Advertisement

ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಅಂಚೆ ಮತದಾನ

01:28 PM Apr 18, 2023 | Team Udayavani |

ದೇವನಹಳ್ಳಿ: ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಅಗತ್ಯ ಸೇವೆಗಳಲ್ಲಿ ಚುನಾವಣಾ ದಿನದಂದು ಕಾರ್ಯನಿರ್ವಹಿಸುತ್ತಿರುವವರಿಗೆ ಅಂಚೆ ಮತದಾನ ಕಾರ್ಯವು ಬೆಂ.ಗ್ರಾಮಾಂತರ ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಮೇ 03 ರಿಂದ 05ರವರೆಗೆ ನಡೆಯಲಿದ್ದು, ಅಂಚೆ ಮತದಾನ ಕೇಂದ್ರದ ಮೇಲ್ವಿಚಾರಣೆಗಾಗಿ, ಗೆಜೆಟೆಡ್‌ ಅಧಿಕಾರಿಗಳು ಹಾಗೂ ಆಯಾ ತಾ. ಕಚೇರಿಯ ಗ್ರೇಡ್‌-2 ತಹಶೀಲ್ದಾರ್‌ ಅವರನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಿ, ಆಯಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿ ಆದೇಶಿಸಿದ್ದಾರೆ.

Advertisement

ಅಂಚೆ ಮತದಾನ ಸೌಲಭ್ಯ ಕೇಂದ್ರದ ಮೇಲ್ವಿಚಾರಣೆಗಾಗಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನೇಮಿಸಲಾದ ಗೆಜೆಟೆಡ್‌ ಅಧಿಕಾರಿಗಳು ಹಾಗೂ ನೋಡಲ್‌ ಅಧಿಕಾರ ವಿವರಗಳ ವಿವರ: 178-ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಹೊಸಕೋಟೆ ತಾಲೂಕು ಕುಂಬಳಹಳ್ಳಿ ಸರ್ಕಾರಿ ಫ್ರೌಡಶಾಲೆಯ ಮುಖ್ಯ ಶಿಕ್ಷಕಿ ಅನು ಸೂಯಮ್ಮ.ಟಿ ಹಾಗೂ ಹೊಸಕೋಟೆ ತಾ. ಕಚೇರಿಯ ಗ್ರೇಡ್‌-2 ತಹಶೀ ಲ್ದಾರ್‌ ಪ್ರಭಾಕರ್‌ ಅವರನ್ನು, 179- ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಶಾಲಾ ಶಿಕ್ಷಣ ಇಲಾ ಖೆಯ ದೇವನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕ್ಷೇತ್ರ ಸಮನ್ವಯಾಧಿಕಾರಿ ಮಂಜುಳಾ, ಹಾಗೂ ದೇವನಹಳ್ಳಿ ತಾಲೂಕು ಕಚೇರಿಯ ಗ್ರೇಡ್‌-2 ತಹಶೀಲ್ದಾರ್‌ ಉಷಾ ಅವರನ್ನು, 180-ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರಕ್ಕೆ ದೊಡ್ಡಬಳ್ಳಾಪುರ ತಾಲೂಕು ಉಪ ಖಜಾನೆಯ ಸಹಾಯಕ ನಿರ್ದೇಶಕ ರವಿಕುಮಾರ್‌ ಹಾಗೂ ದೊಡ್ಡಬಳ್ಳಾಪುರ ತಾ.ಕಚೇರಿಯ ಗ್ರೇಡ್‌-2 ತಹಶೀ ಲ್ದಾರ್‌ ಎನ್‌.ಆರ್‌.ಕರಿಯ ನಾಯ್ಕ್ ಮತ್ತು 181- ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ನೆಲ ಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಗೆಜೆಟೆಡ್‌ ಮ್ಯಾನೇಜರ್‌ ಕೆ.ಎನ್‌.ರವೀಂದ್ರ ನಾಥ ಹಾಗೂ ನೆಲಮಂಗಲ ತಾ¬ ಕಚೇರಿಯ ಗ್ರೇಡ್‌-2 ತಹಶೀಲ್ದಾರ್‌ ಭಾಗ್ಯ ಅವರನ್ನು ಅಂಚೆ ಮತದಾನ ಕಾರ್ಯ ನಿರ್ವ ಹಿಸಲು, ಗೆಜೆಟೆಡ್‌ ಅಧಿಕಾರಿ, ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ಅಂಚೆ ಮತದಾನ ಕಾರ್ಯ ನಿರ್ವಹಿಸಲು ಸೂಚನೆ: ವಿವಿಧ ಇಲಾಖೆಗಳಲ್ಲಿ ಅಗತ್ಯ ಸೇವೆಗಳಲ್ಲಿ ಚುನಾವಣಾ ದಿನಾಂಕದಂದು ಕಾರ್ಯನಿರ್ವಹಿಸುತ್ತಿರುವ ಆಯಾ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ನಿಗದಿತ ಸಮಯ, ಸ್ಥಳದಲ್ಲಿ ಹಾಜರಾಗಿ ಅಂಚೆ ಮತದಾನ ಕಾರ್ಯ ನಿರ್ವಹಿಸುವಂತೆ ಸೂಚಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಆದೇಶಿಸಿದ್ದಾರೆ.

4 ಅಂಚೆ ಮತದಾನ ಕೇಂದ್ರಗಳ ವಿವರ: 178-ಹೊಸಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸಕೋಟೆ ತಾಲೂಕು ಕಚೇರಿಯಲ್ಲಿರುವ ತಹಶೀಲ್ದಾರ್‌ ಗ್ರೇಡ್‌-2 ರವರ ಕೊಠಡಿಯಲ್ಲಿ, 179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದೇವನಹಳ್ಳಿಯ ತಾ. ಆಡಳಿತ ಸೌಧದಲ್ಲಿರುವ ತಹಶೀಲ್ದಾರ್‌ ಗ್ರೇಡ್‌-2 ರವರ ಕೊಠಡಿಯಲ್ಲಿ, 180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರದ ತಾ. ಕಚೇರಿಯ ಒಂದನೇ ಮಹಡಿಯಲ್ಲಿರುವ ಉಪ ವಿಭಾಗಾಧಿಕಾರಿ ಕಚೇರಿಯ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿರುವ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಾಗೂ 181-ನೆಲಮಂಗಲ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೆಲಮಂಗಲ ತಾ.ಕಚೇರಿಯ ಸಭಾಂಗಣದಲ್ಲಿ 2023ರ ಮೇ 03, 04 ಹಾಗೂ 05ರಂದು ಅಂಚೆ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next