾಜೆ, ಲಾಯಿಲ, ಕೊಯ್ಯೂರು, ನಾಡ, ಇಂದಬೆಟ್ಟು, ನಾವೂರು, ಚಾರ್ಮಾಡಿ, ನೆರಿಯ, ಕಲ್ಮಂಜ, ಧರ್ಮಸ್ಥಳ, ಬೆಳಾಲು, ಬಂದಾರು, ಇಳಂತಿಲ, ನಿಡ್ಲೆ, ಶಿಶಿಲ, ನಾರಾವಿ, ವೇಣೂರು, ಅಳದಂಗಡಿ, ಶಿರ್ಲಾಲು ಹಾಗೂ ಆರಂಬೋಡಿ.

ವಿಪತ್ತು ನಿರ್ವಹಣ ಸಮಿತಿ
ಮಳೆ ಕಾರಣದಿಂದ ನೆರೆ ಅಥವಾ ಭೂ ಕುಸಿತ ಸಾಧ್ಯತೆಯಿರುವ ದ.ಕ. ಜಿಲ್ಲೆಯ 70 ಅತೀ ಸೂಕ್ಷ್ಮ ಗ್ರಾಮ ಪಂಚಾಯತ್‌ಗಳನ್ನು ಪಟ್ಟಿ ಮಾಡಲಾಗಿದೆ. ಆ ಗ್ರಾಮ ಪಂಚಾಯತ್‌ಗಳಲ್ಲಿ ವಿಪತ್ತು ನಿರ್ವಹಣ ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ. ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ..
– ಆರ್‌. ಸೆಲ್ವಮಣಿ ಸಿಇಒ, ಜಿಲ್ಲಾ ಪಂಚಾಯತ್‌-ದ.ಕ.

Advertisement

ಪಟ್ಟಿ ಮಾಡಿರುವ ಸೂಕ್ಷ್ಮ ಗ್ರಾಮಗಳ ಸಂಖ್ಯೆ
ತಾಲೂಕು ಒಟ್ಟು ಗ್ರಾಮ    ಒಟ್ಟು ಗ್ರಾಮ
ಬಂಟ್ವಾಳ                            15
ಮಂಗಳೂರು                       13
ಮೂಲ್ಕಿ                               17
ಸುಳ್ಯ                                  7
ಕಡಬ                                 9
ಪುತ್ತೂರು                            6
ಬೆಳ್ತಂಗಡಿ                            35

Advertisement

Udayavani is now on Telegram. Click here to join our channel and stay updated with the latest news.

Next