Advertisement

ಸಿಆರ್‌ಪಿ, ಬಿಆರ್‌ಪಿ ಲಿಖಿತ ಪರೀಕ್ಷೆ ಮುಂದೂಡಿಕೆ

09:00 PM Mar 07, 2022 | Team Udayavani |

ಬೆಂಗಳೂರು: ಇದೇ ಮಾ.15 ಮತ್ತು 16ರಂದು ನಡೆಯಬೇಕಿದ್ದ ಸಿಆರ್‌ಪಿ, ಬಿಆರ್‌ಪಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಂಯೋಜಕರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಮಾ.19ರಿಂದ 21ಕ್ಕೆ ಮುಂದೂಡಿದೆ.

Advertisement

ಮಾ.15 ಮತ್ತು 16ರಂದು ಸರ್ಕಾರಿ ಪ್ರಥಮ ದರ್ಜೆ ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಗೆ ಪರೀಕ್ಷೆ ನಡೆಯುತ್ತಿದೆ.

ಈ ಪರೀಕ್ಷೆಗಳಿಗೆ ಶಿಕ್ಷಕರು ಕೂಡ ಹಾಜರಾಗುವ ಸಾಧ್ಯತೆಗಳಿರುವುದರಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ.

ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಪರೀಕ್ಷೆಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ತಿಳಿಸಿದೆ.

ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮಾ.10ರ ವರೆಗೆ ಸಮಯ ನೀಡಲಾಗಿದೆ.

Advertisement

ಮಾ.10ರಂದು ಪರಿಷ್ಕೃತ ತಾತ್ಕಾಲಿಕ ಅರ್ಹತಾ ಪಟ್ಟಿ ಪ್ರಕಟಿಸಲಾಗುತ್ತದೆ. ಮಾ.15ರಂದು ಅರ್ಹ ಪಟ್ಟಿಯನ್ನು ಸಂಗ್ರಹಿಸಿ ಆಯಾ ಜಿಲ್ಲಾ ಉಪನಿರ್ದೇಶಕರು ಆಯುಕ್ತರ ಕಚೇರಿಗಳಿಗೆ ಕಳುಹಿಸಬೇಕು. ಮಾ.19ರಿಂದ 21ರ ವರೆಗೆ ಲಿಖೀತ ಪರೀಕ್ಷೆ ಮೂಲಕ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಲಾಗುತ್ತದೆ.

ಮಾ.22ರಿಂದ 24ರ ವರೆಗೆ ಖಾಲಿ ಹುದ್ದೆಗಳ ಮಾಹಿತಿ ಅಪ್‌ಲೋಡ್‌ ಮಾಡುವುದು ಮತ್ತು ಮಾ.31ರಂದು ನಿರ್ದಿಷ್ಟ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಆಯುಕ್ತರಾದ ಡಾ. ಆರ್‌. ವಿಶಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next