Advertisement

ರೈತ ಸಂಘದಿಂದ ಪೋಸ್ಟರ್‌ ಪ್ರದರ್ಶನ

07:21 PM Jan 25, 2021 | Team Udayavani |

ಕುಷ್ಟಗಿ: ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟದ ಬೆಂಬಲಾರ್ಥವಾಗಿ ಬೆಂಗಳೂರಿನಲ್ಲಿ ಜ. 26ರ ಗಣರಾಜ್ಯೋತ್ಸವದ ಟ್ರ್ಯಾಕ್ಟರ್‌ ರ್ಯಾಲಿ ಪರೇಡ್‌ ಮೂಲಕ ರಾಜ ಭವನ ಚಲೋ ಹೋರಾಟದ ಹಿನ್ನೆಲೆಯಲ್ಲಿ ಬಸವೇಶ್ವರ ವೃತ್ತದಲ್ಲಿ ರೈತ ಸಂಘದಿಂದ ಪೋಸ್ಟರ್‌ ಪ್ರದರ್ಶಿಸಿ ಜಾಗೃತಿಮೂಡಿಸಲಾಯಿತು.

Advertisement

ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ವಿಪರೀತ ಚಳಿಗೆ 148 ರೈತರು ಹುತಾತ್ಮರಾಗಿದ್ದಾರೆ. ಆದರೂ ಸರ್ಕಾರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಹೋರಾಟದಲ್ಲಿ ರೈತರು ತಮ್ಮ ಆರೋಗ್ಯ ಲೆಕ್ಕಿಸದೇ ಭಾಗವಹಿಸಿದ್ದರೆ. ಮೋದಿ ಸರ್ಕಾರ ಹಠಮಾರಿ ಧೋರಣೆ ಮುಂದುವರಿಸಿದೆ.

ಇದನ್ನೂ ಓದಿ:ಗೂಳೂರು ಗಣಪನ ಅದ್ಧೂರಿ ವಿಸರ್ಜನೋತ್ಸವ : ಸಹಸ್ರಾರು ಭಕ್ತರ ನಡುವೆ ಅದ್ಧೂರಿ ಮೆರವಣಿಗೆ

ಈ ಹಿನ್ನೆಲೆಯಲ್ಲಿ ಜ. 26ರಂದು ದೆಹಲಿಗೆ ದೇಶಾದ್ಯಂತ ರೈತರ ಟ್ರಾÂಕ್ಟರ್‌ಗಳು ನುಗ್ಗಲಿವೆ. ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ಪರೇಡ್‌ ನಡೆಸಿ, ಸರ್ಕಾರವನ್ನು ಎಚ್ಚರಿಸಲಾಗುತ್ತಿದೆ. ಈ ಪ್ರತಿಭಟನೆಯನ್ನು ರಾಷ್ಟ್ರಧ್ವಜದೊಂದಿಗೆ ನಡೆಸಲಾಗುತ್ತಿದೆ ಎಂದು ರಾಜ್ಯಾಧ್ಯಕ್ಷ ಡಿ.ಎಚ್‌. ಪೂಜಾರ ಹೇಳಿದರು. ದಲಿತ ಸಂಘರ್ಷ ಸಮಿತಿಯ ಆನಂದ ಭಂಡಾರಿ, ರಾಜ್ಯ ಕಾರ್ಯದರ್ಶಿ ನಿರ್ವಾಣಪ್ಪ ಡಿ.ಎಸ್‌., ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್‌ ಮೂಲಿಮನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next