Advertisement
ಪ್ರತಿ ವರ್ಷ ಬ್ರವರಿಯಲ್ಲಿ ಜಜೆಟ್ ಘೋಷಣೆ ಆದಂತೆಲ್ಲ ಆದಾಯ ಕರ ಪಾವತಿಗರ ಮನದಲ್ಲಿ ಒಂದು ಹೊಸ ಗೊಂದಲ ಆರಂಭವಾಗುತ್ತದೆ. ಸದ್ರಿ ವಿತ್ತ ವರ್ಷದ (2016-17) ಲೆಕ್ಕಾಚಾರ ಮಾರ್ಚ್‌ನಲ್ಲಿ ಕೊನೆಗೊಳ್ಳುತ್ತಿದ್ದು, ಅದಕ್ಕೆ ಬೇಕಾಗುವ ಕರ ಉಳಿತಾಯದ ಹೂಡಿಕೆಗಳನ್ನು ಮಾರ್ಚ್ 31, 2017ರ ಒಳಗೆ ಮಾಡತಕ್ಕದ್ದು. ಅದಕ್ಕೆ ಸಂಬಂಧಪಟ್ಟ ಕಾನೂನು ಕಳೆದ ವರ್ಷ ಫೆಬ್ರವರಿಯಲ್ಲಿ ಘೋಷಣೆಯಾದ ಬಜೆಟ್ ಪ್ರಕಾರ ಇರುತ್ತದೆ. ಹೊಸದಾಗಿ ಘೋಷಣೆಯಾದ ಬಜೆಟ್ ವಿವರಗಳು ಮುಂದಿನ ವರ್ಷಕ್ಕೆ (2017-18) ಅನ್ವಯವಾಗುತ್ತದೆ; ಸದ್ರಿ ವರ್ಷಕ್ಕೆ ಅಲ್ಲ.
Related Articles
Advertisement
ಒಟ್ಟು ಸಮಗ್ರ ಆದಾಯ: ಕರ ಇಲಾಖೆಯ ಪ್ರಕಾರ ಗ್ರಾಸ್ ಟೋಟಲ್ ಇನ್ಕಮ್ ಅಥವಾ ಒಟ್ಟು ಸಮಗ್ರ ಆದಾಯ ಎಲ್ಲ ಮೂಲಗಳಿಂದ, ಅಂದರೆ ಓರ್ವ ವ್ಯಕ್ತಿಯ ಸಂಬಳದ ಆದಾಯ, ಗೃಹಸಂಬಂದಿ ಆದಾಯ, ಬಿಸಿನೆಸ್ ಆದಾಯ, ಇತರ ಆದಾಯ ಹಾಗೂ ಕ್ಯಾಪಿಟಲ್ ಗೈನ್ಸ್ ಆದಾಯಗಳನ್ನು ಒಳಗೊಂಡಿರುತ್ತದೆ. ಜಿಟಿಐನಿಂದ ಹಲವು ಕರ ವಿನಾಯಿತಿ ಕಳೆಯಬಹುದು.
ಕರವಿನಾಯಿತಿಗಳು (ಚಾಪ್ಟರ್ 6ಎ): ಈ ಕೆಳಗಿನ ಸೆಕ್ಷನ್‌ಗಳ ಅಡಿಯಲ್ಲಿ ಮಾಡಿದ ಹೂಡಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಇವುಗಳಲ್ಲಿ ಹೂಡಿದ ಮೊತ್ತವನ್ನು ಈ ವರ್ಷದ ಆದಾಯದಿಂದ ನೇರವಾಗಿ ಕಳೆಯಬಹುದು.
