Advertisement
ಹೊಸಕೋಟೆ ತಾಲೂಕಿನಾದ್ಯಾಂತ ಆಲೂಗಡ್ಡೆ ಬೆಳೆ ಬೆಳೆದಿದ್ದಾರೆ. ನಂದಗುಡಿ ಹೋಬಳಿಯ ತಾವರೆಕೆರೆ, ಯಳಚಹಳ್ಳಿ, ಕಾಳಪ್ಪನಹಳ್ಳಿ, ಮಂಚಪ್ಪನಹಳ್ಳಿ, ಕಾರಹಳ್ಳಿ, ನೆಲ ವಾಗಿಲು ಹೀಗೆ ಅನೇಕ ಗ್ರಾಮಗಳಲ್ಲಿ ಕಳೆದ ಭಾರಿಗಿಂತಲೂ ಉತ್ತಮ ಬೆಳೆ ಬೆಳೆದಿದ್ದು. ಕೆಲವು ತಿಂಗಳಗಳ ಹಿಂದೆ ಅಕಾಲಿಕ ಮಳೆ ಬಿದ್ದು, ಆಲಿಕಲ್ಲು ಬಿದ್ದ ಪರಿಣಾಮ ಇದರಿಂದ ಆಲೂಗಡ್ಡೆ ಕೆಟ್ಟು ರೈತರ ಕೈಗೆ ಅರ್ಧ ಬೆಳೆ ಸಿಕ್ಕಿದೆ. ಬೇಡಿಕೆ ಕುಸಿತದಿಂದ ಬಂಡವಾಳ ಕೂಲಿಯು ಬರದ ಸ್ಥಿತಿಯಿಂದ ರೈತರು ಕಂಗಲಾಗಿದ್ದಾರೆ.
Related Articles
Advertisement
ಜಮೀನಿನಲ್ಲೇ ಕೊಳೆಯುತ್ತಿರುವ ಆಲೂ ಗಡ್ಡೆ: ಬಹುತೇಕ ಕಡೆ ಬಿಸಿಲು ಹೆಚ್ಚಾದ ಕಾರಣ ಜಮೀನಿನಲ್ಲೇ ಕೊಳೆಯುವಂತಾಗಿದೆ. ಬಿತ್ತನೆಗೆ ರಸಗೊಬ್ಬರಕ್ಕೆ ಹಾಕಿದ ಬಂಡವಾಳವು ವಾಪಸ್ ಬರುವ ಲಕ್ಷಣ ಕಾಣದ ಕಾರಣ ರೈತರು ಕಂಗಲಾಗಿದ್ದಾರೆ. ಒಂದು ಮೂಟೆ ಬಿತ್ತನೆ ಆಲೂಗಡ್ಡೆಗೆ 1600 ರೂವರೆಗೆ ಖರ್ಚು ಮಾಡಿದ್ದ ರೈತರು ಈಗ ಒಂದು ಮೂಟೆಗೆ ಕೇವಲ 250 ರಿಂದ 300 ರೂಪಾಯಿಗೆ ಮಾರುವ ಅನಿವಾರ್ಯತೆ ಎದುರಾಗಿದೆ.
ಪರಿಶ್ರಮಕ್ಕೂ ಸಿಗದ ಬಂಡವಾಳ: ಆಲೂಗಡ್ಡೆ ಬೆಲೆ ಕುಸಿತದಿಂದ ಕುಟುಂಬದವರೆಲ್ಲ ಬೆಳಗ್ಗೆ ಮಾಡಿದ ಪರಿಶ್ರಮಕ್ಕೂ ಸಿಗದೇ ಬಂಡ ವಾಳಕ್ಕೂ ಕುತ್ತು ಬಂದಿದೆ. ನಮ್ಮ ಮುಂದೆಯೆ ಆಲೂಗಡ್ಡೆ ಕೆಡುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ನಾವು ಬೆಳೆದ ಬೆಳೆಗೆ ತಕ್ಕ ಬೆಲೆ ಇಲ್ಲದೆ ಮಧ್ಯೆವರ್ತಿಗಳಿಗೆ ಹಾಗೂ ಮಾರಾಟಗಾರರಿಗಷ್ಟೇ ಲಾಭ. ಬೆಳೆ ಹೀಗೆ ಕೈ ಕೊಟ್ಟರೆ ನಾವು ಮಾಡಿದ ಸಾಲ ತೀರಿಸಲು ಆಗದೇ ಕಷ್ಟ ಅನುಭಸಬೇಕಾಗುತ್ತದೆ ಎಂದು ರೈತ ತಾವರೆಕೆರೆ ರೈತ ರವಿಕುಮಾರ್ ತಿಳಿಸಿದರು.
ಸ್ಥಳೀಯ ಮಾರುಕಟ್ಟೆ ಸಿಗದ ಬೆಲೆ: ಹೊರ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರ ಪ್ರದೇಶ ಹಲವು ಜಿಲ್ಲೆಗಳಿಂದ ಮಾರುಕಟ್ಟೆಗೆ ಹೆಚ್ಚಿನ ಆಲೂಗಡ್ಡೆ ಬರುತ್ತಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆಯಿಲ್ಲದಂತಾಗಿದ್ದು. ಆದ್ದರಿಂದ ಸ್ಥಳೀಯ ರೈತರಿಗೆ ಸರ್ಕಾರದಿಂದ ಶೈತ್ಯಾಗಾರ ನಿರ್ಮಿಸಿ ಆಲೂಗಡ್ಡೆ ಇಡಲು ಅನುಕೂಲ ಮಾಡಿದರೆ ರೈತ ಬೆಳೆದ ಬೆಳೆ ಸುರಕ್ಷಿತ ವಾಗಿದ್ದು. ದರ ಸಿಗುವವರೆಗೂ ಇಡಲು ಅನುಕೂಲವಾಗುತ್ತದೆ ಎಂದು ನಂದಗುಡಿ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಜೆ.ಎನ್. ಸುನೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.