Advertisement

ವರ್ಷದ ನಂತರ ಮರಣೋತ್ತರ ಪರೀಕ್ಷೆ!: ಮತ್ತೆ ಅಗೆಯಲಾಗುತ್ತಿದೆ ಸಮಾಧಿ

09:39 AM Sep 22, 2019 | keerthan |

ನರೇಗಲ್ಲ(ಗದಗ): ವರ್ಷದ ಹಿಂದೆ ಅನುಮಾಸ್ಪದವಾಗಿ ಸಾವಿಗೀಡಾಗಿದ್ದ ವ್ಯಕ್ತಿಯೊಬ್ಬರ ಮರಣೋತ್ತರ ಪರೀಕ್ಷೆಗಾಗಿ ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ ನೇತೃತ್ವದಲ್ಲಿ ಶನಿವಾರ ಜಕ್ಕಲಿ ಗ್ರಾಮದ ಸಮಾಧಿಯನ್ನು ಅಗೆಯಲಾಗುತ್ತಿದೆ.

Advertisement

ಗ್ರಾಮದ ಮೆಣಸಿನಕಾಯಿ ವ್ಯಾಪಾರಿ ಚನ್ನವೀರಪ್ಪ ವೀರಪ್ಪ ಶೆಟ್ಟರ್(ಗುಗ್ಗರಿ)(40) ಎಂಬುವವರು 9-6-2018ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಭಾವಿಸಿ, ಕುಟುಂಬಸ್ಥರು ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಬಳಿಕ ಆತನ ಸಾವಿನ ಬಗ್ಗೆ ಸಂಶಯಗೊಂಡ ಮತೃನ ಪತ್ನಿ ಸುಮಾ, ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶವ ಪರೀಕ್ಷೆಗಾಗಿ ಜಕ್ಕಲಿ ಗ್ರಾಮದಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಿ, ಶವ ಹೊರ ತೆಗೆಯಲಾಗುತ್ತಿದೆ.

ಸ್ಥಳದಲ್ಲಿ ರೋಣ ಪಿಎಸ್‌ಐ ಜೂಲಕಟ್ಟಿ, ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿ ಮುಕ್ಕಾಂ ಹೂಡಿದ್ದಾರೆ. ವರ್ಷದ ಬಳಿಕ ಸಮಾಧಿಯಿಂದ ಶವ ಹೊರ ತೆಗೆಯುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಲಿನ ಗ್ರಾಮಸ್ಥರು ಕುತೂಹಲದಿಂದ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next