Advertisement
ಬೆಂಗಳೂರು: “ಸ್ಟಾಫ್ ಇಲ್ಲ, ನಾಳೆ ಬನ್ನಿ…’ ಇದು ಯಾವುದೇ ಸರಕಾರಿ ಇಲಾಖೆಯ ಕಚೇರಿಗೆ ತೆರಳಿದರೂ ಸಿಗುವ ಉತ್ತರ!
Related Articles
Advertisement
ಮಂಜೂರಾದ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿ ಕೊಂಡರೆ ವೇತನ-ಭತ್ತೆಗಾಗಿ ಸರಕಾರಕ್ಕೆ ವಾರ್ಷಿಕ 8ರಿಂದ 9 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಇದೇ ಕಾರಣದಿಂದ ಹುದ್ದೆ ಭರ್ತಿಗೆ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನಲಾಗುತ್ತಿದೆ.
ಇದಲ್ಲದೆ, ನೇಮಕ ಅಕ್ರಮ, ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಆಗಾಗ ನ್ಯಾಯಾಲಯಗಳಲ್ಲಿಪ್ರಶ್ನಿಸುವುದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ ವಾಗುತ್ತಿದೆ. ಯಾವುದೇ ಹುದ್ದೆಗಳ ಭರ್ತಿಗೆ ಕನಿಷ್ಠ ಒಂದೆರಡು ವರ್ಷ ಬೇಕು. ಐದಾರು ವರ್ಷಗಳಿಂದ ನೇಮಕಾತಿ ಆಗದ ಪ್ರಕರಣಗಳಿವೆ. ಚುನಾವಣ ನೀತಿ ಸಂಹಿತೆಗಳೂ ಖಾಲಿ ಹುದ್ದೆಗಳ ಭರ್ತಿಗೆ ಅಡ್ಡಿಯಾಗಿವೆ ಎಂಬ ಅಭಿಪ್ರಾಯವಿದೆ. ನೇಮಕಾತಿ ಪ್ರಕ್ರಿಯೆ ಹೇಗೆ?
ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ನಿರುದ್ಯೋಗ ಸಮಸ್ಯೆಗೆ ಕೊಂಚ ಪರಿಹಾರ ಒದಗಿಸಿದಂತಾಗುತ್ತದೆ. ಇಲಾಖೆಗಳ ಮುಖ್ಯಸ್ಥರು ಸಚಿ ವಾಲಯದ ಆಡಳಿತ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಿ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದು ಹುದ್ದೆಗಳನ್ನು ತುಂಬಬೇಕು. ಇಲಾಖೆಗಳಿಂದ ಬರುವ ಪ್ರಸ್ತಾವನೆ ಗಳನ್ನು ಪರಿಶೀಲಿಸಿ ಅಗತ್ಯಕ್ಕೆ ತಕ್ಕಂತೆ ಹುದ್ದೆಗಳ ಸೃಜನೆ ಮತ್ತು ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡುತ್ತದೆ. ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಇತರ ನೇಮ ಕಾತಿ ಪ್ರಾಧಿಕಾರಿಗಳ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಕೇಂದ್ರದಿಂದ ನೇಮಕ
ಕೇಂದ್ರ ಸರಕಾರ ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಮಂದಿಯನ್ನು ನೇಮಿಸಿಕೊಳ್ಳಲಿದೆ ಎಂದು ಕೇಂದ್ರ ಸಹಾಯಕ ಸಚಿವ ಡಾ| ಜಿತೇಂದ್ರ ಸಿಂಗ್ ಇತ್ತೀಚೆಗೆ ಸಂಸತ್‌ನಲ್ಲಿ ಹೇಳಿದ್ದಾರೆ. 2-3 ವರ್ಷಗಳ ಹಿಂದೆ ರದ್ದು ಮಾಡಲಾದ ಹುದ್ದೆಗಳನ್ನು ಅಗತ್ಯಕ್ಕೆ ತಕ್ಕಂತೆ ಮತ್ತೆ ಸೃಷ್ಟಿಸಬಹುದು. ದೇಶದಲ್ಲಿ ಐಎಎಸ್ ಅಧಿಕಾರಿಗಳ ಮಟ್ಟದಲ್ಲಿ 1, 472 ಮತ್ತು ಐಪಿಎಸ್ ಮಟ್ಟದಲ್ಲಿ 864 ಹುದ್ದೆಗಳು ತೆರವಾಗಿವೆ ಎಂದಿದ್ದಾರೆ. ಗ್ರೂಪ್ ಎ- 23, 584 (ಗೆಜೆಟೆಡ್)
ಗ್ರೂಪ್ ಬಿ- 26,282 (ಗೆಜೆಟೆಡ್)
ಗ್ರೂಪ್ ಬಿ- 92,525 (ನಾನ್- ಗೆಜೆಟೆಡ್)
ಗ್ರೂಪ್ ಸಿ- 8.36 ಲಕ್ಷ (ನಾನ್-ಗೆಜೆಟೆಡ್) ರಕ್ಷಣ ಇಲಾಖೆಯಲ್ಲಿ
ಗ್ರೂಪ್ ಬಿ- 39,366 (ನಾನ್-ಗೆಜೆಟೆಡ್)
ಗ್ರೂಪ್ ಸಿ- 2.14 ಲಕ್ಷ (ನಾನ್-ಗೆಜೆಟೆಡ್) ರೈಲ್ವೆ ಇಲಾಖೆ
ಗ್ರೂಪ್ ಸಿ- 2.91 ಲಕ್ಷ (ನಾನ್-ಗೆಜೆಟೆಡ್)
ಕೇಂದ್ರ ಗೃಹ ಸಚಿವಾಲಯ
ಗ್ರೂಪ್ ಸಿ- 1.21 ಲಕ್ಷ (ನಾನ್-ಗೆಜೆಟೆಡ್)