Advertisement

ಚುನಾವಣಾ ಸಿಬ್ಬಂದಿಯ ಅಂಚೆ ಮತವೇ ತಿರಸ್ಕಾರ

03:46 PM May 17, 2023 | Team Udayavani |

ನೆಲಮಂಗಲ: ಚುನಾವಣೆಯಲ್ಲಿ ಜನರಿಗೆ ಮತದಾ ನದ ಅರಿವು ಮೂಡಿಸುವ ಜತೆ ಮತದಾನದಿಂದ ಮತ ಎಣಿಕೆವರೆಗೂ ಕೆಲಸ ಮಾಡುವ ಸಿಬ್ಬಂದಿಗೆ ಮತದಾನದ ಸೂಕ್ತ ವಿಧಾನ ತಿಳಿಯದಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.

Advertisement

ಚುನಾವಣಾ ಆಯೋಗ ಈ ಬಾರಿ ಪ್ರತಿವರ್ಷದಂತೆ ಅಂಚೆ ಮತದಾನ ಮಾಡಲು ಚುನಾವಣೆಯ ಕರ್ತವ್ಯ ಸಿಬ್ಬಂದಿಗಳಿಗೆ ಅವಕಾಶ ನೀಡಲಾಗಿತ್ತು, ಮತದಾನ ಮಾಡಿಸಲು ಅರಿವು ಮೂಡಿಸುವ ಸಿಬ್ಬಂದಿಗಳೇ ಮತದಾನ ಮಾಡಲು ಮುಂದಾಗುತ್ತಿಲ್ಲ ಎಂಬ ಮೇಲಾಧಿಕಾರಿಗಳ ಆರೋಪದ ನಡುವೆ ಮತ ದಾನ ಮಾಡಿದ ಕೆಲ ಸಿಬ್ಬಂದಿಗಳು ಕೂಡ ಸರಿಯಾದ ವ್ಯವಸ್ಥೆಯಲ್ಲಿ ಮತದಾನ ಮಾಡದಿರುವುದು ಅಂಚೆಮತಗಳ ತಿರಸ್ಕಾರಕ್ಕೆ ಕಾರಣವಾಗಿದೆ. ಸಿಬ್ಬಂದಿಗಳಿಗಿಲ್ಲ ಜಾಗೃತಿ: ಪ್ರತಿ ಚುನಾವಣೆಯಲ್ಲಿ ಅಂಚೆ ಮತದಾನಗಳು ಅತಿ ಹೆಚ್ಚು ತಿರಸ್ಕಾರವಾಗುತ್ತಿ ದ್ದರು ಸಹ ಚುನಾವಣಾ ಆಯೋಗ ಸಿಬ್ಬಂದಿಗಳಿಗೆ ಸರಿಯಾದ ತರಬೇತಿ ನೀಡುತ್ತಿಲ್ಲ ಎಂಬುದು ಕೆಲವರ ಆರೋಪವಾಗಿದೆ.

ಸಿಬ್ಬಂದಿಗಳೇ ಮತದಾನದ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ಮಾಡುತ್ತಿರುವುದು ಸಾರ್ವಜ ನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಮುಂದಿನ ಚುನಾವಣೆಯಲ್ಲಿ ಸಿಬ್ಬಂದಿಗಳ ಮತ ತಿರಸ್ಕಾರವಾಗದಂತೆ ಜಾಗೃತಿ ಮೂಡಿಸಲಿ.

ಎಲ್ಲೆಲ್ಲಿ, ಎಷ್ಟೆಷ್ಟು ಅಂಚೆ ಮತ ತಿರಸ್ಕಾರ ಆಗಿದೆ?: ಚುನಾವಣೆ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳೇ ಅತಿಹೆಚ್ಚು ಅಂಚೆ ಮತದಾನ ಮಾಡಿದ್ದು ನೆಲಮಂಗಲದಲ್ಲಿ 1169 ಅಂಚೆ ಮತದಾನ ಮಾಡಿದರೆ 487ಮತ ತಿರಸ್ಕಾರ, ಹೊಸಕೋಟೆಯಲ್ಲಿ 1148 ಅಂಚೆಮತದಾನ ದಲ್ಲಿ 114 ಮತ ತಿರಸ್ಕಾರ, ದೇವನಹಳ್ಳಿಯ 998 ಅಂಚೆ ಮತದಾನದಲ್ಲಿ 176 ಮತ ತಿರಸ್ಕಾರವಾಗಿದೆ. ಚುನಾವಣೆಯಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಸಿಬ್ಬಂದಿಗೆ ಸರಿಯಾದ ವ್ಯವಸ್ಥೆಯಲ್ಲಿ ಮತದಾನ ಮಾಡದಿರುವುದು ಚುನಾವಣಾ ಆಯೋಗದ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಾಗಿದೆ.

ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಚುನಾವಣೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳೇ ಅಂಚೆ ಮತದಾನ ತಿರಸ್ಕಾರವಾಗುವಂತೆ ಮತದಾನ ಮಾಡಿರುವುದು ಬೇಸರದ ಸಂಗತಿ, ಇಂತಹವರಿಂದ ಚುನಾವಣಾ ಆಯೋಗ ಕೆಲಸ ಮಾಡಿಸಿದರೇ ಮತದಾನಕ್ಕೆ ಗೌರವ ಬರುವುದಿಲ್ಲ, ಬುದ್ದಿವಂತರು, ವಿದ್ಯಾವಂತರು ದಡ್ಡರಂತೆ ವರ್ತಿಸುವುದು ಸರಿಯಲ್ಲ. – ಗೋವಿಂದರಾಜು, ಮತದಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next