ಸೆಕ್ಷನ್ 80 ಸಿ:1. ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್-ಸ್ವಂತ ಇಚ್ಚೆಯಿಂದ ವಾಲಂಟರಿಯಾಗಿ ಪಿ.ಎಫ್.ಗೆ ನೀಡಿದ್ದು ಸಹಿತ. 2. ಸಾರ್ವಜನಿಕವಾಗಿ ಮಾಡಿದ 15 ವರ್ಷದ ಪಬ್ಲಿಕ್ ಪ್ರಾವಿಡೆಂಟ್ ಫಂಡ್. 3. ಸ್ವಂತ, ಸೌ³ಸ್, ಮಕ್ಕಳ ಜೀವ ವಿಮೆಯ ವಾರ್ಷಿಕ ಪ್ರೀಮಿಯಂ-ನಿಗದಿತ ಮಿತಿಯೊಳಗೆ 4. ಎರಡು ಮಕ್ಕಳ ಶಾಲಾ ಟ್ಯೂಶನ್ ಫೀ. (ಬೇರೆ ಯಾವುದೇ ಫೀಸ್ ಆಗಲ್ಲ, ಟ್ಯೂಶನ್ ಫೀ ಮಾತ್ರ) 5. ಅಂಚೆ ಕಚೇರಿಯ ಎನ್.ಎಸ್.ಸಿ. ಮತ್ತು ಅದರ ಬಡ್ಡಿಯ ಮರುಹೂಡಿಕೆ. 6. ಯುಲಿಪ್ ಪ್ರೀಮಿಯಂ. 7. ಗೃಹಸಾಲದ ಮರುಪಾವತಿಯಲ್ಲಿ (ಇಎಂಐ) ಅಸಲು ಭಾಗ (ಬಡ್ಡಿ ಬಿಟ್ಟು) 8.ಮನೆ ಖರೀದಿಯ ರಿಜಿಸ್ಟ್ರೇಶನ್, ಸ್ಟಾಂಪ್‌ಡ್ನೂಟಿ ವೆಚ್ಚಗಳು 9.Equity Linked Savings Scheme(C.I.T.T.) ನಾಮಾಂಕಿತ ಮ್ಯೂಚುವಲ್ ಫಂಡ್ (ಎಲ್ಲ ಅಲ್ಲ) (10) ಮ್ಯೂಚುವಲ್ ಫಂಡ್‌ಗಳ ಪೆನನ್ ಪ್ಲಾನ್‌ಗಳು (UTI-RBP, Franklin Templeton-TIPP ಮತ್ತು ಇದೀಗ Reliance Retirement Fung) (11) ಐದು ವರ್ಷಾವಧಿಯ ಬ್ಯಾಂಕ್/ಪೋಸ್ಟಾಫೀಸಿನ ಕರನೋಂದಾಯಿತ ಎಫ್.ಡಿ. (12)ಅಂಚೆ ಕಚೇರಿಯ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಂ (ಖಇಖಖ) 5 ವರ್ಷದ್ದು (13) ಸುಕನ್ಯಾ ಸಮೃದ್ಧಿ ಯೋಜನೆ
80 ಸಿಸಿಸಿ: ಎಲ್ಲೆ„ಸಿ ಮತ್ತಿತರ ಜೀವ ವಿಮಾ ಕಂಪೆನಿಗಳು ನೀಡುವ ಪೆನನ್ ಪ್ಲಾನ್‌ಗಳು (NPS) 80 ಸಿಸಿಡಿ (1): ನ್ಯಾಶನಲ್ ಪೆನ್ಶನ್ ಸ್ಕೀಂ (ಸೆಕ್ಷನ್ 800 ಸಿಸಿಜಿ)
