ಸಿರುಗುಪ್ಪ: ಏ.23ರಂದು ನಡೆಯುವ ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಹಾಂತೇಶ ತಿಳಿಸಿದರು.
ತಾಲೂಕಿನಲ್ಲಿ ಒಟ್ಟು 226 ಮತಗಟ್ಟೆಗಳು ಇದ್ದು, 1,02,777 ಪುರುಷರು, 1,05,053 ಮಹಿಳೆಯರು 28 ಇತರೆ ಸೇರಿದಂತೆ ಒಟ್ಟು 2,07,858 ಮತದಾರರಿದಾರೆ. 82 ಅಂಚೆ ಮತಗಳು ನೋಂದಾಣಿಯಾಗಿವೆ ಎಂದು ಮಾಹಿತಿ ನೀಡಿದರು.
226 ಮತಗಟ್ಟೆಗಳಲ್ಲಿ ಸಾಧಾರಣ 185, 41ಅತಿ ಸೂಕ್ಷ್ಮ ಮತಗಟ್ಟೆಗಳಿದ್ದು, ಇದರಲ್ಲಿ 57 ಭೀತಿಯುಕ್ತ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಇಂತಹ ಮತಗಟ್ಟೆಗಳಲ್ಲಿ ಮತದಾರರಿಗೆ ಭೀತಿ ಮುಕ್ತವಾಗಿ ಮತದಾನ ಮಾಡುವುದಕ್ಕೆ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಪಿಆರ್‌ಒ 226, ಎಪಿಆರ್‌ಒ 226, ಪಿಒ1- 226, ಪಿಒ2-226, ಕಾಯ್ದಿರಿಸಿದ 46 ಅಧಿಕಾರಿಗಳಿದ್ದು, ಒಟ್ಟು 1030 ಜನ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ನಗರದ 103ನೇ ಮತಟ್ಟೆಯಲ್ಲಿ ಹಾಗೂ 7 ಮತ್ತು 8ನೇ ವಾರ್ಡ್‌ನಲ್ಲಿ ಒಂದು ಸಖೀ ಮತಗಟ್ಟೆ ಕೇಂದ್ರವನ್ನು ತೆರೆಯಾಲಾಗಿದೆ. ನಗರದ ತಾಲೂಕು ಕಚೇರಿಯಲ್ಲಿ ಚುನಾವಣಾ ಕಂಟ್ರೂಲ್ ರೂಂ ಸ್ಥಾಪಿಸಲಾಗಿದೆ. ಚುನಾವಣೆ ಸಂಬಂಧ ದೂರುಗಳನ್ನು ಕಂಟ್ರೂಲ್ ರೂಂ (08396-220238) ದೂರವಾಣಿ ಮೂಲಕ ಅಥವಾ ಸಿ-ವಿಜನ್ ಆ್ಯಪ್ ಮೂಲಕ ನೇರವಾಗಿ ದೂರು ದಾಖಲಿಸಬಹುದು. ಅಲ್ಲದೆ, ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿ ಅಂಚೆ ಮತ ಚಲಾಯಿಸಲು, ಕೊಪ್ಪಳ, ಬಳ್ಳಾರಿ, ದಾವಣಗೆರೆ ಲೋಕಸಭೆಯ ಮತಪಟ್ಟಿಗೆ ಇಡಲಾಗಿದ್ದು, ಅಂಚೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಈ ವೇಳೆ ತಹಶೀಲ್ದಾರ್ ದಯಾನಂದ ಪಾಟೀಲ್ ಇದ್ದರು.
ಚುನಾವಣಾ ಸಾಮಗ್ರಿ ವಿತರಣೆ: ನಗರದ ಶ್ರೀವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಗೆ ತೆರಳುವ ಸಿಬ್ಬಂದಿಗೆ ಮತಗಟ್ಟೆಗಳಲ್ಲಿ ಬಳಸುವ ಚುನಾವಣಾ ಪರಿಕರಗಳನ್ನು ತಹಶೀಲ್ದಾರ್ ದಯಾನಂದ ಪಾಟೀಲ್ ವಿತರಿಸಿದರು. ಚುನಾವಣೆಗೆ ತೆರಳುವ ಸಿಬ್ಬಂದಿಗಳು ತಮಗೆ ನೀಡಿದ ಮತ ಸಾಮಗ್ರಿ ಪರಿಶೀಲಿಸಿ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದರು.
Advertisement
ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ತಾಲೂಕಿನಲ್ಲಿ ಶಾಂತಿಯುತ ವಾತಾವರಣವಿದೆ. ಅದಕ್ಕಾಗಿ ಎಲ್ಲ ಸಾರ್ವಜನಿಕರು, ರಾಜಕೀಯ ಮುಖಂಡರು ಒಳಗೊಂಡಂತೆ ಸರ್ವರು ಕಾರಣರಾಗಿದ್ದಾರೆ. ಚುನಾವಣೆ ದಿನದಂದು ಶಾಂತಿಯುತ ವಾತಾವರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
Related Articles
Advertisement