Advertisement

ಸ್ನಾತಕೋತ್ತರ ಪದವಿ ಪ್ರವೇಶ; ಪಿಜಿಸಿಇಟಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ

01:49 AM Aug 15, 2020 | mahesh |

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಸ್ನಾತಕೋತ್ತರ ಪದವಿ ಪ್ರವೇಶ ಪಿಜಿಸಿಇಟಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದ್ದು, ಅಕ್ಟೋಬರ್‌ 6, 7ರಂದು ಪರೀಕ್ಷೆಗಳು ನಡೆಯಲಿವೆ. ಎಂಇ, ಎಂಟೆಕ್‌, ಎಂಆರ್ಚ್‌ ಕೋರ್ಸ್‌ಗಳ ಟೈಪ್‌-ಬಿಗೆ 6ರಂದು ಬೆಳಗ್ಗೆ 10.30ರಿಂದ 12.30ರ ವರೆಗೆ ಹಾಗೂ ಅಪರಾಹ್ನ 2.30ರಿಂದ ಸಂಜೆ 4.30ರ ವರೆಗೆ ಟೈಪ್‌-ಬಿಗೆ ಪರೀಕ್ಷೆಗಳು ನಡೆಯಲಿವೆ.
ಅದೇ ರೀತಿ, 7ರಂದು ಬೆಳಗ್ಗೆ 10.30ರಿಂದ 12.30 ಎಂಸಿಎ ಹಾಗೂ ಅಪರಾಹ್ನ 2.30ರಿಂದ ಸಂಜೆ 4.30 ಎಂಬಿಎ ಕೋರ್ಸ್‌ಗೆ ಪರೀಕ್ಷೆ ನಡೆಯಲಿವೆ.

Advertisement

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಪಿಜಿಸಿಇಟಿ ಆನ್‌ಲೈನ್‌ ಅರ್ಜಿ ಸಲ್ಲಿಸಲು ಅವಧಿ ಕೂಡ ವಿಸ್ತರಿಸಿದ್ದು, ಆಗಸ್ಟ್‌ 20ರಂದು ಸಂಜೆ 5.30ರ ವರೆಗೆ ಕಾಲಾವಕಾಶ ನೀಡಲಾಗಿದೆ. ಆ. 21ರ ಒಳಗೆ ಶುಲ್ಕ ಪಾವತಿಸಬೇಕು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಇದುವರೆಗೆ ಶುಲ್ಕ ಪಾವತಿಸದ ಅಭ್ಯರ್ಥಿಗಳು ಸಹ ಶುಲ್ಕ ಪಾವತಿಸಲು ಅವಕಾಶ ಇದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಮಾಹಿತಿಗೆ ಪ್ರಾಧಿಕಾರದ ವೆಬ್‌ಸೈಟ್‌: k||t://mhb.mbw.qe.q ಅನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next