ಮೇಲಿನ 80 ಸಿ, 80 ಸಿಸಿಸಿ ಹಾಗೂ 80 ಸಿಸಿಡಿ (1) ಈ ಮೂರೂ ಸೆಕ್ಷನ್‌ಗಳಲ್ಲಿ ಸಿಗುವ ವಿನಾಯಿತಿ ವಾರ್ಷಿಕ ರೂ. 1.5 ಲಕ್ಷ ಮೀರಬಾರದು. ಆದರೆ, ಇನ್ನೊಂದು ಸೆಕ್ಷನ್ 80 ಸಿಸಡಿ (1ಬಿ) ಅಡಿ ಹೆಚ್ಚುವರಿ ರೂ. 50000 ಮಿತಿಯಲ್ಲಿ ನ್ಯಾಶನಲ… ಪೆನÒನ್ ಸ್ಕೀಂ (ಎನ್‌ಪಿಎಸ್‌ನ್ ಪಿಎಸ್) ಯೋಜನೆಯ ಹೂಡಿಕೆಗೆ ಪ್ರತ್ಯೇಕ ಕರವಿನಾಯಿತಿ ಲಭ್ಯ. ಅಂದರೆ ಒಟ್ಟು ರೂ. 2 ಲಕ್ಷದ ವರೆಗೆ ಹೂಡಿಕೆ ಆಧಾರದಲ್ಲಿ ಈ ಮೇಲಿನ ಸೆಕ್ಷನ್‌ಗಳ ಅಡಿಯಲ್ಲಿ ಕರ ವಿನಾಯಿತಿ ತೆಗೆದುಕೊಳ್ಳಬಹುದು. ಈ 2 ಲಕ್ಷ ಅಲ್ಲದೆ ಈ ಕೆಳಗಿನ ಸೆಕ್ಷನ್ ಗಳಲ್ಲಿ ಸಂದರ್ಭಾನುಸಾರ ಹೆಚ್ಚುವರಿ ರಿಯಾಯಿತಿ ದೊರಕುತ್ತವೆ: ರಾಜೀವ್ ಗಾಂಧಿ ಇಕ್ವಿಟಿ ಸೇವಿಂಗ್ ಸ್ಕೀಂ (ಸೆಕ್ಷನ್ 80ಸಿಸಿಜಿ): ಜೀವನದಲ್ಲಿ ಪ್ರಪ್ರಥಮ ಬಾರಿಗೆ ಕೆಲ ನೋಂದಾಯಿತ ಶೇರು ಮತ್ತು ತತ್ಸಂಬಂಧಿ ನೋಂದಾಯಿತ ಮ್ಯೂಚುವಲ… ಫಂಡುಗಳಲ್ಲಿ ಹೂಡುವವರಿಗಾಗಿ ಮಾತ್ರವೇ 3 ವರ್ಷದ ಲಾಕ್-ಇನ್ ಇರುವ ಈ ಯೋಜನೆಯಲ್ಲಿ ವಾರ್ಷಿಕ ರೂ. 50000ದ ವರೆಗೆ ಹೂಡುವ ಅವಕಾಶವಿದೆ. ರೂ. 50000ದ ಮೇಲೆ ಶೇ. 50 ಅಂದರೆ ರೂ. 25000ದ ವರೆಗೆ ಆದಾಯದಿಂದ ನೇರವಾಗಿ ಕಳೆಯುವ ಅವಕಾಶ ನೀಡಲಾಗಿದೆ. ಇದರ ಲಾಭವನ್ನು ಸತತ 3 ವರ್ಷಗಳ ಮಟ್ಟಿಗೆ ಹೂಡಿಕೆ ಆಧಾರದಲ್ಲಿ ಪಡೆದುಕೊಳ್ಳಬಹುದು. ಇದು ಒಟ್ಟು ವಾರ್ಷಿಕ ಆದಾಯ ರೂ. 12 ಲಕ್ಷ ಮೀರದವರಿಗೆ ಮಾತ್ರ ಅನ್ವಯ. (ಈ ಯೋಜನೆಯನ್ನು ಹೊಸಬಜೆಟ್ಟಿನಲ್ಲಿ ಮುಂದಿನ ವರ್ಷಕ್ಕೆ ಅನ್ವಯಿಸುವಂತೆ ಹಿಂಪಡೆಯಲಾಗಿದೆ. ಆದರೂ ಇದರಲ್ಲಿ ಈಗಾಗಲೇ ತೊಡಗಿಸಿ ಕೊಂಡವರು ತಮ್ಮ 3 ವರ್ಷಗಳನ್ನು ಪೂರ್ತಿಗೊಳಿಸುವ ವರೆಗೆ ಯೋಜನೆಯ ಲಾಭ ಪಡೆಯಬಹುದು. )
ಮೆಡಿಕಲ… ಇನ್ಷೊರನ್ಸ್ (ಸೆಕ್ಷನ್ 80 ಡಿ): ಇದು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ. 25000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. 60 ದಾಟಿದ ಹಿರಿಯ ನಾಗರಿಕರಿಗೆ ಈ ಮಿತಿ ರೂ. 30000 ಆಗಿದೆ. ಜಯದೇವ ಪ್ರಸಾದ ಮೊಳೆಯಾರ